ಜಿಲ್ಲಾ ಸುದ್ದಿಗಳು

ಪ್ರಿಯದರ್ಶಿನಿ ಸೊಸೈಟಿ 483 ಕೋಟಿ ವ್ಯವಹಾರ

      40 ಕೋಟಿ ರು. ದುಡಿಯುವ ಬಂಡವಾಳ | 2025-26ರಲ್ಲಿ ಉತ್ತಮ ಲಾಭಾಂಶ

ಮುಲ್ಕಿ: ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ ಸಂಸ್ಥೆಯು ಸದಸ್ಯರ ಪ್ರೋತ್ಸಾಹ, ಗ್ರಾಹಕರ ಸಹಕಾರ, ಆಡಳಿತ ವರ್ಗದವರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯಶ್ರಮತೆಯಿಂದಾಗಿ 2025 -26ನೇ ಸಾಲಿನಲ್ಲಿ 483 ಕೋಟಿ ರು. ವ್ಯವಹಾರ ನಡೆಸಿದೆ ಎಂದು ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿಯ ಅಧ್ಯಕ್ಷ ಎಚ್ ವಸಂತ ಬೆರ್ನಾಡ್ ತಿಳಿಸಿದ್ದಾರೆ.

ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ರ ಮಾರ್ಗದರ್ಶನದಲ್ಲಿ ಸಹಕಾರಿ ರಂಗದ ಭೀಷ್ಮ ದಿ. ಎಚ್ ನಾರಾಯಣ ಸನಿಲ್‌ ಮತ್ತು ದಿ. ಪಂಜದಗುತ್ತು ಶಾಂತರಾಮ ಶೆಟ್ಟಿ ರವರ ಪ್ರೇರಣಾ ಶಕ್ತಿಯಿಂದ 2021 ರಲ್ಲಿ ಪ್ರಾರಂಭವಾದ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿಯು, ವರದಿ ಸಾಲಿನಲ್ಲಿ 483 ಕೋಟಿ ರು. ವ್ಯವಹಾರವನ್ನು ದಾಖಲಿಸಿದೆ. ಕಳೆದ ಸಾಲಿನ

ವ್ಯವಹಾರದಿಂದ ಶೇ 72.86 ಏರಿಕೆ ಕಂಡಿದೆ. ಪ್ರಸ್ತುತ 38.32 ಕೋಟಿ ರು.. ಠೇವಣಿ, 32.48 ಕೋಟಿ ರು. ಸಾಲ ಮತ್ತು ಮುಂಗಡಗಳೊಂದಿಗೆ 76.57 ಲಕ್ಷ ರು. ಪಾಲು ಬಂಡವಾಳ, 90. 50 ಲಕ್ಷರು. ನಿಧಿಗಳು, 40 ಕೋಟಿ ರು. ದುಡಿಯುವ ಬಂಡವಾಳ ಹೊಂದಿರುತ್ತದೆ. 2025-26ನೇ ಸಾಲಿನಲ್ಲಿ ಉತ್ತಮ ಲಾಭಾಂಶ ಗಳಿಸಿದ್ದು, ಸದಸ್ಯರಿಗೆ ಉತ್ತಮ ರೀತಿಯ ಪಾಲು ಮುನಾಫೆಯನ್ನು ಹಂಚುವ ಗುರಿ ಹೊಂದಿದೆ. ಹಳೆಯಂಗಡಿ, ಪಡುಬಿದ್ರೆ, ಕಿನ್ನಿಗೋಳಿ ಮತ್ತು ಮೂಡಬಿದ್ರೆ ಸೇರಿದಂತೆ ಒಟ್ಟು ನಾಲ್ಕು ಶಾಖೆಗಳನ್ನು ಹೊಂದಿರುವ ಸೊಸೈಟಿಯು ವರದಿ ವರ್ಷದಲ್ಲಿ ಕೂಡ ಹೊಸ ಶಾಖೆ ಒಂದನ್ನು ತೆರೆಯುವ ಗುರಿ ಇಟ್ಟುಕೊಂಡಿದೆ ಎಂದು ಅವರು ತಿಳಿಸಿದರು. ಅವಲೋಕನ ಸಭೆಯಲ್ಲಿ ಸಂಸ್ಥೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸುದರ್ಶನ, ಲೆಕ್ಕಿಗರಾದ ಲೋಲಾಕ್ಷಿ ಉಪಸ್ಥಿತರಿದ್ದರು.



ಕಾಮೆಂಟ್ ಬಿಡಿ

Join Us