ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಏಳನೇ ವರ್ಗದ ವಿದ್ಯಾರ್ಥಿನಿ ಗರ್ಭಿಣಿ
ಬಾಗಲಕೋಟೆ: ಇಳಕಲ್ ತಾಲೂಕಿನ ಗ್ರಾಮದ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಏಳನೇ ವರ್ಗದ ವಿದ್ಯಾರ್ಥಿನಿ ಎರಡು ತಿಂಗಳ ಗರ್ಭಿಣಿಯಾಗಿದ್ದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆಯಲ್ಲಿ ಕಲಿಯುತ್ತಿರುವ ಎಂಟನೇ ವರ್ಗದ ವಿದ್ಯಾರ್ಥಿಯಾಗಿದ್ದು ಬಾಲಕಿಯನ್ನು ಉಪಾಯವಾಗಿ ಗೆಳೆತನ ಮಾಡಿಕೊಂಡು ಅವಳ ಜೊತೆಗೆ ಶಾಲೆಯಲ್ಲಿಯೇ ಎರಡು-ಮೂರು ಬಾರಿ ದೇಹ ಸಂಪರ್ಕ ಮಾಡಿದ್ದಾನೆ ಅಲ್ಲದೇ ತನ್ನ ಅಕ್ಕನ ಮದುವೆ ಇದೆ ಹೋಗೋಣ ಬಾ ಎಂದು ಮಾರ್ಗ ಮಧ್ಯದ ಹೊಲದಲ್ಲಿ ದೇಹ ಸಂಪರ್ಕ ಮಾಡಿದ್ದಾನೆ.
ಸದ್ಯ ಬಾಲಕಿ ಎರಡು ತಿಂಗಳು ಗರ್ಭಿಣಿಯಾಗಿದ್ದು ಅವಳ ಪಾಲಕರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್‌ಐ ಮಲ್ಲಿಕಾರ್ಜುನ ಸತ್ತಿಗೌಡರ ತನಿಖೆ ನಡೆಸಿದ್ದಾರೆ. ಯಾದಗಿರಿ ವಸತಿ ಶಾಲೆಯಲ್ಲಿ ಬಾಲಕಿಯೊಬ್ಬಳ ಹೆರಿಗೆಯಾಗಿದ್ದು, ಶಿವಮೊಗ್ಗದಲ್ಲಿ ಸಹ ಇಂತಹದೇ ಘಟನೆ ನಡೆದು ಅಲ್ಲಿಯೂ ಬಾಲಕಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿರುವ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಕಾಮೆಂಟ್ ಬಿಡಿ