ಜಿಲ್ಲಾ ಸುದ್ದಿಗಳು

ರಾಜ್ಯದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ; ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆದೇಶ

ಬೆಂಗಳೂರು : ಮುಖ್ಯಮಂತ್ರಿಗಳು ರಾಜ್ಯದ ಸಚಿವರಿಗೆ ಮಳೆಗಾಲದ ತುರ್ತು ಪರಿಸ್ಥಿತಿ ಮತ್ತು ಪ್ರವಾಹ ನಿರ್ವಹಣೆಗಾಗಿ ತಾತ್ಕಾಲಿಕ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಡಿಸಿಎಂ ಡಾ. ಜಿ. ಪರಮೇಶ್ವರ, ಎಂ.ಬಿ. ಪಾಟೀಲ್ ಸೇರಿದಂತೆ ಪ್ರಮುಖ ಸಚಿವರಿಗೆ ಸೂಕ್ಷ್ಮ ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ. ಇದು ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಸಮನ್ವಯಕ್ಕಾಗಿ ಮಾತ್ರವಾಗಿದ್ದು, ಪೂರ್ಣ ಪ್ರಮಾಣದ ಉಸ್ತುವಾರಿ ಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದೆ.

ಸಚಿವರು ಮತ್ತು ಹಂಚಿಕೆಯಾಗಿರುವ ಜಿಲ್ಲೆಗಳ ವಿವರ ಪಟ್ಟಿ:

  • ಡಾ. ಜಿ. ಪರಮೇಶ್ವರ (ಡಿಸಿಎಂ) - ತುಮಕೂರು ಮತ್ತು ಚಿತ್ರದುರ್ಗ
  • ಕೃಷ್ಣ ಭೈರೇಗೌಡ - ಬೆಂಗಳೂರು ನಗರ ಮತ್ತು ಹಾಸನ
  • ರಾಮಲಿಂಗಾರೆಡ್ಡಿ - ಬೆಂಗಳೂರು ದಕ್ಷಿಣ ಮತ್ತು ಮಂಡ್ಯ
  • ಕೆ.ಹೆಚ್. ಮುನಿಯಪ್ಪ - ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ
  • ಡಾ. ಯತೀಂದ್ರ ಸಿದ್ದರಾಮಯ್ಯ - ಮೈಸೂರು ಮತ್ತು ಚಾಮರಾಜನಗರ
  • ಯು.ಟಿ. ಖಾದರ್- ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ
  • ಎಂ.ಬಿ. ಪಾಟೀಲ್ ವಿಜಯಪುರ ಮತ್ತು ಬಾಗಲಕೋಟೆ
  • ಪ್ರಿಯಾಂಕ್ ಖರ್ಗೆ ಕಲಬುರಗಿ ಮತ್ತು ಯಾದಗಿರಿ
  • ಸತೀಶ್ ಜಾರಕಿಹೊಳಿ ಬೆಳಗಾವಿ, ಧಾರವಾಡ ಮತ್ತು ಹಾವೇರಿ
  • ಕೆ.ಜೆ. ಜಾರ್ಜ್ ಚಿಕ್ಕಮಗಳೂರು ಮತ್ತು ದಾವಣಗೆರೆ
  • ಈಶ್ವರ ಖಂಡ್ರೆ ಬೀದರ್ ಮತ್ತು ಗದಗ
  • ಭೈರತಿ ಸುರೇಶ್ ಕೋಲಾರ ಮತ್ತು ಚಿಕ್ಕಬಳ್ಳಾಪುರ
  • ಡಾ. ಶರಣಪ್ರಕಾಶ್ ಪಾಟೀಲ್ ರಾಯಚೂರು ಮತ್ತು ಕೊಪ್ಪಳ

ಕಾಮೆಂಟ್ ಬಿಡಿ

Join Us