6ನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಮಂಗಳೂರು ಈಜುಪಟುಗಳು
ಪುಣೆಯ ಬಾಲೇವಾಡಿ ಕ್ರೀಡಾಂಗಣದಲ್ಲಿ ನಡೆದ 6ನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್–2026ರಲ್ಲಿ ಮಂಗಳೂರಿನ ಈಜುಗಾರರು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜೂನಿಯರ್–D ಬಾಲಕಿಯರ ವಿಭಾಗದಲ್ಲಿ ಶಾನ್ವಿ ಕೆ. ಅವರು 200 ಮೀ. ಬೈಫಿನ್ಸ್ ಹಾಗೂ 100 ಮೀ. ಬೈಫಿನ್ಸ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗಳಿಸಿದರು. ಅಲ್ಲದೆ 4×100 ಮೀ. ಮಿಶ್ರ ರಿಲೇಯಲ್ಲಿ ಚಿನ್ನದ ಪದಕ ಗೆದ್ದ ತಂಡದ ಸದಸ್ಯರಾಗಿದ್ದರು.
ಜೂನಿಯರ್–E ಬಾಲಕರ ವಿಭಾಗದಲ್ಲಿ ನೋವಾ ಜೋ ಪೈಸ್ ಅವರು 200 ಮೀ. ಬೈಫಿನ್ಸ್ ಮತ್ತು 100 ಮೀ. ಬೈಫಿನ್ಸ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದರು. 50 ಮೀ. ಬೈಫಿನ್ಸ್‌ನಲ್ಲಿ ಕಂಚಿನ ಪದಕವನ್ನೂ ಪಡೆದರು.
ಗ್ರೂಪ್–F ಬಾಲಕಿಯರ ವಿಭಾಗದಲ್ಲಿ ಸಾರಾ ಎಲಿಷಾ ಪಿಂಟೋ ಅವರು 50 ಮೀ. ಸರ್ಫೇಸ್ ಹಾಗೂ 50 ಮೀ. ಬೈಫಿನ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದರು. 50 ಮೀ. ಬೈಫಿನ್ಸ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. 100 ಮೀ. ಬೈಫಿನ್ಸ್‌ನಲ್ಲಿ ಬೆಳ್ಳಿ ಪದಕ ಪಡೆದರು ಹಾಗೂ ವೈಯುಕ್ತಿಕ ಚಾಂಪಿಯನ್ಶಿಪ್ ಪಡೆದರು
ಅದೇ ವಿಭಾಗದ ಅಹಾನಾ ಅಭಿಷೇಕ್ ಅವರು 50 ಮೀ. ಸರ್ಫೇಸ್‌ನಲ್ಲಿ ಬೆಳ್ಳಿ, 50 ಮೀ. ಬೈಫಿನ್ಸ್‌ನಲ್ಲಿ ಬೆಳ್ಳಿ ಹಾಗೂ 100 ಮೀ. ಬೈಫಿನ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು.
ಜೂನಿಯರ್–G ಬಾಲಕರ ವಿಭಾಗದಲ್ಲಿ ಮುಹಮ್ಮದ್ ನುಮಾನ್ ಬಾಜಿ ಅವರು 100 ಮೀ. ಬೈಫಿನ್ಸ್‌ನಲ್ಲಿ ಬೆಳ್ಳಿ ಹಾಗೂ 50 ಮೀ. ಸರ್ಫೇಸ್ ಮತ್ತು 50 ಮೀ. ಬೈಫಿನ್ಸ್‌ನಲ್ಲಿ ತಲಾ ಕಂಚಿನ ಪದಕ ಗೆದ್ದರು.
ಜೂನಿಯರ್–B ಬಾಲಕರ ವಿಭಾಗದಲ್ಲಿ ಗ್ರಹಿತ್ ಜಿ. ಪ್ರಭು ಅವರು 4×100 ಮೀ. ಬೈಫಿನ್ಸ್ ರಿಲೇ ಹಾಗೂ 4×100 ಮೀ. ಮಿಶ್ರ ರಿಲೇಯಲ್ಲಿ ಚಿನ್ನದ ಪದಕ ಗೆದ್ದರು. ಎರಡೂ ರಿಲೇಗಳಲ್ಲಿ ಹೊಸ ಮೀಟ್ ದಾಖಲೆ ನಿರ್ಮಿಸಿದ ತಂಡದ ಸದಸ್ಯರಾಗಿದ್ದರು.
ನೈತಿಕ್ ಎನ್. ಅವರು 4×100 ಮೀ. ಬೈಫಿನ್ಸ್ ರಿಲೇಯಲ್ಲಿ ಹೊಸ ಮೀಟ್ ದಾಖಲೆಯೊಂದಿಗೆ ಚಿನ್ನದ ಪದಕ ಹಾಗೂ 50 ಮೀ. ಬೈಫಿನ್ಸ್‌ನಲ್ಲಿ ಕಂಚಿನ ಪದಕ ಗಳಿಸಿದರು
ಈ ಕ್ರೀಡಾಪಟುಗಳು ವೀ ವನ್ ಅಕ್ವಾ ಸೆಂಟರ್‌ನ
ಮುಖ್ಯ ತರಬೇತುದಾರರಾದ ಲೋಕರಾಜ್ ವಿ.ಎಸ್. ವಿಟ್ಲ ಹಾಗೂ ಅಭಿಲಾಷ್ ಟಿ. ಮತ್ತು ಸಹ ತರಬೇತುದಾರರಾದ ಆರೋಮಲ್ ಎ.ಎಸ್., ಸುಧೀನ್ ರಾಜ್ ಶೆಟ್ಟಿ, ಗಗನ್ ಜಿ. ಪ್ರಭು, ಸಂಜಯ್ ಉಳ್ಳುವೇಕರ್ ಅವರ ಮಾರ್ಗದರ್ಶನದಲ್ಲಿ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ.
ಈ ಸಾಧನೆಗೆ ವೀ ವನ್ ಅಕ್ವಾ ಸೆಂಟರ್‌ನ ನಿರ್ದೇಶಕರಾದ ಶ್ರೀ ನವೀನ್ ಹಾಗೂ ಶ್ರೀಮತಿ ರೂಪಾ ಜಿ. ಪ್ರಭು ಅವರು ಹರ್ಷ ವ್ಯಕ್ತಪಡಿಸಿದ್ದಾರೆ
ಕಾಮೆಂಟ್ ಬಿಡಿ