ವಿಶ್ವಾದ್ಯಂತ ಕುಂಠಿತಗೊಂಡ ರಬ್ಬರ್ ಪೂರೈಕೆ. ರಬ್ಬರ್ ಧಾರಣೆಯಲ್ಲಿ ಏರಿಕೆ ಸಾಧ್ಯತೆ..!?

Rubber

ಮಂಗಳೂರು:ವಿಶ್ವಾದ್ಯಂತ ವಾಹನ ಉದ್ಯಮಕ್ಕೆ ಹೊಡೆತ ನೀಡುತ್ತಿದೆ ಕುಂಠಿತಗೊಂಡ ರಬ್ಬರ್ ಉತ್ಪಾದನೆ. ಕೋವಿಡ್ ಕೇವಲ ಮನುಷ್ಯರ ಆರೋಗ್ಯ ಕ್ಷೇತ್ರಕ್ಕೆ ಮಾತ್ರ ತೊಂದರೆ ನೀಡಿಲ್ಲ. ಪ್ರತಿಯೊಂದು ಕ್ಷೇತ್ರಕ್ಕೂ ಅದು ತೊಂದರೆ ನೀಡಿದೆ.
ವಾಹನದ ಟೈಯರ್ ಗಳಿಗೆ ಅವಶ್ಯಕವಾಗಿರುವ ರಬ್ಬರಿನ ಕೊರತೆ ಈಗ ವಾಹನ ಉದ್ಯಮವನ್ನು ವಿಶ್ವಾದ್ಯಂತ ಕಾಡುತ್ತಿದೆ. ನೈಸರ್ಗಿಕವಾಗಿ ರಬ್ಬರ್ ಬೆಳೆಯುವ ಪ್ರದೇಶಗಳಾದ ಇಂಡೋನೇಷ್ಯಾ, ಮಲೇಶಿಯಾ ಮತ್ತು ಭಾರತಗಳಲ್ಲಿ ರಬ್ಬರ್ ಉತ್ಪಾದನೆಯ ಉತ್ಪಾದನೆ ಮತ್ತು ಪೂರೈಕೆ ನಡುವೆ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಇದು ಮುಖ್ಯವಾಗಿ ಕೋವಿಡ್ ನ ಪರಿಣಾಮದಿಂದ ಉಂಟಾಗಿದೆ.

b


ಮುಖ್ಯವಾಗಿ ವಿಶ್ವದ ಬಹುದೊಡ್ಡ ವಾಹನ ಉದ್ಯಮದ ಕೇಂದ್ರವಾಗಿರುವ ಅಮೆರಿಕದ ಮೇಲೆ ಈ ಹೊಡೆತ ಬಹುವಾಗಿ ಬಿದ್ದಿದೆ. ರಬ್ಬರ್ ಪೂರೈಸುತ್ತಿರುವ ಥೈಲ್ಯಾಂಡ್ ಮತ್ತು ವಿಯೆಟ್ನಾಮ್ ದೇಶಗಳಿಂದ ಅಮೆರಿಕಕ್ಕೆ ಆಮದು ಕಡಿಮೆಯಾಗಿದೆ. ಇದರಿಂದ ಅಮೆರಿಕದ ವಾಹನ ಉದ್ಯಮದವರು ತಮ್ಮ ಬೇಡಿಕೆಗೆ ಅನುಗುಣವಾಗಿ ರಬ್ಬರ್ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

cv


ಪೂರೈಕೆ ತೊಂದರೆಯಿಂದಾಗಿ ರಬ್ಬರಿನ ಕೊರತೆ  ಕಂಡುಬಂದಿರುವುದರಿಂದ ಮುಂದಿನ ದಿನಗಳಲ್ಲಿ ರಬ್ಬರ್ ಧಾರಣೆ ಏರಿಕೆಯಾಗುವ ಲಕ್ಷಣಗಳು ಕಂಡು ಬರಬಹುದು ಎಂದು ಉದ್ಯಮ ಮೂಲಗಳ ವರದಿಗಳು ತಿಳಿಸಿದೆ.

  • ನ್ಯೂಸ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.