ಕೊಡಗು ಜಿಲ್ಲಾ ಕಾಂಗ್ರೆಸ್ ಸಾರಥಿಯಾಗಿ ಧರ್ಮಜ ಉತ್ತಪ್ಪ ನೇಮಕ

ಕೊಡಗು :ಜಿಲ್ಲಾ ಕಾಂಗ್ರೆಸ್ ಸಮಿತಿಯ (ಡಿಸಿಸಿ) ನೂತನ ಕಾರ್ಯಾಧ್ಯಕ್ಷರಾಗಿ, ಯುವ ಮುಂದಾಳು ತೀತಿರ ಧರ್ಮಜ ಉತ್ತಪ್ಪ ಅವರು ಅವಿರೋಧವಾಗಿ ನೇಮಕಗೊಂಡಿದ್ದಾರೆ. ಕೆ.ಕೆ. ಮಂಜುನಾಥ್ ಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಡಿಸಿಸಿ ಸ್ಥಾನಕ್ಕೆ ಕೊಡಗಿನ ಹಲವು ಕಾಂಗ್ರೆಸ್ ಪ್ರಮುಖರು ಆಕಾಂಕ್ಷಿಗಳಾಗಿದ್ದರೂ ಅಂತಿಮವಾಗಿ ಕೆಪಿಸಿಸಿ ಧರ್ಮಜ ಉತ್ತಪ್ಪ ಅವರಿಗೆ ಮಣೆ ಹಾಕಿದ್ದು, ಸದ್ಯಕ್ಕೆ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಕೆಪಿಸಿಸಿ ಸೂಚಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.  ಶಿವಕುಮಾರ್ ಅವರು, ಕೊಡಗು ಜಿಲ್ಲಾ  ಡಿ ಸಿ ಸಿ ಯ ನೂತನ ಕಾರ್ಯಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಅವರನ್ನು ಕೆಪಿಸಿಸಿ ನೇಮಿಸಿದ್ದು, ಅದರಂತೆ ಈ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸಂಘಟಿಸುವಂತೆ ಸೂಚಿಸಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.