ವಿದ್ಯಾರ್ಥಿನಿ ತಡವಾಗಿ ಬಂದಿದ್ಯಾಕೆ ಟ್ರಾಫಿಕ್ ಕಾರಣ ಫ್ಯಾಕ್ಟ್ಚೆಕ್
ಬೆಂಗಳೂರು:ಪರೀಕ್ಷೆ ಇದೆ ಅಂತಾ ಮೊದಲೇ ಗೊತ್ತಿತ್ತು. ಬೇರೆ ದಿನ ಪದಗ್ರಹಣ ಕಾರ್ಯಕ್ರಮ ಇಟ್ಟುಕೊಳ್ಳಬಹುದಿತ್ತಲ್ವಾ ಎಂದು ಪ್ರಶ್ನಿಸಿದ್ರು. ಇದಕ್ಕೆ ಬಿಜೆಪಿ ನಾಯಕರು ಸಹ ಧ್ವನಿಗೂಡಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಸಾಲು ಸಾಲು ಆರೋಪ ಕೇಳಿಬಂದ ಬೆನ್ನಲ್ಲೇ ಬೆಂಗಳೂರು ಟ್ರಾಫಿಕ್ ಪೊಲೀಸರು, ವಿದ್ಯಾರ್ಥಿನಿ ತಡವಾಗಿ ಬಂದಿದ್ಯಾಕೆ ಎನ್ನುವುದನ್ನು ಪತ್ತೆ ಮಾಡಿದ್ದು, ತಡವಾಗಿದ್ದಕ್ಕೆ ಟ್ರಾಫಿಕ್ ಕಾರಣವನ್ನು ಎನ್ನುವುದನ್ನು ಫ್ಯಾಕ್ಟ್ಚೆಕ್ ಮಾಡಿದ್ದಾರೆ.
ನೀಟ್ ಮರು ಪರೀಕ್ಷೆ ನೀಟ್ ಆಗಿ ಮುಗಿದಿದೆ. ಆದ್ರೆ, ಬೆಂಗಳೂರಿನಲ್ಲಿ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದವರಿಗೆ ಪ್ರವೇಶ ಸಿಕ್ಕಿಲ್ಲ ಅನ್ನೋದನ್ನ ಹೊರತುಪಡಿಸಿದ್ರೆ. ಯಾವುದೇ ಅಡೆತಡೆ, ಲೋಪದೋಷವಿಲ್ಲದೇ ಪರೀಕ್ಷೆ ಸುಗಮವಾಗಿ ಮುಗಿದೆ.
ಬೆಂಗಳೂರಿನಲ್ಲಿ ನೀಟ್ ಮರುಪರೀಕ್ಷೆಗೆ ವಿದ್ಯಾರ್ಥಿ 3 ನಿಮಿಷ ತಡವಾಗಿ ಬಂದಿದ್ದಕ್ಕೆ ಪ್ರವೇಶ ನಿರಾಕರಿಸಿದ ವಿಡಿಯೋ ವೈರಲ್ ಆಗಿತ್ತು. ಬಿಕೆ ಹರಿಪ್ರಸಾದ್ ಅಧಿಕಾರ ಸ್ವೀಕಾರ ಕಾರ್ಯಕ್ರಮದದಿಂದ ಟ್ರಾಫಿಕ್ ಜಾಮ್ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಟ್ರಾಫಿಕ್ ಕಾರಣದಿಂದಲೇ ಪರೀಕ್ಷಗೆ ತಡವಾಯ್ತು ಎಂದು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಆದರೆ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಸಂಚಾರಿ ಪೊಲೀಸರು.ಸಿಸಿಟಿವಿಯ ದೃಶ್ಯಗಳ ಪ್ರಕಾರ, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 1:30ಕ್ಕೆ ಕಟ್ ಆಫ್ ಟೈಮ್ ಇತ್ತು. ಆದ್ರೆ, ಈ ವಿದ್ಯಾರ್ಥಿನಿ ತನ್ನ ಆರ್ ಟಿ ನಗರದ ಮನೆಯಿಂದ 12:57ಕ್ಕೆ ಹೊರಟಿದ್ದು, ಪರೀಕ್ಷಾ ಕೇಂದ್ರದ ಬಳಿ 1:33ಕ್ಕೆ ಆಗಮಿಸಿದ್ದಾರೆ ಎನ್ನುವುದು ಪೊಲೀಸರ ಫ್ಯಾಕ್ಟ್ಚೆಕ್ ಮೂಲಕ ತಿಳಿದುಬಂದಿದೆ.

ಪರೀಕ್ಷೆಯಿಂದ ಹೊರಗುಳಿಯಲು ಟ್ರಾಫಿಕ್ ಕಾರಣ ಅಲ್ಲ. ಸಿಸಿಟಿವಿ ಪರಿಶೀಲನೆ ವೇಳೆ ಪರೀಕ್ಷೆಗೆ ಹೊರಡುವ ಸಮಯದಲ್ಲಿ ಟ್ರಾಫಿಕ್ ಸಾಮನ್ಯವಾಗಿತ್ತು. ಪೊಲೀಸ್ ಸಿಬ್ಬಂದಿ ಅಗತ್ಯವಿರುವ ಕಡೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ಪರೀಕ್ಷಾ ಕೇಂದ್ರಕ್ಕೆ ಹೊರಡಲು ಆಯ್ಕೆ ಮಾಡಿಕೊಂಡ ಮಾರ್ಗದಿಂದ ವಿಳಂಬವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳು ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ತಪ್ಪು ಮಾರ್ಗವನ್ನು ಆಯ್ಕೆ ಮಾಡಿದ್ದೇ ವಿಳಂಬಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಮೆಂಟ್ ಬಿಡಿ