ಮುಲ್ಕಿ: ಬಪ್ಪನಾಡು ಜಂಕ್ಷನ್ ಬಳಿ ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಮುಲ್ಕಿ: ಬಪ್ಪನಾಡು ಜಂಕ್ಷನ್ ಬಳಿ ಭೀಕರ ಅಪಘಾತ ಬೈಕ್ ಸವಾರ ದಾವಣಗೆರೆಯ ಪ್ರಭುಲಿಂಗ.ಜಿ (ವ.32) ಸ್ಥಳದಲ್ಲಿಯೇ ಸಾವು.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಗೊಂಡ ಬಳಿಕ ಮುಲ್ಕಿ ಸಿಟಿ ಡೇಂಜರ್ ಜೋನ್ ಆಗಿ ಹೋಗಿದೆ. ಮುಲ್ಕಿ ಬಸ್ ನಿಲ್ದಾಣ, ಬಪ್ಪನಾಡು ಜಂಕ್ಷನ್, ವಿಜಯ ಸನ್ನಿಧಿ ಇವೆಲ್ಲ ಜಂಕ್ಷನ್ ಅಪಾಯಕಾರಿಯಾಗಿ ಪರಿಣಮಿಸಿದ್ದು ಅನೇಕರ ಪ್ರಾಣ ಬಲಿ ಪಡೆದುಕೊಂಡಿದೆ.

ಕೆಲವು ದಿನಗಳ ಹಿಂದೆ ಅಷ್ಟೇ ಶಶಿಕುಮಾರ್ ಎಂಬ ಯುವಕನ ಬಲಿಪಡಿದುಕೊಂಡರೆ ಇದೀಗ ದಾವಣಗೆರೆಯ ಪ್ರಭುಲಿಂಗ.ಜಿ (ವ.32) ಮತ್ತೊಂದು ಯುವಕನ ಬಲಿಯಾಗಿದೆ. ಇನ್ನೆಷ್ಟು ಅಮಾಯಕರ ಜೀವ ಬಲಿಯಾಗಬೇಕು?

ದಾವಣಗೆರೆಯ ಪ್ರಭುಲಿಂಗ.ಜಿ ಬೆಂಗಳೂರು ಸಿಸಿ ಕ್ಯಾಮೆರಾದ ಕಂಪನಿಯೊಂದರ ಉದ್ಯೋಗಿಯಾಗಿದ. ಮಂಗಳೂರಿನ ಉರ್ವಸ್ಟೋರ್ ನಲ್ಲಿ ವಾಸವಾಗಿದ್ದು ಇಂದು ಮಂಗಳೂರಿನಿಂದ ಉಡುಪಿಕಡೆಗೆ ತನ್ನ ಕೆಲಸಕ್ಕಾಗಿ ದ್ವಿಚಕ್ರ ವಾಹನ ಹೋಂಡಾ ಶೈನ್ ಬೈಕ್ ನಲ್ಲಿ ಸಂಚರಿಸುತ್ತಿರುವಾಗ ಬಪ್ಪನಾಡ್ ಬಳಿ ಬುಲೆಟ್ ಟ್ಯಾಂಕರ್ ಹಿಂಬದಿಯ ಚಕ್ರಕ್ಕೆ ಸಿಲುಕಿ ಈ ಅಪಘಾತವು ನಡೆದಿದೆ.
ಕಾಮೆಂಟ್ ಬಿಡಿ