ಜಿಲ್ಲಾ ಸುದ್ದಿಗಳು

ಎರಡನೇ ಅತಿ ಉದ್ದದ ಸಿಗಂಧೂರು ತೂಗು ಸೇತುವೆ ಲೋಕಾರ್ಪಣೆ

ಸಾಗರ: ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆಯಾಗಿರುವ ಸಿಗಂಧೂರು ಸೇತುವೆ  ಇಂದು ಲೋಕಾರ್ಪಣೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆ ಉದ್ಘಾಟಿಸಿದ್ದಾರೆ. ಶಿವಮೊಗ್ಗದ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣವಾಗಿರುವ ಸೇತುವೆಯ ವೆಚ್ಚ ಸುಮಾರು 473 ಕೋಟಿ ರೂ. ಎಂದು ಹೇಳಲಾಗಿದೆ. ಮಲೆನಾಡ ಭಾಗದ ಜನರ ಕನಸು ಪೂರ್ಣಗೊಂಡಿದೆ.

ಲಿಂಗಮನಕ್ಕಿ ಜಲಾಶಯದ ಬಳಿಕ ಸಾಗರ ತಾಲೂಕಿನ ತುಮರಿ ಗ್ರಾ.ಪಂ. ಅನೇಕ ಹಳ್ಳಿಗಳಿಗೆ ಲಾಂಚ್ ಗಳೇ ಸಂಪರ್ಕ ಸಾಧನವಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಮಾತ್ರ ಲಾಂಚ್ ಸೇವೆ ಇತ್ತು. ಸಂಜೆ ನಂತರ ಈ ಗ್ರಾಮಗಳಿಗೆ ಸಂಪರ್ಕ ಕೊಂಡಿ ಸಾಗರಕ್ಕೆ ಇರಲಿಲ್ಲ. ಇದೀಗ ಈ ಸೇತುವೆ ಗ್ರಾಮಸ್ಥರಿಗೆ ದೊಡ್ಡ ಅನುಕೂಲರವಾಗಿದೆ. ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಶಂಕುಸ್ಥಾಪನೆ 2018 ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಡಿದ್ದರು. ಈ ಈ ಸೇತುವೆಯನ್ನು ಅವರೇ ಲೋಕಾರ್ಪಣೆ ಮಾಡಿದ್ದಾರೆ.

ಸಿಗಂದೂರು ಸೇತುವೆಯ ಲೋಕಾರ್ಪಣೆ ಬಳಿಕ ಮಧ್ಯಾಹ್ನ 12 ಗಂಟೆಗೆ ಸಾಗರದ ನೆಹರು ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಂಜೂರಾಗಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಕೇಂದ್ರ ಸಚಿವ ಗಡ್ಕರಿ ಅವರು ಚಾಲನೆ ಕೂಡ ನೀಡಿದ್ದಾರೆ. 625 ರೂ. ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ 369 ಇ -ಸಾಗರದಿಂದ ಮರುಕುಟಿಕದ ವರೆಗೆ ಸಾಗರ ನಗರದ ಬೈಪಾಸ್ ಸೇರಿ ದ್ವಿಪಥ ಸಂಪರ್ಕ ರಸ್ತೆಯ ಶಂಕು ಸ್ಥಾಪನಾ ಸಮಾರಂಭ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ರೂ,2056 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ.

ಸೇತುವೆಯು ಸುಮಾರು 2.25 ಕಿಲೋಮೀಟರ್‌ ಉದ್ದವಿದ್ದು, 11 ಮೀಟರ್ ರಸ್ತೆ ಅಗಲವಾಗಿದೆ. ಒಟ್ಟು 17 ಪಿಲ್ಲರ್‌ ಗಳನ್ನು ಹೊಂದಿರುವ ಈ ಸೇತುವೆಯು, ಕೇಬಲ್‌-ಸ್ಟೇಡ್‌ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಇದು ಎಕ್‌ಸಟ್ರಾಡೋಸ್ಡ್‌‍ ಬ್ಯಾಲೆನ್‌ಸ್ಡ ಕ್ಯಾಂಟಿಲಿವರ್‌ ಸೇತುವೆ ವಿನ್ಯಾಸವನ್ನು ಹೊಂದಿದೆ. ದೇಶದಲ್ಲೇ ಮೊದಲನೆ ಅತಿ ದೊಡ್ಡ ಕೇಬಲ್ ಹಿಡಿತದ ಸೇತುವೆ ಗುಜರಾತ್ ನ ದ್ವಾರಕಾದಲ್ಲಿದೆ.

ಕಾಮೆಂಟ್ ಬಿಡಿ

Join Us