ಜಿಲ್ಲಾ ಸುದ್ದಿಗಳು

ಬಪ್ಪನಾಡು ದೇವಳದ ಎಲ್ಲರ ಅಚ್ಚುಮೆಚ್ಚಿನ ಬಸವ ಕೃಷ್ಣ ಇನ್ನಿಲ್ಲ

ಮುಲ್ಕಿ: ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ದೇವಳದ (18 ವರ್ಷ ಪ್ರಾಯದ ) ಬಸವ ಎಲ್ಲರ ಅಚ್ಚುಮೆಚ್ಚಿನ ಕೃಷ್ಣ. 12 ವರ್ಷಗಳ ಹಿಂದೆ ಶ್ರೀ ದೇವಳಕ್ಕೆ ಭಕ್ತರೊಬ್ಬರು ದಾನವಾಗಿ ನೀಡಿದ್ದರು. ಹಲವು ದಿನಗಳಿಂದ ಕೃಷ್ಣನಿಗೆ ಕಾಡಿದ ಅನಾರೋಗ್ಯ ಸಮಸ್ಯೆ.ಕಳೆದ ಎಂಟು ದಿನಗಳಿಂದ ಆಹಾರ ತ್ಯಜಿಸಿದ್ದ ಬಸವ ಕೃಷ್ಣ.ತೀವ್ರ ಅಸ್ವಸ್ಥಗೊಂಡ ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ಪಶು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣ ಕೊನೆಯ ಸುರಿಯಲಿದ್ದಾನೆ.

ಶ್ರೀ ದೇವಳದ ಜಾತ್ರಾ ಮಹೋತ್ಸವ ಸಹಿತ ಬಲಿ ಉತ್ಸವಗಳಲ್ಲಿ ಭಾಗಿಯಾಗುತ್ತಾ ಸದೃಢ ಶರೀರ ದ ಕೃಷ್ಣ ಕಳೆದ ಎಂಟು ದಿನಗಳಿಂದ ಆಹಾರ ಸೇವಿಸದೆ ಇದ್ದ ಕಾರಣ ಸ್ಥಳೀಯ ಪಶು ವೈದ್ಯ ಡಾ. ಪ್ರಸನ್ನರವರಿಂದ ಚಿಕಿತ್ಸೆ ಪಡೆದಿದ್ದ. ವಾರ ಕಳೆದರೂ ಸಮಸ್ಯೆ ಪರಿಹಾರವಾಗದ ಕಾರಣ ವೈದ್ಯರ ಸಲಹೆಯಂತೆ ಕೃಷ್ಣನನ್ನು ಮಂಗಳೂರು ಪಶು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೃತಕ ಪೈಪ್ ಅಳವಡಿಸಿ ಮಲಮೂತ್ರವನ್ನು ಹೊರ ತೆಗೆಯಲಾಗಿದೆ. ದೇಹದಿಂದ ಕನಿಷ್ಟ ಎಂಟು ಬಕೆಟ್ ನಷ್ಟು ಮೂತ್ರವನ್ನು ತೆಗೆದ ಬಳಿಕ ಕೃಷ್ಣ ಆಹಾರ ಸೇವಿಸಲು ಆರಂಭಿಸಿದ್ದು, ಶೀಘ್ರ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಕೃಷ್ಣ ಕೊನೆಯ ಸುರಿಯಲಿದ್ದಾನೆ. ದೇವಾಲಯದ ವತಿಯಿಂದ ಹಾಗೂ ಭಕ್ತರು ಸೇರಿ ಸಾಂಪ್ರದಾಯಿಕವಾಗಿ ಅಂತಿಮ ವಿಧಿ ವಿಧಾನವನ್ನು ನೆರವೇರಿಸಿದರು.

ಕಾಮೆಂಟ್ ಬಿಡಿ

Join Us