ಕ್ರೈಂ

ಸುರತ್ಕಲ್: ಸಂಘಪರಿವಾರ ಕಾರ್ಯಕರ್ತನಿಂದ ಲೈಂಗಿಕ ದೌರ್ಜನ್ಯ: ಬಾಲಕಿ ಆತ್ಮಹತ್ಯೆ

ಸುರತ್ಕಲ್: ಯುವಕನೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಜೊತೆ ಪ್ರೀತಿಸುವ ನಾಟಕವಾಡಿ ಆಕೆಯನ್ನು ಗರ್ಭಿಣಿಯನ್ನಾಗಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪರಿಣಾಮ ಬಾಲಕಿ ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳದಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ.

ಗಂಜಿಮಠ ಮೂಲದ ನಿವಾಸಿ ಸಂಘಪರಿವಾರದ ಕಾರ್ಯಕರ್ತನೆನ್ನಲಾದ ಆರೋಪಿ ಅನೀಶ್ ಪೂಜಾರಿ ಪ್ರೀತಿಸುವುದಾಗಿ ನಂಬಿಸಿ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇದರಿಂದ ಆಕೆ ಗರ್ಭಿಣಿಯಾಗಿದ್ದಳು ಎಂದು ತಿಳಿದು ಬಂದಿದೆ. ಈ ವಿಚಾರವನ್ನು ಆಕೆ ಅನೀಶ್ ಪೂಜಾರಿಗೆ ತಿಳಿಸಿದ್ದು, ಆತ ಆಕೆಯನ್ನು ನಿರಾಕರಿಸಿ “ನೀನು ಗರ್ಭಿಣಿಯಾದರೆ ನಾನು ಏನು ಮಾಡಬೇಕು, ನೀನು ಸೂ....ಮುಂ... ಎಲ್ಲಾದರೂ ಹೋಗಿ ಸಾಯಿ. ನೀನು ಬದುಕಿದ್ದರೆ ನಿನಗೆ ಹುಟ್ಟುವ ಮಗು ಸೂ....ಮಗು" ಎಂದೆಲ್ಲಾ ಅವಾಚ್ಯ ಶಬ್ದಗಳಿಂದ ಬೈದಿದ್ದ ಎಂದು ಬಾಲಕಿಯ ತಾಯಿ ನೀಡಿರುವ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಅನೀಶ್ ಪೂಜಾರಿ ಪ್ರೀತಿ ನಿರಾಕರಿಸಿ ಅವಾಚ್ಯವಾಗಿ ಬೈದು ಕಳುಹಿಸಿದ ಜೂ.22ರಂದು ರಾತ್ರಿ ಬಾಲಕಿ ತನ್ನ ತಾಯಿಗೆ ಮಾಹಿತಿ ನೀಡಿದ್ದಳು. ಆಕೆಯನ್ನು ಸಮಾಧಾನಪಡಿಸಿದ್ದ ತಾಯಿ ಮರುದಿನ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ತೆರಳಿ ಹಿಂದಿರುಗಿ ಮನೆಗೆ ಬಂದಾಗ ಮಗಳು ಮನೆಯ ಮಲಗುವ ಕೋಣೆಯ ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿ ಬಾಲಕಿಯ ತಾಯಿ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಆರೋಪಿ ಅನೀಶ್ ಪೂಜಾರಿ ವಿರುದ್ದ ಪೊಕ್ಕೊ, ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಕಲಂಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಕಾಮೆಂಟ್ ಬಿಡಿ

Join Us