ಪುನೀತ್ ಜೊತೆ ‘ದ್ವಿತ’ ಸಿನಿಮಾದಲ್ಲಿ ತ್ರಿಷಾ ನಾಯಕಿ

ಸಿನಿಮಾ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕರಾಗಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ‘ದ್ವಿತ’ ಸಿನಿಮಾಗೆ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ನಾಯಕಿಯಾಗುವುದು ಪಕ್ಕಾ ಆಗಿದೆ.

gg

 

ಈ ಮೊದಲು ಪುನೀತ್ ಜೊತೆ ಪವರ್ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ಅಭಿನಯಿಸಿದ್ದರು. ಇದಾದ ಬಳಿಕ ಕನ್ನಡದಲ್ಲಿ ಸಿನಿಮಾದಲ್ಲಿ ಮತ್ತು ಪುನೀತ್ ಗೆ ಎರಡನೇ ಬಾರಿಗೆ ಬರಲಿದ್ದಾರೆ.

trisha


 
ತ್ರಿಷಾ ನಾಯಕಿಯಾಗುವುದರ ಬಗ್ಗೆ ಈಗಾಗಲೇ ಸುದ್ದಿ ಹಬ್ಬಿತ್ತು. ಈಗ ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಪ್ರಕಟಣೆ ನೀಡಿದೆ. ಪವನ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಪ್ರತಿಭಾವಂತರ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ ಎಂದು ತ್ರಿಷಾ ಹೇಳಿಕೊಂಡಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.