ಕ್ರೈಂ

ಕಿನ್ನಿಗೋಳಿ: ಬರ್ತಡೇ ಸೆಲೆಬ್ರೇಷನ್ ನೆಪದಲ್ಲಿ ಅಪ್ರಾಪ್ತ ಹುಡುಗಿಯ ಅತ್ಯಾಚಾರ

ಮುಲ್ಕಿ: ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳನ್ನು ಬರ್ತಡೇ ಸೆಲೆಬ್ರೇಷನ್ ನೆಪದಲ್ಲಿ ಕರೆದೊಯ್ದ ಅತ್ಯಾಚಾರ ಮಾಡಿರುವ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ.ಅತ್ಯಾಚಾರದಂತಹ ಅಮಾನವೀಯ ಕೃತ್ಯ

ಈ ಬಗ್ಗೆ ಅಪ್ರಾಪ್ತ ವಯಸ್ಸಿನ ಹುಡುಗಿಯ ತಾಯಿ ದೂರು ನೀಡಿದ್ದು ಪ್ರಕರಣ ದಾಖಲಾಗುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬರ್ತಡೇ ದಿನ ಬಾಲಕಿ ಏಕಾಏಕಿ ನಾಪತ್ತೆಯಾಗಿದ್ದು ತಾಯಿ ಮುಲ್ಕಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬರ್ತಡೇ ಸೆಲೆಬ್ರೇಷನ್ ನೆಪದಲ್ಲಿ ಆರೋಪಿ ಅಪ್ರಾಪ್ತ ಹುಡುಗ ಸಹಿತ ಇತರ ಮೂವರ ಬೆಂಬಲದೊಂದಿಗೆ ಹುಡುಗಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿರುವುದಾಗಿ ಎನ್ನಲಾಗಿದೆ. ಅಪ್ರಾಪ್ತ ಹುಡುಗರ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಹದಿನೈದರಿಂದ ಇಪ್ಪತ್ತೈದರ ವಯೋಮಿತಿಯ ನಡುವೆ ಹಾರ್ಮೋನುಗಳ ಪ್ರಭಾವವು ಗರಿಷ್ಠ ಮಟ್ಟದಲ್ಲಿರಬಹುದು. ಬುದ್ಧಿಶಕ್ತಿಯನ್ನು ಬೆಳೆಸಿ, ಕ್ರೀಡೆ, ಕಲೆ, ಸಂಗೀತ ಮತ್ತು ಶಿಕ್ಷಣದಂತಹ ಬೇರೆ ಬೇರೆ ಅಭಿವ್ಯಕ್ತಿಗಳನ್ನು ಜೀವನದಲ್ಲಿ ತಂದರೆ, ಯುವಜನರಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅನೇಕ ಮಾರ್ಗಗಳಿರುತ್ತವೆ. ಅಂತಹವುಗಳೇನು ಇಲ್ಲದಿದ್ದು, ನೀವು ಕೇವಲ ಹಾರ್ಮೋನುಗಳ ಪ್ರಭಾವದಲ್ಲಿದ್ದರೆ, ಹಳ್ಳಿಯಿಂದ ನಗರಕ್ಕೆ ಬಂದು ಯುವತಿಯರನ್ನು ನೋಡಿದಾಗ, ಫಿಲ್ಮ್-ಗಳಲ್ಲಿ ನೋಡುತ್ತಿದಂತಹ ಜನರೀಗ ರಸ್ತೆಯಲ್ಲಿ ನಡೆದಾಡುತ್ತಿರುವಾಗ, ಯುವಕರ ತಲೆ ಕೆಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲೆಡೆ ನೀವು ಮದ್ಯವನ್ನು ಪ್ರೋತ್ಸಾಹಿಸುತ್ತಿದ್ದೀರಿ ಒಳಗೆ ಎರಡು ಹನಿ ಮದ್ಯ ಸೇರಿತೆಂದರೆ, ಅವರುಗಳು ಸಂಪೂರ್ಣವಾಗಿ ಹುಚ್ಚರಾಗುತ್ತಾರೆ. ಯಾರೂ ನೋಡುತ್ತಿಲ್ಲವೆಂದು ಅವರಿಗನಿಸಿದರೆ, ಯಾರ ಮೇಲಾದರೂ ಎರಗುತ್ತಾರೆ. ಕೇವಲ ಶಿಕ್ಷೆಯ ಕಡೆಯಷ್ಟೆ ಗಮನ ಹರಿಸುವುದನ್ನು ಬಿಟ್ಟು, ಈ ವಿಷಯದ ಬಗ್ಗೆ ಚರ್ಚಿಸಿ, ಅದನ್ನು ಉದ್ದೇಶಿಸುವ ಸಮಯ ಬಂದಿದೆ.

ಕಾಮೆಂಟ್ ಬಿಡಿ

Join Us