ಸಿಗಂದೂರು ಜಾತ್ರೆ : ಸರಳವಾಗಿ ಮೂಲ ಸ್ಥಳ ಪೂಜೆ.

ಶಿವಮೊಗ್ಗ: ( ಸಿಗಂದೂರು) ಇಲ್ಲಿನ ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದಲ್ಲಿ ಇಂದು ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ ಸರಳವಾಗಿ ನಡೆಯಿತು. 

ಎಂದಿನಂತೆ ಸರ್ಕಾರದ ಮಾರ್ಗಸೂಚಿಯಂತೆ ದರ್ಶನಕ್ಕೆ ಮಾತ್ರಅವಕಾಶ ನೀಡಿದ ದೇವಸ್ಥಾನದ ಆಡಳಿತ ಮಂಡಳಿ. ಶ್ರೀ ದೇವಿಯ ಮೂಲ ಸ್ಥಾನದ ಪೂಜಾಕಾರ್ಯದಲ್ಲಿ ಧರ್ಮಾಧಿಕಾರಿಗಳ ಕುಟುಂಬಸ್ಥರಿಗೆ  ಮಾತ್ರ ಅವಕಾಶ ಕಲ್ಪಿಸಲಾಗಿದ್ದರಿಂದ ವಿದ್ದರಿಂದ ಭಕರ ಸಂಖ್ಯೆ ಸಾಕಷ್ಟು ವಿರಳವಾಗಿತ್ತು ಶ್ರೀ ದೇವಿಯ ಮೂಲ ಸ್ಥಳ ಪೂಜೆಗೆ ಧರ್ಮಸ್ಥಳದ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀಗಳು ಪಾಲ್ಗೊಂಡಿದ್ದರು ಅಖಂಡ ಜ್ಯೋತಿಯನ್ನು ಧರ್ಮಾಧಿಕಾರಿಗಳಾದ ಡಾ ಎಸ್ ರಾಮಪ್ಪನವರು ಬೆಳಗುವ ಮೂಲಕ ಸೀಗೆ ಕಣಿವೆಯಿಂದ ಈಗಿನ ದೇವಿಯ ಸನ್ನಿಧಿಯಾದ ಸಿಗಂದೂರಿಗೆ ಜ್ಯೋತಿಯ ರೊಪದಲ್ಲಿ ತಂದು ಶ್ರೀ ದೇವಿಗೆ  ಸರ್ವ ಪೂಜೆ ನೇರವೇರಿಸಲಾಯಿತು. 


ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಭಕ್ತಾದಿಗಳಿಗೆ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶ ವಿರಲಿಲ್ಲ ಸಂಕ್ರಾಂತಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಚಂಡಿಕಾ ಹವನ. ಮಹಾಭೀಷೇಕ. ಅಲಂಕಾರ ಪೂಜೆ. ಗುರು ಪಾದ ಪೂಜೆ ನಡೆಯಿತು. 

truenewskaanada

ನೆಡೆದಾಡುವ ದೇವರು ಗೀತೆ ಲೋಕಾರ್ಪಣೆ: ಇದೇ ವೇಳೆ ಸಮೀಪದ ಚಂದ್ರಪ್ಪ ಅಳೂರು ರಚಿಸಿರುವ  ಹಾಗೂ ಸಂಗೀತ ಸಂಯೋಜನೆ ಶ್ರೀ ಹರ್ಷ ಪ್ರಭಾಕರವರ  ಮಲೆನಾಡಿನ ನೆಡೆದಾಡುವ ದೇವರು ಎಂಬ ಚೊಚ್ಚಲ ಗೀತೆಯನ್ನು  ಧರ್ಮಾಧಿಕಾರಿಗಳು ಬಿಡುಗಡೆ ಮಾಡಿದರು. 

ಭಕ್ತಾದಿಗಳು ಯಾವುದೇ ತೀರ್ಥ ಪ್ರಸಾದ ವಿನಿಯೋಗ ವಿರಲಿಲ್ಲ. ಮಾಸ್ಕ್ ಧರಿಸದೆ ಬಂದ ಹಲವಾರು ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ವೇದಿಕೆ ಕಾರ್ಯಕ್ರಮ ನಿರ್ಬಂಧ ವಿಧಿಸಿದ್ದರಿಂದ ಯಕ್ಷಗಾನ ಪ್ರದರ್ಶನ. ಸಾಂಸ್ಕೃತಿಕ ಕಾರ್ಯಕ್ರಮಗಳು. ತಾಳಮದ್ದಲೆ ಸೇರಿದಂತೆ ಹಲವು ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದರಿಂದ ಕಲಾ ಪೇಮಿಗಳಲ್ಲಿ  ನಿರಾಸೆ ಕಂಡುಬಂದಿತು. 

ಶಾಸಕರ ಬೇಟಿ: ಸ್ಥಳಿಯ ಶಾಸಕರಾದ ಹರತಾಳು ಹಾಲಪ್ಪ  ಸಹ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದರು. ಸರ್ಕಾರದ ನಿರ್ಬಂಧ ಹಿನ್ನೆಲೆಯಲ್ಲಿ ಸರಳವಾಗಿ ಜಾತ್ರಾ ಮಹೋತ್ಸವ ನಡೆಸಿದ್ದೇವೆ. ಸಹಕಾರ ನೀಡಿದ ಭಕ್ತಾದಿಗಳಿಗೆ ಧನ್ಯವಾದಗಳು ರವಿಕುಮಾರ್ ಹೆಚ್ ಆರ್ ಕಾರ್ಯದರ್ಶಿ, ಶ್ರೀ ಕ್ಷೇತ್ರ ಸಿಗಂದೂರು.

  • ವರದಿ: ಸುಕುಮಾರ್ ಎಂ. ಶಿವಮೊಗ್ಗ 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.