ಜಿಲ್ಲಾ ಸುದ್ದಿಗಳು

ತಾಯಿ - ಮಗುವನ್ನು ಬಸ್‌ನಲ್ಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ

ಮಂಗಳೂರು : ಮತ್ತೊಂದು ಬಸ್‌ನಿಂದ ಬಿದ್ದ ತಾಯಿ - ಮಗುವಿನ ರಕ್ಷಣೆಗೆ ಧಾವಿಸಿದ ಸಿಟಿ ಬಸ್ಸೆಂದರ ಚಾಲಕ ಹಾಗೂ ನಿರ್ವಾಹಕ ತಮ್ಮ ಬಸ್ ರೂಟ್ ಟ್ರಿಪ್ ಅನ್ನೇ ಕಡಿತಗೊಳಿಸಿ ತಾಯಿ ಮಗುವನ್ನು ಬಸ್‌ನಲ್ಲೇ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಂಗಳೂರು ನಗರದ ಮರಕಡ ಜಂಕ್ಷನ್‌ನಲ್ಲಿ ಬನ್ನೊಂದರಿಂದ ತಾಯಿ - ಮಗು ಬಿದ್ದಿದ್ದಾರೆ. ಈ ವೇಳೆ ಅದೇ ಮಾರ್ಗವಾಗಿ ರೂಟ್ ನಂಬರ್ 13ಬಿ ಮಾಸ್ಟರ್ ಎಂಬ ಹೆಸರಿನ ಬಸ್ ಅಲ್ಲಿಗೆ ಬಂದಿದೆ. ಆ ಬಸ್ ಚಾಲಕ ಹಾಗೂ ನಿರ್ವಾಹಕ ಘಟನೆಯನ್ನು ಗಮನಿಸಿ ತಮ್ಮ ಬಸ್ ರೂಟ್ ಟ್ರಿಪ್ ಬಗ್ಗೆ ಚಿಂತಿಸದೆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ತಾಯಿ - ಮಗುವನ್ನು ಬಸ್‌ನಲ್ಲೇ ಆಸ್ಪತ್ರೆಗೆ ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ ದೃಶ್ಯ ಬಸ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಕಾಮೆಂಟ್ ಬಿಡಿ

Join Us