ಜಿಲ್ಲಾ ಸುದ್ದಿಗಳು

ಪರಿಸರ ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ: ಸಂಗಮೇಶ ಎನ್ ಜವಾದಿ

ಚಿಟಗುಪ್ಪಾ: ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪ್ರಕೃತಿಯನ್ನು ನೀಡುವುದು ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಈ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಪೂರೈಸಬಹುದು ಎಂದು ಪರಿಸರ ಸಂರಕ್ಷಕರು, ಹೋರಾಟಗಾರರಾದ ಸಂಗಮೇಶ ಎನ್ ಜವದಿಯವರು ತಿಳಿಸಿದರು.

ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ತಾಲೂಕು ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಜವಾದಿ ರವರು ಪರಿಸರ ಉಳಿದರೆ ನಾವು ಉಳಿಯುತ್ತೇವೆ, ಪ್ರಕೃತಿ ಮಡಿಲಲ್ಲಿ ನಾವು ಸ್ವಚ್ಛಂದವಾಗಿ ಬದುಕಬೇಕೆಂದರೆ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯಲ್ಲಿ ನಾವು ತೊಡಗಿಸಿಕೊಳ್ಳಬೇಕು. ಆ ವಿಶೇಷ ಸಮಾರಂಭಗಳಲ್ಲಿ ಮತ್ತು ಹುಟ್ಟುಹಬ್ಬ ಆಚರಣೆಗಳಲ್ಲಿ ಕಡ್ಡಾಯವಾಗಿ ಸಸಿಯನ್ನು ನೆಡುವ ಮೂಲಕ ಆಚರಣೆ ಮಾಡಿಕೊಳ್ಳೋದು ಉತ್ತಮ ‌. 

ಪರಿಸರ ಎಲ್ಲಾ ರೀತಿಯಿಂದ ನಮಗೆ ಮುಕ್ತವಾಗಿ ಬದುಕಲು ಅವಕಾಶ ನೀಡಿದೆ ಶುದ್ಧವಾದ ಗಾಳಿ, ಶುದ್ಧವಾದ ನೀರು ನೀಡಿದೆ. ಶುದ್ಧವಾದಂತ ಬದುಕು ನೀಡಿದೆ. ಜೀವನವನ್ನು ನಾವು ಶುದ್ಧವಾಗಿ ಇಟ್ಟುಕೊಳ್ಳಲು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಸದಾ ಕಾಲ ಪ್ರಯತ್ನ ಮಾಡಬೇಕು.ಪರಿಸರದ ಕಾಳಜಿ ಜತೆಗೆ ಪ್ರತಿಯೊಬ್ಬರು ಒಂದೊಂದು ಸಸಿ ನೆಡುವುದರ ಮೂಲಕ ಹಸಿರು ಮನೆ ಪರಿಣಾಮವನ್ನು ತಡೆಗಟ್ಟಿ ಪರಿಸರ ಸಂರಕ್ಷಣೆ ಮಾಡಬೇಕು .ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಪರಿಸರ ಇಲಾಖೆಯೊಂದಿಗೆ ಕೈಜೋಡಿಸುವ ಮೂಲಕ ಪರಿಸರ ರಕ್ಷಣೆಗೆ ನಾವು ಸದಾ ಕಾಲ ನಿಲ್ಲಬೇಕೆಂದು ಜವಾದಿ ಇವರು ತಿಳಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಿಂಗರಾಜ್ ಪಾಟೀಲ್ ಮಾತನಾಡಿ ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು. ಇನ್ನಾದರೂ ಪ್ರತಿಯೊಬ್ಬರು ಮನೆಗೊಂದು ಮರ ಬೆಳೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ವಲಯ ಅರಣ್ಯಾಧಿಕಾರಿ ಶ್ರೀಕಾಂತ ರಾಠೋಡ ಮಾತನಾಡಿ,ಪರಿಸರ ಉತ್ತಮವಾಗಿದ್ದರೆ ಮಾತ್ರ ಪ್ರತಿಯೊಬ್ಬರು ಆರೋಗ್ಯವಂತರಾಗಿರಲು ಸಾಧ್ಯ.ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮನೆ ಸುತ್ತಮುತ್ತ ಮರಗಿಡಗಳನ್ನು ಬೆಳಸಬೇಕು ಎಂದರು. ಸಮುದಾಯದ ವೈದ್ಯಾಧಿಕಾರಿ ವಿಜಯಕುಮಾರ ಹಿರಾಸ್ಕರ್, ಪುರಸಭೆ ಮುಖ್ಯಾಧಿಕಾರಿ ಸತೀಶ, ಅರಣ್ಯಾಧಿಕಾರಿ ಪೂಜಾರಿ, ಪಶು ವೈದ್ಯಾಧಿಕಾರಿ ಶಾಂತವೀರ ಗೋಪಾ ಸೇರಿದಂತೆ ಮುಖ್ಯ ಗುರುಗಳು, ಶಿಕ್ಷಕರು, ಮಕ್ಕಳು, ವಿದ್ಯಾರ್ಥಿನೀಯರು, ಗಣ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾಮೆಂಟ್ ಬಿಡಿ

Join Us