ದೇಶ

ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂ ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿಗೆ ಪ್ರಮಾಣ ವಚನ

ಅಸ್ಸಾಂ: ಬಿಜೆಪಿ ನಾಯಕ ಹಿಮಂತ್​​ ಬಿಸ್ವಾ ಶರ್ಮಾ ಅವರು ಅಸ್ಸಾಂ ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗುವಾಹಟಿಯ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್​ ಪ್ರಸಾದ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಸಿಎಂ ಹಿಮಂತ್ ಜೊತೆ ಸಚಿವರಾಗಿ ನಾಲ್ವರು ಶಾಸಕರು ಕೂಡ ಇದೇ ವೇಳೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ 126 ಸ್ಥಾನಗಳ ಪೈಕಿ 82 ಸ್ಥಾನಗಳನ್ನು ಗೆದ್ದು ಬಿಜೆಪಿ ಭರ್ಜರಿ ವಿಜಯ ಗಳಿಸಿತ್ತು. ಸರ್ಕಾರ ರಚನೆಗೆ 64 ಶಾಸಕರ ಬೆಂಬಲ ಅಗತ್ಯವಿದ್ದು 18 ಹೆಚ್ಚುವರಿ ಶಾಸಕರನ್ನು ಗೆದ್ದು ಬಿಜೆಪಿ ಬೀಗಿತ್ತು. ಹೀಗಾಗಿ ಜಲಕ್ಬರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹಿಮಂತ್​ ಬಿಸ್ವಾಗೆ ಸತತ ಎರಡನೇ ಬಾರಿ ಮುಖ್ಯಂತ್ರಿ ಗದ್ದುಗೆ ದೊರೆತಿದೆ. ಈ ಮೂಲಕ ಹಿಮಂತ ಬಿಸ್ವ ಶರ್ಮಾ ಅಸ್ಸಾಂನಲ್ಲಿ ಸತತ ಎರಡು ಅವಧಿಗೆ ಮುಖ್ಯಮಂತ್ರಿ ಆದ ಮೊದಲ ಕಾಂಗ್ರೆಸೇತರ ನಾಯಕ ಎಂಬ ದಾಖಲೆ ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದರು.

ಕಾಮೆಂಟ್ ಬಿಡಿ

Join Us