ಕ್ರೈಂ

ಮನೆಯಿಂದ ಹಣ, ಚಿನ್ನ ತೆಗೆದುಕೊಂಡು ಯುವತಿ ನಾಪತ್ತೆ

ಬಂಟ್ವಾಳ: ತಂದೆ ತಾಯಿ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಿಂದ ಮಗಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಬರಿಮಾರು ನಿವಾಸಿ ಮಾದೇವಿ (21) ನಾಪತ್ತೆಯಾದ ಯುವತಿಯಾಗಿದ್ದಾಳೆ.

ಈಕೆ ಸುಮಾರು 6 ತಿಂಗಳ ಕಾಲ ಧಾರವಾಡದಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಇತ್ತೀಚೆಗೆ 5 ತಿಂಗಳಿನಿಂದ ಕೆಲಸ ಬಿಟ್ಟು ಬಂದು ತಂದೆ ತಾಯಿ ಜೊತೆ ಮನೆಯಲ್ಲಿ ಇದ್ದಳು. ಜೂನ್ 11 ರಂದು ಬೆಳಿಗ್ಗೆ ಈಕೆಯ ತಂದೆ ತಾಯಿ ಇಬ್ಬರು ಕೆಲಸ ಮನೆಯಿಂದ ಹೊರಗೆ ಹೋಗಿದ್ದು, ಸಂಜೆ ವೇಳೆ ಮನೆಗೆ ಬಂದಾಗ ಮಗಳು ಮನೆಯಿಂದ ನಾಪತ್ತೆಯಾಗಿದ್ದಾಳೆ.ಆಕೆಯ ಪ್ರೇಮವಿರುವ ಹಳೆಯ ಹುಡುಗನ ಮೊಬೈಲ್ ಗೆ ವಿಚಾಸರಿಸಲು ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಮನೆಯಿಂದ ಹೋಗುವಾಗ ಈಕೆ ಹಣ ಮತ್ತು ಚಿನ್ನವನ್ನು ಕೂಡ ತೆಗೆದುಕೊಂಡು ಹೋಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಕಾಮೆಂಟ್ ಬಿಡಿ

Join Us