ದೇಶ

ದೇಶದ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಂಗಾಂಗ ದಾನಿ ಹತ್ತು ತಿಂಗಳ ಶಿಶು ಅಲಿನ್ ಶೇರಿನ್ ಅಬ್ರಹಾಂ

ಕೇರಳ : ದೇಶದ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಂಗಾಂಗ ದಾನಿಯಾದ ಪತ್ತನಂತಿಟ್ಟದ ಮಲ್ಲಪ್ಪಳ್ಳಿಯ ಹತ್ತು ತಿಂಗಳ ಶಿಶು ಅಲಿನ್ ಶೇರಿನ್ ಅಬ್ರಹಾಂ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ನಡೆಸಲು ಕೇರಳ ಸರಕಾರ ನಿರ್ಧರಿಸಿದೆ.

ಈ ಬಗ್ಗೆ ಕೇರಳ ರಾಜ್ಯದ ಆಡಳಿತ ಶಿಷ್ಟಾಚಾರ ಇಲಾಖೆ ಹೊರಡಿಸಿದ ಅಧಿಕೃತ ಆದೇಶದಲ್ಲಿ , ಸರ್ಕಾರದ ಕಾರ್ಯದರ್ಶಿಯು ಪುಟ್ಟಮಗುವಿನ ಅಂತ್ಯಸಂಸ್ಕಾರದ ವೇಳೆ ಸಕಲ ಸರಕಾರಿ ಗೌರವಗಳನ್ನು ನೀಡಲು ಮಾಡಬೇಕಾದ ವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪತ್ತನಂತಿಟ್ಟದ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ.

ಮಗು ಅಲಿನ್ ಶೇರಿನ್ ಅಂತಿಮ ವಿಧಿವಿಧಾನಗಳು ಫೆಬ್ರವರಿ 15 ರಂದು ಮಧ್ಯಾಹ್ನ 3.00 ಕ್ಕೆ ನೆಡುಂಗಡಪ್ಪಳ್ಳಿಯ ಸೇಂಟ್ ಥಾಮಸ್ ಸಿಎಸ್ಐ ಚರ್ಚ್ನಲ್ಲಿ ನಡೆಯಲಿವೆ. ಆಕೆಯ ನಿಧನವನ್ನು ಕೇರಳಕ್ಕೆ ಆದ ದೊಡ್ಡ ನಷ್ಟ ಎಂದಿರುವ ಸರಕಾರ , ಮಗುವಿನ ಸಾವಿನ ಬಳಿಕ ಅಂಗಾಂಗ ದಾನ ಮಾಡಲು ಆಕೆಯ ಪೋಷಕರು ತೆಗೆದುಕೊಂಡ ನಿರ್ಧಾರ ಕೇರಳ ಸರಕಾರ ಶ್ಲಾಘಿಸಿದ್ದು. ಇದೊಂದು ಅಸಾಧಾರಣ ಸಹಾನುಭೂತಿ ಮತ್ತು ಮಾನವೀಯತೆಗೆ ಉದಾಹರಣೆಯಾಗಿದೆ ಎಂದು ಹೇಳಿದೆ.

ಅಗಲಿದ ಆತ್ಮಕ್ಕೆ ಗೌರವದ ಸಂಕೇತವಾಗಿ ಮತ್ತು ಆಕೆಯ ಉದಾತ್ತ ಕಾರ್ಯವನ್ನು ಗುರುತಿಸಿ, ಮುಖ್ಯಮಂತ್ರಿ ಮತ್ತು ಕೇರಳ ಸರ್ಕಾರದ ಪರವಾಗಿ ಅವರ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಪೊಲೀಸ್ ಗೌರವ ನೀಡಲು ಸೂಚಿಸಲಾಗಿದೆ.

ಫೆಬ್ರವರಿ 5 ರಂದು ಕೊಟ್ಟಾಯಂನಿಂದ ತಿರುವಲ್ಲಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಧ್ಯಾಹ್ನ 2-30 ಕ್ಕೆ ಪಳ್ಳಂ ಬೋರ್ಮಾ ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಲಿನ್ ಶೆರಿನ್, ತಾಯಿ ಶೆರಿನ್ ಆನ್ ಜಾನ್ ಮತ್ತು ಜೊತೆಗಿದ್ದ ಅಜ್ಜ-ಅಜ್ಜಿ ಗಂಭೀರವಾಗಿ ಗಾಯಗೊಂಡಿದ್ದರು. ಮಗುವನ್ನು ಚಂಗನಾಶ್ಶೇರಿ ಮತ್ತು ತಿರುವಲ್ಲದ ಆಸ್ಪತ್ರೆ ಹಾಗೂ ಬಳಿಕ ಫೆಬ್ರವರಿ 7 ರಂದು ಎರ್ನಾಕುಳಂ ಅಮೃತ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಫೆ.13 ರಂದು ಮಗುವಿನ ಮೆದುಳು ನಿಷ್ಕ್ರಿಯಗೊಂಡಿತ್ತು. ಕುಟುಂಬ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದರು. ತಿರುವನಂತಪುರ ಮೆಡಿಕಲ್ ಕಾಲೇಜು ಎಸ್ ಎ ಟಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಚಿಕಿತ್ಸೆ ಪಡೆಯುತ್ತಿರುವ ಮಗುವಿಗೆ ಶೆರಿನ್ ಳ ಎರಡು ಮೂತ್ರಪಿಂಡಗಳನ್ನು ದಾನ ಮಾಡಲಾಗುವುದು. ಹೃದಯ ಕವಾಟವನ್ನು ತಿರುವನಂತಪುರದ ಶ್ರೀ ಚಿತ್ರ ಸಂಸ್ಥೆ ಹಾಗೂ ಎರಡು ಕಣ್ಣುಗುಡ್ಡೆಗಳನ್ನು ಅಮೃತ ಆಸ್ಪತ್ರೆಗೆ ದಾನ ಮಾಡಲಾಗಿದೆ.
ಅಂಗಾಂಗ ದಾನ ಮಾಡಿದ ಅಲಿನ್ ಶೆರಿನ್ ರಾಜ್ಯದಲ್ಲಿ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದ್ದಾಳೆ. ಅತ್ಯಂತ ಕಿರಿಯ ಮಗು ಅಂಗಾಂಗ ದಾನದ ಮೂಲಕ ಯಕೃತ್ತು ಪಡೆಯುತ್ತಿದೆ. ಇಬ್ಬರು ಮಕ್ಕಳು ಇತಿಹಾಸದ ಭಾಗವಾಗಲಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ.

ಕಾಮೆಂಟ್ ಬಿಡಿ

Join Us