ಕಲ್ಲಾಪು ಶ್ರೀ ವೀರಭದ್ರ ದೇವಸ್ಥಾನದ ನೂತನ ಗರ್ಭಗುಡಿ, ತೀರ್ಥ ಮಂಟಪದ ಶಿಲಾನ್ಯಾಸ
ಮೂಲ್ಕಿ: ಪಡುಪಣಂಬೂರು ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಶ್ರೀ ವೀರಭದ್ರದೇವರ ನೂತನ ಗರ್ಭಗುಡಿ ತೀರ್ಥ ಮಂಟಪದ ,ಶಿಲಾನ್ಯಾಸ ಕಾರ್ಯಕ್ರಮವು ಜೂ.22ರ ಸೋಮವಾದಂದು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ ಅವಧಾನಿ ಶ್ರೀ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಉಡುಪಿ ಇವರ ನಿರ್ದೇಶನದಲ್ಲಿ ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀ ಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಕೈಗಾರಿಕಾ ಉದ್ಯಮಿ ಶ್ರೀ ದಾಮೋದರ್ ಶೆಟ್ಟಿಗಾರ್ ದಂಪತಿಗಳು ಶೀಲನ್ಯಾಸವನ್ನು ದಿವ್ಯ ಹಸ್ತಗಳಿಂದ ನೇರವೇರಿಸಿದರು.

ಶಿಲಾನ್ಯಾಸದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ವೀರಭದ್ರ ದೇವಸ್ಥಾನಕ್ಕೆ ಸೇರಿದ ಸಭಾಂಗಣದಲ್ಲಿ ಜರಗಿತು. ಧಾರ್ಮಿಕ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶ್ರೀ ಅಭಯ್ ಚಂದ್ರಜೈನ್ ವಹಿಸಿದ್ದರು ಶ್ರೀ ರಾಘವೇಂದ್ರ ಶೆಟ್ಟಿಗಾರ್ ಹಿರಿಯ ಸಿವಿಲ್ ನ್ಯಾಯಾಧೀಶರು ದೀಪ ಪ್ರಜ್ವಲನೆಮಾಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್.ಎಲ್.ಶೆಟ್. ಜ್ಯುವೆಲ್ಲರ್ಸ್ ಮತ್ತು ಡೈಮಂಡ್ ಹೌಸ್ ನ ಎಂ.ಪ್ರಶಾಂತ್ ಶೇಟ್, ಶ್ರೀ ಪುರಂದರ ಶೆಟ್ಟಿಗಾರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಕಲ್ಲಾಪು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಉಮನಾಥ ಜೆ. ಶೆಟ್ಟಿಗಾರ್ ಶ್ರೀ ಕ್ಷೇತ್ರದ ಗುರಿ ಕಾರುಗಳಾದ ಶ್ರೀರಾಮಗು ಗುರಿಕಾರ್, ಶ್ರೀ ಬಿ ರತ್ನಾಕರ್ ಶೆಟ್ಟಿಗಾರ್ ಯಾನೆ ಕಾಂತಣ್ಣಗುರಿಕಾರ್, ಶ್ರೀ ಅಪ್ಪು ಗುರಿಕಾರ್ , ಶ್ರೀ ಲಕ್ಷ್ಮಣ್ ಗುರಿಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಲ್ಲದೆ ಹದಿನಾರು ವೀರಭದ್ರ ದೇವಸ್ಥಾನಗಳ ಗುರಿಕಾರರು, ಅಧ್ಯಕ್ಷರು, ಪ್ರತಿನಿಧಿಗಳು, ಊರಿನ ಹಿರಿಯರು, ಪ್ರಮುಖರು, ವಾಚನಲಯದ, ಅಧ್ಯಕ್ಷರು ಹರಿಪ್ರಸಾದ್ ಕೊಲ್ನಾಡು, ಮಹಿಳಾ ವೇದಿಕೆಯಾ ಅಧ್ಯಕ್ಷೆ ವೇದಾವತಿ T. H,ವಾಚನಲಯದ ನಿಕಟ ಪೂರ್ವ ಅಧ್ಯಕ್ಷ ಶ್ರೀ ನವೀನ್ ಶೆಟ್ಟಿಗಾರ್, ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು, ಲಕ್ಷ್ಮಣ್ ಗುರಿಕಾರ್ರು ಸ್ವಾಗತವನ್ನು ನೆರವೇರಿಸಿದರು, ಕಾಂತಣ್ಣಗುರಿಕಾರರು ಪ್ರಸ್ತಾವನೆಗೈದ್ದರು, ಪ್ರಾರ್ಥನೆಯನ್ನು ಮಹಿಳಾ ವೇದಿಕೆಯ ಶ್ರೀಮತಿ ಗೀತಾಸದಾನಂದ ತೋಕೂರು, ಧನ್ಯವಾದಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ಹ. ಪಿತಂಬರ್ ಶೆಟ್ಟಿಗಾರ್ ನಿರ್ವಹಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಶಂಕರ್ ಶೆಟ್ಟಿಗಾರ್ ಬೆಳ್ಳಾಯರು ಮತ್ತು ಅಂಜನ್ ಕುಮಾರ್ ಕಲ್ಲಾಪು ನಿರೂಪಿಸಿದರು.
ಕಾಮೆಂಟ್ ಬಿಡಿ