ದೇಶ

ಕಾಕ್ರೋಚ್‌ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್‌ ದೀಪ್ಕೆ ಜೂನ್‌ 6 ರಂದು ಭಾರತಕ್ಕೆ

ನವದೆಹಲಿ: ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕಾಕ್ರೋಚ್‌ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್‌ ದೀಪ್ಕೆ ಜೂನ್‌ 6 ರಂದು ಭಾರತಕ್ಕೆ ಮರಳಲಿದ್ದು, ದೆಹಲಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಹೊಸದಾಗಿ ಸ್ಥಾಪಿಸಲಾದ ಸಿಜೆಪಿ ಸ್ಥಾಪಕ ದೀಪ್ಕೆ ಜೂ.6 ರಂದು ಭಾರತಕ್ಕೆ ಹಿಂತಿರುಗಿ, ಪರೀಕ್ಷೆಗೆ ಸಂಬಂಧಿಸಿದ ದೋಷಗಳಿಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಿಡುಗಡೆ ಮಾಡಿದ ವೀಡಿಯೋದಲ್ಲಿ ದೀಪ್ಕೆ, ದೆಹಲಿಯಲ್ಲಿ ನಡೆಯಲಿರುವ ತಮ್ಮ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಬೆಂಬಲಿಗರು ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಜೂ.6 ರಂದು ವಿಮಾನ ನಿಲ್ದಾಣದಲ್ಲಿ ತಮ್ಮೊಂದಿಗೆ ಸೇರುವಂತೆ ಬೆಂಬಲಿಗರಿಗೆ ತಿಳಿಸಿದ್ದಾರೆ.

ಕಾಮೆಂಟ್ ಬಿಡಿ

Join Us