ವಾವ್..! ಸಂಜಿತ್ ಹೆಗ್ಡೆ ಹಾಡಿರೋ ಈ ಹಾಡು ಕೇಳಿದ್ದೀರಾ ನೀವು..!? 

ಬೆಂಗಳೂರು: ಸೂರಜ್ ಗೌಡ ನಿರ್ದೇಶನ ಮಾಡಿ, ನಾಯಕ ನಟನಾಗಿ ಅಭಿನಯಿಸ್ತಿರೋ ನಿನ್ನ ಸನಿಹಕೆ ಸಿನಿಮಾದ ಮತ್ತೊಂದು ಮೆಲೋಡಿ ಟ್ರ‍್ಯಾಕ್ ಬಿಡುಗಡೆಗೊಂಡಿದ್ದು...ಸಿಕ್ಕಾಪಟ್ಟೆ ಸದ್ದು ಮಾಡತೊಡಗಿದೆ. 

ಈಗಾಗಲೇ,  ರಘು ದೀಕ್ಷಿತ್ ಕಂಪೋಸ್ ಮಾಡಿ, ಹಾಡಿರೋ ಮಳೆ ಮಳೆ ಸಾಂಗ್ ಪ್ರೇಮಿಗಳ ಹೃದಯ ಕದ್ದಿದ್ದು, ಸದ್ಯ ರಿಲೀಸ್ ಆಗಿರೋ ‘ನಿನ್ನ ಸನಿಹಕೆ’ ಟೈಟಲ್ ಸಾಂಗಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.  ಈ ಬ್ಯೂಟಿಫುಲ್ ಮೆಲೋಡಿ ಟ್ರ‍್ಯಾಕ್ ಕೇಳುಗರನ್ನು...ನಿಂತಲ್ಲಿ ಕುಂತಲ್ಲಿ ಗುನು-ಗುನುಗುವಂತೆ ಮಾಡುತ್ತಿದೆ.

ninna sanihake

ಹೃದಯದ ಪರಿಪಾಡು ಹೀಗೇಕೆ ಅಂತಾ ಶುರುವಾಗುವ ಹಾಡು ಸಖತ್ ಯೂತ್‌ಫುಲ್ ಆಗಿದ್ದು...ಯುವ ಮನಸುಗಳನ್ನು ಲವ್ ಮೂಡ್‌ಗೆ ಕರೆದೊಯ್ಯುತ್ತಿದೆ. ಸಂಜಿತ್ ಹೆಗಡೆ ಮತ್ತು ಶೃತಿ ಅವರ ಸುಮಧುರ ಸ್ವರ ಮಾಧುರ್ಯ, ವಾಸುಕಿ ವೈಭವ ಅವರ ಸಾಹಿತ್ಯ ಸುಧೆ, ರಘು ದೀಕ್ಷಿತ್ ಅವರ ಸಂಗೀತ ಸಂಯೋಜನೆ ಇರೋ ಈ ಹಾಡು ಇದೀಗ ಯೂಟ್ಯೂಬ್‌ನಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ.

ninna sanihake

ಸಾಕಷ್ಟು ಮ್ಯೂಸಿಕಲ್ ಹಿಟ್ ಕೊಟ್ಟಿರೋ ರಘು...ಭತ್ತಳಿಕೆಗೆ ಈ ಹಾಡು ಸೇರೋದು ಪಕ್ಕಾ ಎನ್ನಲಾಗ್ತಿದೆ. ಅಕ್ಷಯ ರಾಜಶೇಖರ್ ಮತ್ತು ರಂಗನಾಥ್ ಬಂಡವಾಳ ಹೂಡಿರೋ ನಿನ್ನ ಸನಿಹಕೆ ಸಿನಿಮಾದಲ್ಲಿ ಸೂರಜ್ ಗೌಡಗೆ ಜೊತೆಯಾಗಿ ದೊಡ್ಮನೆ ಕುಡಿ ಧನ್ಯ ರಾಮ್ ಕುಮಾರ್ ನಟಿಸ್ತಿದ್ದಾರೆ. ಈಗಾಗ್ಲೇ ಶೂಟಿಂಗ್ ಮುಗಿಸಿರೋ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿ ಇದ್ದು, ಏಪ್ರಿಲ್ ಕೊನೆ ವಾರದಲ್ಲಿ ತೆರೆಗೆ ಬರಲು ರೆಡಿಯಾಗ್ತಿದೆ.

ninna sanihake
  • ಫಿಲಂ ಬ್ಯೂರೋ, ಟ್ರೂನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.