ಈಶ್ವರಪ್ಪಗೆ ಯಡಿಯೂರಪ್ಪ ನಾಯಕತ್ವ ಮರೆತುಹೋಗಿದೆ:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಧರ್ಮಸ್ಥಳ : ಬಂಡಾಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, “2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ 17 ಶಾಸಕರು ರಾಜೀನಾಮೆ ನೀಡಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ನಂಬಿ ಬಂದಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. ಅಂದು ಸಿದ್ದರಾಮಯ್ಯ ಸರ್ಕಾರದಲ್ಲಿ 18 ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಶಾಸಕರು ಕೈಜೋಡಿಸಿದ್ದರಿಂದಲೇ ಒಳ್ಳೆಯ ಸರ್ಕಾರ ನೀಡಲು ಸಾಧ್ಯವಾಯಿತು. ಈಶ್ವರಪ್ಪ ಕೂಡ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಎಂಜಾಯ್ ಮಾಡಿದ್ದರು. ಆದರೆ ಇಂದು ಅವರಿಗೆ ಇದೆಲ್ಲವೂ ಮರೆತುಹೋಗಿದೆ. ಈಶ್ವರಪ್ಪ ಈಗ ನಮ್ಮ ಪಕ್ಷದವರೂ ಅಲ್ಲ, ನಮ್ಮ ಶಾಸಕರೂ ಅಲ್ಲ. ಅವರ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ” ಎಂದು ತಿರುಗೇಟು ನೀಡಿದರು.
ಕಾಮೆಂಟ್ ಬಿಡಿ