ಸಂಸ್ಥಾಪಕರ ಸಂಸ್ಮರಣೆ; ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ, ಸನ್ಮಾನ ಕಾರ್ಯಕ್ರಮ
ಉಡುಪಿ: ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಮತ್ತು ದ.ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ ಉಡುಪಿ ಇದರ ಸಂಸ್ಥಾಪಕರ ಸಂಸ್ಮರಣೆ -2025 ದಿನಾಂಕ: 02-11-2025ನೇ ರವಿವಾರ ಪೂರ್ವಾಹ್ನ ಗಂಟೆ 9.30ರಿಂದ ಸ್ಥಳ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ ಕಾಪುನಲ್ಲಿ ನಡೆಯಲಿದೆ.
ಸಂಸ್ಥಾಪಕರ ಸಂಸ್ಕರಣೆ ಕಾರ್ಯಕ್ರಮದ ಪ್ರಯುಕ್ತ ಹದಿನಾರು ಶ್ರೀವೀರಭದ್ರ ದೇವಸ್ಥಾನಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ "ಸ್ಪುರಣ ಪದ್ಮಶಾಲಿ ಕ್ವಿಜ್" 2025, ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸನ್ಮಾನ ಪಡೆಯುವವರು...
ಶ್ರೀ ಮೂಢಗಿರಿ ಕೊಂಚಾಡಿ, ಮಂಗಳೂರು: ಪದ್ಮಶಾಲಿ ಪಿತಾಮಹ ಶ್ರೀ ಬ್ರಹ್ಮಾನಂದರ ನಿಕಟವರ್ತಿಯಾಗಿದ್ದ ಶ್ರೀಯುತರು 1947 ರಿಂದ 1952ರ ವರೆಗೆ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಕಾರ್ಯದರ್ಶಿಯಾಗಿ, 1967 ರಿಂದ 1970ರ ವರೆಗೆ ಅಧ್ಯಕ್ಷರಾಗಿ, 1976 ರಿಂದ 1978ರ ವರೆಗೆ ಕೋಶಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಶ್ರೀಯುತರ ಗೌರವಾರ್ಥ ಶ್ರೀ ಪ್ರಾಣ್ ಕೊಂಚಾಡಿ. ನ್ಯೂ ಡೆಲ್ಲಿ ರವರಿಗೆ ಸನ್ಮಾನ.
ಶ್ರೀ ತಮ್ಮಣ್ಣ ಶೆಟ್ಟಿಗಾರ್ ಕಿನ್ನಿಮುಲ್ಕಿ, ಉಡುಪಿ: ಶ್ರೀಯುತರು 1946ರಲ್ಲಿ ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಗೆ ಮೇಲ್ಪಂಕ್ತಿ ಹಾಕಿದವರು, 1947ರಲ್ಲಿ ಮಹಾಸಭಾದ ಉಪಾಧ್ಯಕ್ಷರಾಗಿ ಕೂಡಾ ಕರ್ತವ್ಯ ನಿರ್ವಹಿಸಿರುತ್ತಾರೆ. ಶ್ರೀಯುತರ ಗೌರವಾರ್ಥ ಅವರ ಪೌತ್ರ ಶ್ರೀ ಜ್ಯೋತಿ ಪ್ರಸಾದ ಶೆಟ್ಟಿಗಾರ್ ಕಿನ್ನಿಮುಲ್ಕಿ ರವರಿಗೆ ಸನ್ಮಾನ.
ಶ್ರೀ ಪೀತಾಂಬರ ದೇರೆಬೈಲ್, ಮಂಗಳೂರು: ಶ್ರೀಯುತರು 1946ರಲ್ಲಿ ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಸ್ಥಾಪಕ ಕಾರ್ಯದರ್ಶಿಯಾಗಿ ಮತ್ತು 1947ರಲ್ಲಿ ಮಹಾಸಭಾದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಶ್ರೀಯುತರ ಗೌರವಾರ್ಥ ಅವರ ಪುತ್ರರಾದ ಶ್ರೀ ದಿನಕರ ದೇರೆಬೈಲ್ ಮಂಗಳೂರು ರವರಿಗೆ ಸನ್ಮಾನ.
ಶ್ರೀ ಎಂ. ಎನ್ .ಟಿ.ಎಸ್. ಮಾಸ್ಟರ್ ಶೇಟ್, ಮಂಗಳೂರು: ಪದ್ಮ ಬ್ರಹ್ಮ ಕಾರ್ಕಳ ಶ್ರೀ ಬ್ರಹ್ಮಾನಂದರ ನಿಕಟವರ್ತಿಯಾಗಿದ್ದ ಶ್ರೀಯುತರು 1946ರಿಂದ 1955ರ ವರೆಗೆ ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಶ್ರೀಯುತರ ಸ್ಮರಣಾರ್ಥ ಅವರ ಪುತ್ರರಾದ ಶ್ರೀವಾದಿರಾಜ ಗುರಿಕಾರ ಮಂಗಳೂರು ರವರಿಗೆ ಸನ್ಮಾನ.
ಶ್ರೀ ಕಾಂತು ಶೆಟ್ಟಗಾರ್. ಸುರತ್ಕಲ್ : ಶ್ರೀಯುತರು 1946ರಲ್ಲಿ ದ.ಕ. ಜಿಲ್ಲಾ ಸದ್ಮಶಾಲಿ ಮಹಾಸಭಾದ ಸ್ಥಾಪಕ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ ಶ್ರೀಯುತರ ಗೌರವಾರ್ಥ ಅವರ ಪಾತ್ರರಾದ ಶ್ರೀ ದಿನಕರ ಶೆಟ್ಟಿಗಾರ್ ಬೆಂಗಳೂರು ರವರಿಗೆ ಸನ್ಮಾನ.
ಶ್ರೀ ಬೂದ ಶೆಟ್ಟಿಗಾರ್ ಬನ್ನಂಜೆ, ಉಡುಪಿ: ಶ್ರೀಯುತರು 1948ರಲ್ಲಿ ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಉಪಾಧ್ಯಕ್ಷರಾಗಿ 1950 ರಿಂದ 1954ರ ವರೆಗೆ ಅಧ್ಯಕ್ಷರಾಗಿ 1956ರಿಂದ 1958ರ ವರೆಗೆ ಮಹಾಸಭಾದ ಕೋಶಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಶ್ರೀಯುತರ ಗೌರವಾರ್ಥ ಅವರ ಪುತ್ರಿ ಶ್ರೀಮತಿ ರತ್ನ ಶೆಟ್ಟಿಗಾರ್ ಬನ್ನಂಜೆ ರವರಿಗೆ ಸನ್ಮಾನ.
ಕಾಮೆಂಟ್ ಬಿಡಿ