ಜಿಲ್ಲಾ ಸುದ್ದಿಗಳು

ಶ್ರೀ ರಾಮ ಯುವಕ ವೃಂದ,ಗೋಳಿಜೋರ ನೂತನ ಇದರ ಕಟ್ಟಡದ ಶಂಕುಸ್ಥಾಪನೆ

ಗೋಳಿಜೋರ: ಶ್ರೀ ರಾಮ ಯುವಕ ವೃಂದ (ರಿ.), ಗೋಳಿಜೋರ ಇದರ ನೂತನ ಕಟ್ಟಡದ ಭೂಮಿಪೂಜೆಯನ್ನು ಶ್ರೀ ವೇದವ್ಯಾಸ ಉಡುಪ ಕೊಡೆತ್ತೂರು ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿಸಲಾಯಿತು. ಕಟ್ಟಡದ ಶಂಕುಸ್ಥಾಪನೆಯನ್ನು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಸಂಘದ ಗೌರವಾಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಹೆಗ್ಡೆ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಶಯನ್ ಶೆಟ್ಟಿಗಾರ್ ಕುಜಿಂಗಿರಿ, ಸಂಘದ ಗೌರವ ಸಲಹೆಗಾರರಾದ ಶ್ರೀ ಸುಧಾಕರ್ ಶೆಟ್ಟಿ ಸಂಪಿಗೆ, ಡಾ. ಸರಳಾ ಕುಂದರ್, ಶ್ರೀ ಮೋಹನ್ ಕೋಟ್ಯಾನ್, ಶ್ರೀಮತಿ ಸುನಿತಾ ರೋಡ್ರಿಗಸ್, ಶ್ರೀ ಪ್ರಕಾಶ್ ಆಚಾರ್ಯ, ಶ್ರೀ ಶಂಕರ್ ಮಾಸ್ಟರ್ ಗೊಳಿಜೋರ, ಶ್ರೀಮತಿ ಪದ್ಮಿನಿ ವಸಂತ, ಶ್ರೀ ಗಂಗಾಧರ್ ಡಿ ಶೆಟ್ಟಿಗಾರ್, ಶ್ರೀ ರಿಜ್ವಾನ್ ಅಹಮ್ಮದ್, ಶ್ರೀಮತಿ ಜೂಲಿಯಾನಾ ಬಾರ್ಬೋಜಾ, ಶ್ರೀ ರಘು ಗೊಳಿಜೋರ, ಶ್ರೀ ಪ್ರಕಾಶ್ ಶೆಟ್ಟಿಗಾರ್, ಶ್ರೀ ವಿಕ್ರಂ ಶೆಟ್ಟಿ, ಶ್ರೀ ಮಾಧವ ಮುಕ್ಕಾಲ್ತಿ, ಶ್ರೀ ಜಿಯಾವುದ್ದೀನ್ ಪುನರೂರು ಹಾಗೂ ಶ್ರೀ ಯಶವಂತ ಶೆಟ್ಟಿಗಾರ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಶ್ರೀ ರಾಮ ಯುವಕ ವೃಂದದ ವತಿಯಿಂದ ಅಂಗನವಾಡಿ ಮಕ್ಕಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಸರ್ವ ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕಾಮೆಂಟ್ ಬಿಡಿ

Join Us