ಬಾಹುಬಲಿ ಸ್ವಾಮಿಯ ಏಕಶಿಲಾ ಮೂರ್ತಿಗೆ ಜಲಾಭಿಷೇಕ ಸಹಿತ ಇತರ ದ್ರವ್ಯಗಳಿಂದ ಮಸ್ತಕಾಭಿಷೇಕ
ಉಡುಪಿ:ಉಡುಪಿ ಜಿಲ್ಲಾ ಕಾರ್ಕಳ ತಾಲೂಕು ಬಜಗೋಳಿಯ ಧರ್ಮಶಾಲಾ ತೀರ್ಥಕ್ಷೇತ್ರದಲ್ಲಿ ಭಗವಾನ್ ೧೦೦೮ಶ್ರೀಶ್ರೀ ಶ್ರೀ ಬಾಹಬಲಿ ಸ್ವಾಮಿ ಭಗವಾನ್ ಶ್ರೀ ಶ್ರೀ ಶ್ರೀಮುನಿಸುವೃತ ಸ್ವಾಮಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸಾನಿಧ್ಯದಲ್ಲಿ ಜಗದ್ಗುರು ಭಾರತ ಭೂಷಣ ಶ್ರೀಮದಭಿನವ ಡಾ।ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಮಹಾಸ್ವಾಮಿಗಳು,ಜೈನ ಮಠ ಮೂಡುಬಿದಿರೆ ಅವರ ದಿವ್ಯ ಮಾರ್ಗದರ್ಶನದೊಂದಿಗೆ ಬಾಹುಬಲಿ ಸ್ವಾಮಿಯ ಏಕಶಿಲಾ ಮೂರ್ತಿಗೆ ಜಲಾಭಿಷೇಕ ಸಹಿತ ಇತರ ದ್ರವ್ಯಗಳಿಂದ ಮಸ್ತಕಾಭಿಷೇಕ ಪುಣ್ಯ ಕಾರ್ಯ ಜರುಗಿತು.ಸಾವಿರಾರು ಮಂದಿ ಜಿನಭಕ್ತರು ಮತ್ತು ಊರ ಪರವೂರ ಮಹನೀಯರು ಆ ಭಾವುಕ ಕ್ಷಣವನ್ನು ಕಣ್ತುಂಬಿಸಿಕೊಂಡರು.
ಬಾಹುಬಲಿಯ ವಿಗ್ರಹವನ್ನು ಈ ಕ್ಷೇತ್ರದಲ್ಲಿ ಇತ್ತೀಚಿನ ವರ್ಷದಲ್ಲಷ್ಟೇ ಪ್ರತಿಷ್ಠಾಪನೆ ಮಾಡಲಾಗಿತ್ತು. ಮೂಡುಬಿದಿರೆ ಜೈನ ಮಠದ ಮಹಾಸ್ವಾಮಿಗಳಾಗಿರುವ ಡಾ।ಚಾರುಕೀರ್ತಿ ಭಟ್ಟಾರಕ ಪಟ್ಚಾಚಾರ್ಯ ಅವರ ಮನಸ್ಸಂಕಲ್ಪದಂತೆ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಧರ್ಮಶಾಲಾ ತೀರ್ಥಕ್ಷೇತ್ರದ ಎಲ್ಲ ನಡವಳಿಕೆಗಳಿಗೂ ಡಾ।ಮಹಾಸ್ವಾಮಿಗಳ ನಿರ್ದೇಶನವಿರುವುದು.
-ವಿ. ಕೆ. ವಾಲ್ಪಾಡಿ
ಕಾಮೆಂಟ್ ಬಿಡಿ