ಜಿಲ್ಲಾ ಸುದ್ದಿಗಳು

ಉಡುಪಿ ಗ್ಯಾರೇಜ್ ಮಾಲಕರ, ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘ ನವೆಂಬರ್ 2 ರಂದು ಉದ್ಘಾಟನೆ

ಉಡುಪಿ: ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಸಹಕಾರದಲ್ಲಿ ಉಡುಪಿ ಗ್ಯಾರೇಜ್ ಮಾಲಕರ ಮತ್ತು ಕಾರ್ಮಿಕರ ಸೌಹಾರ್ದ ಸಹಕಾರಿ ಜಿ ಸಂಘದ ಉದ್ಘಾಟನೆಯು ನವೆಂಬರ್ 2 ರ ಬೆಳಗ್ಗೆ 10 ಕ್ಕೆ 6 ಉದ್ಯಾವರದ ಸೈಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್ ಸಭಾಂಗಣ ದಲ್ಲಿ ನಡೆಯಲಿದೆ.

ಅ.1 ರಂದು ಉದ್ಯಾವರ ವಿಜಯ ಕಾಂಪ್ಲೆಕ್ಸ್‌ನಲ್ಲಿ ಸೌಹಾರ್ದ ಸಹಕಾರಿ ಸಂಘವು ಅಧಿಕೃತವಾಗಿ ತನ್ನ ವ್ಯವಹಾರವನ್ನು ಆರಂಭಿಸಲಿದೆ. ಪ್ರಾರಂಭೋತ್ಸವದ ಪ್ರಯುಕ್ತ ಒಂದು ವರ್ಷದ ಅವಧಿಯ ಠೇವಣಿಗೆ ಶೇ. 10 ರಷ್ಟು 5 ವರ್ಷ ಅವಧಿಗೆ ವಿಶೇಷ ಠೇವಣಿ ಮೇಲೆ ಶೇ. 11ರಷ್ಟು ಬಡ್ಡಿದರ ನಿಗದಿ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಶೇ. 0.5ರಷ್ಟು ಹೆಚ್ಚುವರಿ ಬಡ್ಡಿದರ ಸಿಗಲಿದೆ. ನೆಫ್ಟ್ ಹಾಗೂ ಆರ್‌ಟಿಜಿಎಸ್ ಸೌಲಭ್ಯ, ಪರಿಶ್ರಮ ನಗದು ಪತ್ರ, ಪಿಗ್ನಿ ಆರ್‌ಡಿ ಸೌಲಭ್ಯ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಮಣಿಪಾಲ ತಿಳಿಸಿದರು.

ಉದ್ಘಾಟನೆಯನ್ನು ರಾಜ್ಯ ಸಹಕಾರಿ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ। ಎಂ.ಎನ್. ರಾಜೇಂದ್ರ ಕುಮಾರ್ ನೆರವೇರಿಸುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಂಜುನಾಥ ಮಣಿಪಾಲ ವಹಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ  ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಸಹಕಾರಿ ಇಲಾಖೆ ಉಪ ನಿಬಂಧಕಿ ಲಾವಣ್ಯ ಕೆ.ಆರ್., ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಸಹಕಾರಿ ಭಾರತಿ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ| ಬೆಳಪು ದೇವಿಪ್ರಸಾದ್ ಶೆಟ್ಟಿ ಸೈಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್‌ ನ ಧರ್ಮಗುರು ಫ್ರಾನ್ಸಿಸ್ ಅನಿಲ್ ಡಿ'ಸೋಜಾ ಮತ್ತಿತರ ಗಣ್ಯರು ಪಾಲ್ಗೊಳ್ಳುವರು ಎಂದರು.

ಸಂಘದ ಉಪಾಧ್ಯಕ್ಷ ರಾಜೇಶ್ ಎಸ್. ಜತ್ತನ್, ನಿರ್ದೇಶಕರಾದ ರೋಷನ್ ಬಿ. ಕರ್ಕಡ ಕಾಪು, ಪ್ರಭಾಕರ ಕೆ. ಉಡುಪಿ, ಎಸ್.ಜಿ. ಕೃಷ್ಣ ಕಟಪಾಡಿ, ಉದಯ ಕಿರಣ್ ಮಣಿಪಾಲ, ವಿನಯ ಕುಮಾರ್ ಕಲ್ಮಾಡಿ, ಸಿಇಒ ನವೀನ್ ಕುಮಾರ್ ಉದ್ಯಾವರ, ಗ್ಯಾರೇಜ್ ಮಾಲಕರ ಸಂಘದ ಚೇರ್ಮನ್ ವಿಲ್ಸನ್ ಅಂಚನ್ ಉಪಸ್ಥಿತರಿದ್ದರು.

ಕಾಮೆಂಟ್ ಬಿಡಿ

Join Us