ತೋಕೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿಧ್ಯಾರ್ಥಿಗಳ ಪೋಷಕರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ.

ಮುಲ್ಕಿ :ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ, ಮಂಗಳೂರು ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಪಡುಪಣಂಬೂರು ತಾಲೂಕು ಮತ್ತು ಜಿಲ್ಲಾ ಯುವ ಜನ ಒಕ್ಕೂಟ, ದ. ಕ. ಜಿಲ್ಲೆಇವರುಗಳ ಮಾರ್ಗದರ್ಶನದಲ್ಲಿ.

ಜಿಲ್ಲಾ, ರಾಜ್ಯ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ.

ನಮ್ಮ ಭಾರತ ದೇಶವು 75 ನೇ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿರುವ ಸುಸಂದರ್ಭದಲ್ಲಿ ಆಗಸ್ಟ್ 15 ರಂದು ಸಂಸ್ಥೆಯ ಸಭಾಂಗಣದಲ್ಲಿ ಹಿಂದುಸ್ಥಾನಿ ಸರಕಾರಿ ಶಾಲೆ ತೋಕೂರು ಇಲ್ಲಿನ ಎಲ್ಲಾ ವಿಧ್ಯಾರ್ಥಿಗಳ ಪೋಷಕರಿಗೆ ದಾನಿಗಳಾದ ಮಾಸ್ಟರ್ ತಕ್ಷ್ ಕುಂದರ್ ದುಬೈ, ಶ್ರೀಮತಿ ಗುಲಾಬಿ ಪೂಜಾರ್ತಿ ದುಬೈ, ಶ್ರೀಮತಿ ಸೀಮಾ ಹಳೆಯಂಗಡಿ ಇವರ ಸಹಕಾರದೊಂದಿಗೆ ಸಂಸ್ಥೆಯ ವತಿಯಿಂದ ಸುಮಾರು 15,000/- ಮೌಲ್ಯದ ದಿನಬಳಕೆಯ ಆಹಾರ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.

t

ಕೊರೋನಾ ಸಂಕಷ್ಟದ ಪ್ರಾರಂಭದಿಂದಲೂ ಜನ ಸಾಮಾನ್ಯರಿಗೆ ತನ್ನಿಂದಾಗುವ ನೆರವು ನೀಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಹಲವಾರು ಕೊರೋನಾ ಜಾಗೃತಿ ಕಾರ್ಯಕ್ರಮ, ದಿನಸಿ ವಸ್ತುಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿದ್ದು ಅದರಂತೆ ತೋಕೂರು ಸರಕಾರಿ ಹಿಂದುಸ್ಥಾನಿ ಶಾಲೆಯ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಯ ವತಿಯಿಂದ ಶಾಲಾ ಚೀಲ, ಛತ್ರಿ, ಪುಸ್ತಕ, ಗುರುತಿನ ಚೀಟಿ ಇತ್ಯಾದಿಗಳನ್ನು ಉಚಿತವಾಗಿ ವಿತರಿಸುತ್ತಾ ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ಬೇಕಾದ ಪರಿಕರಗಳನ್ನು ಪೂರೈಸುತ್ತಾ ಬಂದಿದ್ದು ಇದೀಗ ನಮ್ಮ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸರಕಾರಿ ಶಾಲ ಮಕ್ಕಳ ಪೋಷಕರಿಗೆ ಅಕ್ಕಿ, ಬೇಳೆ ಮುಂತಾದ ದಿನಬಳಕೆಯ ದಿನಸಿ ಆಹಾರ ಸಮಾಗ್ರಿಗಳ ಕಿಟ್ ವಿತರಿಸುವ ಮೂಲಕ ನಮ್ಮ ಸಂಸ್ಥೆಯು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದೆ.

 ಈ ಸಂದರ್ಭದಲ್ಲಿ ನಿವೃತ್ತ ವೀರ ಯೋಧರಾದ ನಾಯಕ್ ಶ್ರೀ ಲೀಲಾಧರ್ ಕಡಂಬೋಡಿ, ದ.ಕ.ಜಿಲ್ಲಾ ಪಂಚಾಯತ್ ಇದರ ಮಾಜಿ ಸದಸ್ಯರು ವಿನೋದ್ ಕುಮಾರ್ ಬೊಳ್ಳೂರು,ಹಿಂದುಸ್ಥಾನಿ ಶಾಲೆ ತೋಕೂರು ಇದರ ಮುಖ್ಯೊಪಾಧ್ಯಾಯಿನಿ ಗುಲ್ಶನ್ ಬಾನು, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಯೋಗೀಶ್ ಕೋಟ್ಯಾನ್, ಸಂಸ್ಥೆಯ ಗೌರವ ಅಧ್ಯಕ್ಷರಾದ  ಮೋಹನ್ ದಾಸ್, ಅಧ್ಯಕ್ಷರಾದ  ಸಂತೋಷ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಲಾಲ್, ಕಾರ್ಯಾಧ್ಯಕ್ಷರಾದ  ಸುರೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕುಮಾರ್ ಬೇಕಲ್, ನಿಕಟ ಪೂರ್ವ ಗೌರವ ಅಧ್ಯಕ್ಷರಾದ ನಾರಾಯಣ್. ಜಿ. ಕೆ, ಗೌರವ ಮಾರ್ಗದರ್ಶಕರಾದ  ಲಕ್ಷ್ಮಣ್ ಕೆರೆಕಾಡು,ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಸದಸ್ಯ ಸಂತೋಷ್ ಕುಮಾರ್, ಸದಸ್ಯೆ ಜ್ಯೋತಿ ಕುಲಾಲ್,ಹಾಗೂ ಪುಷ್ಪ           ಕ್ಲಬ್ ನ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ .ವಿ.ಅಂಚನ್, ಮಹಿಳಾ ಕಾರ್ಯದರ್ಶಿ ಶ್ರೀಮತಿ ನೀಮಾ ಸನಿಲ್ ,ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು, ಮತ್ತಿತರರು,ಉಪಸ್ಥಿತರಿದ್ದರು

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.