ಮುಲ್ಕಿ ನಗರ: ಕೊರೋನ ಹರಡುವ ಕೇಂದ್ರವನ್ನಾಗಿ ಮಾಡುತ್ತಾ ಈ ಕಂಪೆನಿ..!?

ಮುಲ್ಕಿ : ನಿಮಗೆ ತಿಳಿಯದ ಸುದ್ದಿ ಇದು.ಮುಲ್ಕಿ ಇದು  ಕೊರೋನ ಮಾಹಾಮಾರಿ ಹರಡುವ ಕೇಂದ್ರವಾಗಬಹುದು ಎಚ್ಚರ ಜನರೇ ಎಚ್ಚರ. ಸೈಲೆಂಟ್ ಆಗಿ  ಕಾನೂನು ಬಾಹಿರ ವಾದ ಕೆಲಸ ಮಾಡುತ್ತಿದೆ ಈ ಕಂಪೆನಿ. ಯಾವುದೇ ನಿಯಮಗಳನ್ನು ಪಾಲಿಸದೆ ವಾಯು ಮಾಲಿನ್ಯದ ಜೊತೆಗೆ ಕೊರೋನ ಮಾಹಾಮಾರಿಯನ್ನು ತನ್ನ ಕಂಪೆನಿಯ ಕೆಲಸಗಾರರ ಜೊತೆಗೆ ಮುಲ್ಕಿ ಪರಿಸರಕ್ಕೆ ಹರಡುವ ಕಾರ್ಯ ನಡೆಸುತ್ತಿದೆಯಾ ಎನ್ನುವ ಅನುಮಾನ ಹುಟ್ಟಿ ಹಾಕಿದೆ. ಇಲ್ಲಿ ಕೆಲಸ ಮಾಡುವ 30ಕ್ಕೂ ಹೆಚ್ಚು ಜನರಿಗೆ ತಮಗೆ ಕೊರೋನದಿಂದ ರಕ್ಷಣೆ ಸೌಲಭ್ಯಗಳು ಇಲ್ಲ ಎನ್ನುವುದು ಇಲ್ಲಿಯ ಕೆಲಸಗಾರರ ಆರೋಪ.

tru 1

ಈ ಕಂಪೆನಿಯು ಮುಲ್ಕಿಯ ಪರಿಸರದಲ್ಲಿ ತಲೆ ಎತ್ತುವ ಸಂದರ್ಭದಲ್ಲಿ ಸಾರ್ವಜನಿಕರ ವಿರೋಧವನ್ನು ಎದುರಿಸಿತು. ಬಳಿಕ ವಾಯುಮಾಲಿನ್ಯ ಕೆಟ್ಟ ವಾಸನೆಯನ್ನು ಸಹಿಸದೆ ಈ ಕಂಪೆನಿಯ ವಿರುದ್ಧ ನಗರಸಭೆಗೆ ದೂರು ನೀಡಿರುವುದನ್ನು ಇಲ್ಲಿ ನೆನಪಿಸಬಹುದು. ಆದರೆ ಇದೀಗ ಮತ್ತೆ ಜನರು ಈ ಕಂಪೆನಿಯ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ದಾಖಲೆಯನ್ನು ನೀಡುವಂತೆ  ಕೇಳಿದಾಗ ಹಲವಾರು ವಿಡಿಯೋಗಳು ಟ್ರೂ  ನ್ಯೂಸ್ ಗೆ  ಲಭ್ಯವಾಗಿದೆ. 

tr

ಲಾಕ್ ಡೌನ್ ಮಾಡುವ ಮೊದಲು ಈ ಕಂಪೆನಿಯ ಬಗ್ಗೆ ಮುಲ್ಕಿ ನಗರ ಪಂಚಾಯತ್ ಯಾವ ರೀತಿಯ ಕಟ್ಟು ನಿಟ್ಟಿನ  ಕ್ರಮ ಜರಗಿಸಿದೆ ಎಂದು ಒಮ್ಮೆ ಗಮನಿಸ ಬೇಕು. ಯಾಕೆಂದರೆ ಜನರಿಗಿಂತ ಕೊರೋನ ಹರಡುವ ಮೂಲ ಈ ಸಂಸ್ಥೆ ಎನ್ನುತ್ತಾರೆ ಜನರು. ಜನರು ಸಂಚರಿಸುವ ವಾಹನ ವಶಪಡಿಸಿಕೊಂಡು ಕೊರೋನ ನಿಯಂತ್ರಣ ಮಾಡುವುದು ಒಂದೇ ಮಾರ್ಗವಲ್ಲ . ಕೊರೋನ ಹರಡಿಸುವ ಕಂಪೆನಿಯ ಬಗ್ಗೆ ಗಮನಹರಿಸಿ ಇಲ್ಲವಾದರೆ ಕೊರೋನ ಸೋಂಕಿತರ ಸಂಖ್ಯೆ ಮುಲ್ಕಿಗೆ ಸಾವಿರದ ಗಡಿಯನ್ನು ದಾಟಿಸುತ್ತದೆ ಎಚ್ಚರ ಇನ್ನಾದರು ಗಂಭೀರವಾಗಿ ಪರಿಗಣಿಸಿ ಇದು ಸಾರ್ವಜನಿಕರ ಕೂಗು.

ಈ ಕಂಪೆನಿಯ ಕರ್ಮ ಕಾಂಡ ನೋಡಿದರೆ ಯಾರಿಗೂ ಭಯಹುಟ್ಟದೆ ಇರದು ಅಂತಹ ಭಯಾನಕ ಸತ್ಯ ನಿಮ್ಮ ಮುಂದೆ ಬಯಲು ಮಾಡುತ್ತದೆ. ಟ್ರೂ ನ್ಯೂಸ್. Just watch now 

  • ಟ್ರೂ ನ್ಯೂಸ್ ಹರೀಶ್ ಮುಲ್ಕಿ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.