ಉಡುಪಿಯಲ್ಲಿ ಲಕ್ಷದ್ವೀಪೋತ್ಸವಕ್ಕ ಚಾಲನೆ.

Krishna Math

ಉಡುಪಿ : ಕೃಷ್ಣಮಠ ದಲ್ಲಿ ಅದ್ಧೂರಿಯ ಲಕ್ಷ ದ್ವೀಪ ಆರಂಭವಾಗಿದೆ. ಶ್ರೀಕೃಷ್ಣ ಮಠದ ಪರಿಸರ, ಮಧ್ವ ಸರೋವರ, ರಥಬೀದಿಯ ಸುತ್ತಮುತ್ತ ಲಕ್ಷಕ್ಕೂ ಅಧಿಕ ಹಣತೆಯ ದೀಪಗಳು ಕಂಗೊಳಿಸುತ್ತಿದೆ.  ವರ್ಣವೈವಿಧ್ಯದ ವಿದ್ಯುದ್ವೀಪ ಗಳು ಸಂಜೆಯ ವೇಳೆ ಬೆಳಗಿ ರಥಬೀದಿ ಪರಿಸರ  ಎಲ್ಲರ ಗಮನ ಸೆಳೆಯುತ್ತಿದೆ. 

ಮಧ್ವಸರೋವರದಲ್ಲಿ ಮಂಟಪದ ರೀತಿಯಲ್ಲಿ ಅಲಂಕೃತ ದೋಣಿಯಲ್ಲಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ಉತ್ಸವಮೂರ್ತಿಗಳನ್ನು ಪ್ರದಕ್ಷಿಣೆ  ತೆಪ್ಪೋತ್ಸವ ಪರ್ಯಾಯ ಶ್ರೀಗಳ ನೇತೃತ್ವದಲ್ಲಿ ನಡೆಯಿತು  ನಡೆಯಿತು.

truenewskaanada

 ರಥಬೀದಿಯ ಸುತ್ತಲೂ ಇರಿಸಿದ ಸಾವಿರಾರು  ಮಣ್ಣಿನ ಹಣತೆಯಲ್ಲಿ ಸಾರ್ವಜನಿಕರು ದೀಪವನ್ನು ಬೆಳಗಿಸುವ ಮೂಲಕ ಲಕ್ಷದೀಪೋತ್ಸವ ಆರಂಭಗೊಂಡಿತು.

 ಕೃಷ್ಣ ಹಾಗೂ ಮುಖ್ಯ ಪ್ರಾಣರ ಉತ್ಸವ ಮೂರ್ತಿಯನ್ನಿರಿಸಿದ ಗರುಡ ರಥ ಹಾಗೂ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ಉತ್ಸವ ಮೂರ್ತಿಯನ್ನಿರಿಸಿದ ಮಹಾಪೂಜಾ ರಥಗಳು ರಥಬೀದಿಯ ಸುತ್ತ ಸಾಗಿ ಬರುವಾಗ ಭಕ್ತರು ಪುಳಕಗೊಂಡರು. ಉತ್ಸವದಲ್ಲಿ ಅಷ್ಟ ಮಠಗಳ ಯತಿಗಳು ಉಪಸ್ಥಿತರಿದ್ದರು.

  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.