ಇಂದಿನ ಆಧುನಿಕ ಯುಗದಲ್ಲಿ ಮನುಷ್ಯನ ಆಹಾರ ಶೈಲಿ ಬದಲಾವಣೆಗೊಂಡು ಆತ 20ರ ವಯಸ್ಸು ದಾಟುವಾಗಲೇ ತುಂಬಾ ತೂಕ ಹೊಂದಿ ಬಿಡುತ್ತಾನೆ. ಅಡ್ಡ ದಿಡ್ಡಿಯಾಗಿ ಬೆಳೆದು ಅನೇಕ ಕಾಯಿಲೆಗಳಿಗೆ ತುತ್ತಾಗುದಲ್ಲದೆ ಅಪಹಾಸ್ಯ ಈಡಾಗುವುದು ಉಂಟು ಹಾಗಾದರೆ ತೂಕವನ್ನು ಇಳಿಸುವುದು ಹೇಗೆ ಎಂದು ಉಪಾಯ ಹೇಳುತ್ತೇವೆ.
ಅನಗತ್ಯ ಕೊಬ್ಬನ್ನು ಕರಗಿಸಿವಲ್ಲಿ ಜೇನು ತುಪ್ಪ ಉತ್ತಮ ಔಷಧವಾಗಿದೆ. ಜೇನು ತುಪ್ಪ ದ್ರವಾಂಶವಾಗಿರುವ ಕಾರಣ ಇದನ್ನು ಆಹಾರದಲ್ಲೂ ಕೂಡ ಸೇರಿಸಿ ತಿನ್ನಬಹುದಾಗಿದೆ. ಹಾಗೇ ಜೇನು ಹಾಲಿನೊಂದಿಗೆ ಬೆರೆಯುವ ರೀತಿಯನ್ನ ಕವಿಗಳೇ ಬಣ್ಣಿಸಿದ್ದರು ಅದಷ್ಟೇ ಅಲ್ಲದೆ ಜೇನನ್ನು ನಾವು ಟಿ ಕಾಫಿ ಸಲಾಡ್ ಬ್ರೆಡ್ ಜಾಮ್ ಆಗಿ ಕೂಡ ಸೇವಿಸಬಹುದಾಗಿದೆ. ದೇಹಕ್ಕೆ ಉತ್ತಮವಾದ ಗ್ರೀನ್ ಟೀನೊಂದಿಗೆ ಜೇನು ಸೇರಿಸಿ ಕುಡಿದರೆ ತೂಕ ಕಮ್ಮಿಯಾಗುತ್ತದೆ.
ಹಾಗಾಗಿ ನೀವು ತೂಕವನ್ನು ಇಳಿಸಲು ಇಷ್ಟ ಪಡುವವರಾಗಿದ್ದರೆ ನಿಮ್ಮ ಆಹಾರದಲ್ಲಿ ಸ್ವಲ್ಪ ಜೇನು ಬಳಸಿದರೆ ನಿಮ್ಮ ತೂಕ ಕಮ್ಮಿಯಾಗುತ್ತದೆ. ಹಾಗಾದರೆ ಯಾವ ಯಾವ ಆಹಾರಕ್ಕೆ ಜೇನು ಬಳಸಿದರೆ ಉತ್ತಮ ಎನ್ನುವುದಕ್ಕೆ ಉತ್ತರ ಇಲ್ಲಿದೆ.
- ಗೋಧಿಯ ಬ್ರೆಡ್ : ಗೋಧಿಯ ಬ್ರೆಡ್ ನ್ನ 2 ಪೀಸ್ ಗಳನ್ನು ತಗೆದುಕೊಂಡು ಅದರ ಒಂದು ಭಾಗಕ್ಕೆ ಜೇನು ಸವರಿ ರಾತ್ರಿ ಊಟದ ಬದಲು ಸೇವಿಸಬೇಕು ನಂತರ ನೀರನ್ನು ಹೆಚ್ಚಾಗಿ ಸೇವಿಸಬೇಕು ಹೇಗೆ ಮಾಡಿದಲ್ಲಿ ನಿಮ್ಮ ತೂಕ ಕಮ್ಮಿಯಾಗುತ್ತದೆ.
- ಅಡುಗೆಯಲ್ಲಿ ಜೇನು : ಸಾಮಾನ್ಯವಾಗಿ ನಾವು ಅಡುಗೆ ಮಾಡುವಾಗ ಎಣ್ಣೆ ಹಾಗೂ ಸಕ್ಕರೆ ಎಲ್ಲೆಲ್ಲಿ ಬಳಸುತ್ತಿರೋ ಅಲ್ಲಿ ಜೇನನ್ನು ಬಳಸಿದರೆ ನಿಮ್ಮ ಆಹಾರ ಕೂಡ ಚೆನ್ನಾಗಿರುತ್ತೆ ಹಾಗೂ ತೂಕವು ಕಮ್ಮಿಯಾಗುತ್ತದೆ. ಉದಾಹರಣೆ ನೀವು ಚಪಾತಿ ಮಾಡುವಾಗ ಎಣ್ಣೆ ಬಳಸುವ ಬದಲು ತುಪ್ಪ ಬಳಸಿ ಚಪಾತಿ ಉಬ್ಬಿ ತಿನ್ನಲು ಕೂಡ ಉತ್ತಮವಾಗಿರುತ್ತದೆ.
- ಹಾಲಿನೊಂದಿಗೆ ಜೇನು ಸೇರಿಸಿ ಕುಡಿಯಿರಿ : ಹಾಲಿನ ಜೊತೆ ಸ್ವಲ್ಪ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಬೇಕು ಹೀಗೆ ಮಾಡಿದಲ್ಲಿ ನಿಮ್ಮ ತೂಕ ಕಡಿಮೆಯಾಗುತ್ತದೆ ಇದಕ್ಕಾಗಿ ಹಾಲನ್ನು ಉಪಯೋಗಿಸುವ ಬದಲು ಹಾಲಿನ ಪುಡಿಯನ್ನು ಉಪಯೋಗಿಸಿ ಏಕೆಂದರೆ ಅದರಲ್ಲಿ ಕಡಿಮೆ ಕ್ಯಾಲೋರಿ ಇರುವ ಕಾರಣ ಜೇನು ಅದರೊಡನೆ ಸೇರಿದಾಗ ಕೊಬ್ಬನ್ನು ಕರಗಿಸಲು ಸಹಾಯಮಾಡುತ್ತೆ.
- ಬಿಸಿ ನೀರಿಗೆ ಜೇನು ಬೆರೆಸಿ : ನಿಮ್ಮ ತೂಕ ಕಮ್ಮಿ ಮಾಡಲು ಉಗರು ಬೆಚ್ಚಿಗಿನ ನೀರಿಗೆ 2 ದೊಡ್ಡ ಚಮಚ ತುಪ್ಪವನ್ನು ಸೇರಿಸಿ ಹಾಗೇ ಸ್ವಲ್ಪ ಲಿಂಬೆ ರಸ ಸೇರಿಸಿ ಬೆಳಗ್ಗೆ ಕುಡಿದರೆ ನಿಮ್ಮ ತೂಕ ಕಮ್ಮಿಯಾಗುತ್ತದೆ.