ಪದ್ಮನಾಭ ಸಾಮಂತ್ ಹುಟ್ಟುಹಬ್ಬದ ಪ್ರಯುಕ್ತ :ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ವಿಶ್ವವ್ಯಾಪಿ ಹರಡಿದ  ಮಹಾಮಾರಿ ಕೊರೋನ ಕಾರಣದಿಂದ ತಡೆಯಲ್ಲಿ ಇದ್ದ  ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಆರೋಗ್ಯ ತಪಾಸಣಾ ಶಿಬಿರವು ಚೆನ್ನೈತೋಡಿ ವಾಮದಪದವು ಸರ್ಕಾರಿ ಶಾಲೆಯಲ್ಲಿ ನಡೆದ ಪದ್ಮನಾಭ ಸಾಮಂತ್ ವಾಮದಪದವು ಇವರ ಹುಟ್ಟುಹಬ್ಬದ ಪ್ರಯುಕ್ತ ಅನ್ನಪೂರ್ಣೇಶ್ವರಿ ಕ್ಯಾಟರಿಂಗ್ ಹಾಗೂ

c/c/////////

ಯೆನಪೋಯ ಹಾಸ್ಪಿಟಲ್ ಮಂಗಳೂರು ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಅರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಚಾಲನೆ ನೀಡಿ 2000-01 ಸಾಲಿನ 7ತರಗತಿಯ ಹಳೆ ವಿದ್ಯಾರ್ಥಿಗಳು ನೀಡಿದ ಬಹುಮಾನಗಳ ಸ್ಮರಣಿಗಳನ್ನು ಇಡುವ ಕಾಪಾಟಿನ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

c/v

ಈ ಸಂದರ್ಭದಲ್ಲಿ ಯೇನಪೋಯ ಮೆಡಿಕಲ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ ಶ್ರೀನಿವಾಸ್ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,ಅನ್ನಪೂರ್ಣೇಶ್ವರಿ ಕ್ಯಾಟಾರಿಂಗ್ ಮಾಲಕರಾದ ಮಾತೃಶ್ರೀಯವರಾದ ಗೌರಮ್ಮ ಕೃಷ್ಣಸಾವಂತ್,ಮಾವಿನಕಟ್ಟೆ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಜನಾಬ್ ಮೊಹಮ್ಮದ್ ಮುಸ್ತಫಾ ಹಾಜಿ, ಚೆನೈತೋಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ  ವಿಜಯಶ್ರೀ,

bb

 ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಶ್ರೀ ಆನಂದ್ ಆಚಾರ್ಯ, ಪಂಚಾಯತ್ ಸದಸ್ಯರುಗಳಾದ ನವೀನ್ ಚಂದ್ರಶೆಟ್ಟಿ,ರಮಾನಂದ ಬೆದ್ರಕಾಡು, ಲಿತೇಶ್, ಶ್ರೀಮತಿ ರೇಖಾ ಸತೀಶ್,ನಾಗೇಶ್, ಹಾಗೂ ಸ್ಥಳೀಯ ಮುಖಂಡರಾದ  ಶ್ರೀಧರ್ ಪೈ, ಅನಂತ ಪೈ, ಅಮ್ಮು ರೈ  ಹಾಗೂ ಯೇನಪೋಯ ಮೆಡಿಕಲ್ ಆಸ್ಪತ್ರೆ ಹಾಗೂ  ಬ್ಲಡ್ ಡೋನರ್ಸ್ ಮಂಗಳೂರು  ಇದರ ವೈದ್ಯಕೀಯ ಸಿಬ್ಬಂದಿ ವರ್ಗದವರು ಹರಿ ಓಂ ಬಳಗ ಅದ್ರಳಿಕೆ ಅಂತರಗುತ್ತು ಸದಸ್ಯರು, ಶ್ರೀಕೃಷ್ಣ ಫ್ರೆಂಡ್ಸ್  ರಾಮೋಟ್ಟು ಸದಸ್ಯರು ಮತ್ತು ಹಳೆ ವಿದ್ಯಾರ್ಥಿಗಳು ಇನ್ನಿತರರು ಭಾಗಿಯಾಗಿದರು. 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.