ಜಿಲ್ಲಾ ಸುದ್ದಿಗಳು

ನೈನಾಡಿನ ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ (ರಿ)ಗೆ ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು: ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಬಂಟ್ವಾಳ ತಾಲೂಕು ಪಿಲಾತ್ತಬೆಟ್ಟು ಗ್ರಾಮದನಯನಾಡಿನ ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ (ರಿ) ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. 

ನೂರಾರು ಸಾಮಾಜಿಕ ಸೇವೆಗಳನ್ನು ನಡೆಸಿಕೊಂಡು ಬಂದಿರುವ ಈ ಸಂಸ್ಥೆ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಒಂದು ಗ್ರಾಮದಲ್ಲಿ ಯಾರು ಊಹಿಸದ ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ನಡೆಸಿರುವುದು ಈ ಪ್ರಶಸ್ತಿ ಈ ಸಂಸ್ಥೆಗೆ ಬರಲು ಮುಖ್ಯ ಕಾರಣವಾಗಿದೆ. 

ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಬಗ್ಗೆ ಮಹತ್ಕಾಂಕ್ಷೆಯ ಯೋಜನೆಗಳನ್ನು ಹಾಕಿಕೊಂಡಿರುವ ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ ನಯನಾಡು ತನ್ನ ಸೇವೆಯ ಮೂಲಕ ಈಗ ನಾಡಿನ ಗಮನ ಸೆಳೆದಿದೆ.

ನೆಹರು ಮೈದಾನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರಿಂದ ಟ್ರಸ್ಟಿನ ಗೌರವಾಧ್ಯಕ್ಷ ನೆಲ್ವಿಸ್ಟರ್ ಗ್ಲಾನ್ ಪಿಂಟೋ, ಅಧ್ಯಕ್ಷರಾದ ಡಾನ್ ಪ್ರವೀಣ್ ಕಾಸ್ತಾ, ಕಾರ್ಯದರ್ಶಿ ಅನಿಲ್ ರೋಶನ್. ಅವಿಲ್ ಮೊರಸ್ ಹಾಗೂ ಇತರ ಸದಸ್ಯರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಇವರು 100ಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನಯನಾಡು ಎಂಬ ಗ್ರಾಮೀಣ ಪ್ರದೇಶದಲ್ಲಿ ಮಾಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. 

ಇವರು ಹಮ್ಮಿಕೊಂಡ ಕೆಲವು ಕಾರ್ಯಕ್ರಮಗಳು ಇಂತಿವೆ :-

  • - ಎರಡು ಗ್ರಾಮೀಣ ಪ್ರದೇಶಗಳಿಗೆ (ಕೊಳಕ್ಕೆಬ್ಯೆಲು - ನೈನಾಡು) 600 ಮೀ. ಉದ್ದದ ಸಂಪರ್ಕ ರಸ್ತೆ ನಿರ್ಮಾಣದಲ್ಲಿ   ಮಹತ್ತರ ಪಾತ್ರ
  • - ವಿಕಲಚೇತನರಿಗೆ ಹಾಗೂ ಗಂಭೀರ ರೋಗಿಗಳಿಗೆ ಆರ್ಥಿಕ ಸಹಾಯ.
  • - ಲಾಕ್‌ಡೌನ್‌ ಸಂದರ್ಭದಲ್ಲಿ 110 ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ.
  • - ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ರೂ. 2,00,000/- ವೆಚ್ಚದಲ್ಲಿ Wi-Fi ಅಳವಡಿಕೆ.
  • - ವಿವಿಧ ಶಾಲೆಗಳ ಶಾಲಾ ಆವರಣ ಸ್ವಚ್ಛತೆ ಮತ್ತು ಶಾಲೆಗಳ ಅಭಿವೃದ್ಧಿಗೆ ಹಸಿರು ಬೋರ್ಡ್, ವಿದ್ಯಾರ್ಥಿ ವೇತನ     ವಿತರಣೆ.
  • - ಗ್ರಾಮೀಣ ಭಾಗದ ಮಕ್ಕಳಿಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ರೂ.2,50,000/-ವೆಚ್ಚದಲ್ಲಿ ಪಾರ್ಕ್   ನಿರ್ಮಾಣ.
  • - ಗ್ರಾಮೀಣ ಭಾಗದ ಕೃಷಿಕರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಅನುಕೂಲವಾಗಲು ಮೂರ್ಜೆಯಿಂದ ಕೊಳಕ್ಕೆಬೈಲುವರೆಗಿನ ಸುಮಾರು 3.5 ಕಿ.ಮೀ ಉದ್ದದ ತೀವ್ರ ಹದಗೆಟ್ಟ ರಸ್ತೆಗೆ ರೂ.1,50,000/- ವೆಚ್ಚದಲ್ಲಿ ಕಾಂಕ್ರೀಟ್ ಹಾಕಿ ರಸ್ತೆ ದುರಸ್ತಿ ಜೊತೆಗೆ ಇನ್ನೂ ಹಲವಾರು ರಸ್ತೆಗಳಿಗೆ ಕಲ್ಲು ಮಣ್ಣು ಹಾಕಿ ದುರಸ್ತಿ ಕಾರ್ಯ.
  • - ವಿವಿಧ ಸಂಘಟಣೆಗಳ ಸಂಯೋಗದೊಂದಿಗೆ ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರದ ಆಯೋಜನೆ, ಸ್ವಚ್ಛತಾ ಜಾಗೃತಿ ಹಾಗೂ ಇತರ ಕಾರ್ಯಕ್ರಮಗಳು
  • - ಸಮಾಜದಲ್ಲಿ ಸಹಬಾಳ್ವೆಯ ಸೌಹಾರ್ದತೆಗಾಗಿ ದೀಪಾವಳಿ, ಕ್ರಿಸ್ಮಸ್ ಸೌಹಾರ್ದ ಕೂಟ ಮತ್ತು ಇಫ್ತಾರ್ ಕೂಟಗಳ ಆಚರಣೆ
  • - ಗ್ರಾಮೀಣ ಪ್ರತಿಭೆಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಸಲುವಾಗಿ ಸಂಗೀತ ಸ್ಪರ್ಧೆ ಕಾರ್ಯಕ್ರಮ.
  • - ಗ್ರಾಮೀಣ ಪ್ರದೇಶದ ಜನರ ಮನೋರಂಜನೆಗಾಗಿ ನಾಟಕ ಆಯೋಜನೆ.
  • - ನೂರಕ್ಕೂ ಹೆಚ್ಚು ಆರ್ಥಿಕ ಸಹಾಯಕ್ಕಾಗಿ ಬಂದ ಅರ್ಜಿಗಳಿಗೆ ಸ್ಪಂದಿಸಿ ಧನಸಹಾಯ  ಇದಲ್ಲದೆ ಅನೇಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಎಲ್ಲಾ ಸೇವಾಕಾರ್ಯಗಳು ಬಡವರು, ಹಿಂದುಳಿದ ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರಿಗೆ ನೇರ ಪ್ರಯೋಜನವಾಗಿದ್ದು, ಗೆಳೆಯರ ಬಳಗ ಸೇವಾ ಸಂಸ್ಥೆಯ ನಿಸ್ವಾರ್ಥ ಸೇವೆಯನ್ನು ಸಮಾಜ ಮೆಚ್ಚಿ ನಿರಂತರವಾಗಿ ಅವರಿಗೆ ಬೆನ್ನೆಲುಬಾಗಿ ನಿಂತಿದೆ.

ಈ ಎಲ್ಲಾ ಕಾರ್ಯಕ್ರಮ, ಸಾಧನೆಗಳಿಗೆ ಸ್ಪೂರ್ತಿ ಗೌರಾಧ್ಯಕ್ಷರಾದ ನೆಲ್ವಿಸ್ಟರ್ ಪಿಂಟು ರವರು. ಅವರ ಪ್ರೆರಣೆ, ಮಾರ್ಗದರ್ಶನ, ಜನರ ನಡುವಿನ ಒಡನಾಟ ಈ ಗೆಳೆಯರ ಬಳಗ ಸೇವಾ ಸಂಸ್ಥೆ (ರಿ) ಎಂಬ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ಕೂಡ ಹೌದು. 

ಪ್ರಸ್ತುತ ಈ ಸಂಘಟನೆಯ ಸಂಚಲಕರಾಗಿ ಎಲಿಯಸ್ ಕ್ರಾಸ್ತ, ಮಾರ್ಗದರ್ಶಿಯಾಗಿ ಜೋಯೆಲ್ ಲೋಬೊ, ಗೌರವಾಧ್ಯಕ್ಷರಾಗಿ ನೆಲ್ವಿಸ್ಟರ್ ಪ್ರಿಂಟೊ, ಅಧ್ಯಕ್ಷರಾಗಿ ಡಾನ್ ಪ್ರವೀಣ್ ಕ್ರಾಸ್ತ, ಕಾರ್ಯದರ್ಶಿಯಾಗಿ ಅನಿಲ್ ಮೊರಸ್, ಖಜಾನ್ಸಿಯಾಗಿ ಅವಿಲ್ ಮಾರಸ್, ನಿರ್ದೇಶಕರಾಗಿ ಲೋಕೇಶ್ ಪೂಜಾರಿ ಸಂತೋಷ್ ಫರ್ನಾಂಡಿಸ್,  ಅರುಣ್ ಫರ್ನಾಂಡಿಸ್, ವಿನ್ಸೆಂಟ್ ಗಲ್ಬಂವೊ, ನೆಲ್ಸನ್ ಫರ್ನಾಂಡಿಸ್, ವಸಂತ ಪೂಜಾರಿ, ವಿಗ್ನೆಶ್ ಪೂಜಾರಿ, ಮಧುಕರ ಶೆಟ್ಟಿ, ಮೇಲ್ವಿನ್ ರೋಡ್ರಿಗಸ್, ಜೀವನ್, ಪ್ರೇಮ್ ಲೈಡ್ ಹಾಗೂ ಸದಸ್ಯರಾಗಿ 70ಕ್ಕೂ ಮಿಕ್ಕಿ ಯುವಕರು ಈ ಸಂಸ್ಥೆಯಲ್ಲಿ ಸಕ್ರಿಯರಾಗಿ ಭಾಗವಹಿಸಿ ಸೇವಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಈ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಗೆಳೆಯರ ಬಳಗ ಸೇವಾ ಸಂಸ್ಥೆ (ರಿ) ನಿರ್ದೇಶಕರು ತಮ್ಮ ಕೊಡುಗ್ಯೆ ದಾನಿಗಳಿಗೆ ಹಿತೈಷಿಗಳಿಗೆ ಅರ್ಪಿಸಿದ್ದಾರೆ.

ಕಾಮೆಂಟ್ ಬಿಡಿ

Join Us