ಒದ್ದೆ ಕೂದಲಿನ ಆರೈಕೆಗೆ ಸುಲಭ ಸೂತ್ರ

ಕೂದಲು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ರೇಷ್ಮಯಂತಹ ನುಣುಪಾದ ಕೂದಲು ಇರಬೇಕು ಎನ್ನುವುದು ಪ್ರತಿಯೊಂದು ಹೆಣ್ಣಿನ ಬಯಕೆ ಆಗಿರುತ್ತದೆ. ಹೀಗಾಗಿ ಕೂದಲ ಅಂದವನ್ನು ಹೆಚ್ಚಿಸಲು ಪಾರ್ಲರ್‌ಗಳ ಮೊರೆ ಹೋಗುವುದಂತೂ ಈಗ ಸಾಮಾನ್ಯವಾಗಿ ಬಿಟ್ಟಿದೆ. 

wet hair sollution


ಹೀಗಿದ್ದರೂ ಮನೆಯಲ್ಲಿ ತಲೆ ಸ್ನಾನದ ನಂತರ ಒದ್ದೆ ಕೂದಲುಗಳ ಬಗ್ಗೆ ಕಾಳಜಿ ವಹಿಬೇಕು ಎಂಬುದು ಕೂಡ ಅಷ್ಟೇ ಮುಖ್ಯ. ಕೂದಲು ಉದುರುವುದು, ಕವಲೊಡೆಯುವುದು, ತುಂಡಾಗುವುದು ಇವುಗಳಿಗೆಲ್ಲ ಕಾರಣ ಸರಿಯಾದ ಆರೈಕೆ ಇಲ್ಲದೆ ಇರುವುದು. ನಿಮ್ಮ ಕೂದಲು ಚೆನ್ನಾಗಿರಬೇಕು ಎಂದರೆ ಅದರ ಆರೈಕೆ ಸರಿಯಾಗಿರಬೇಕು. ಒದ್ದೆ ಇರುವಾಗ ನಿಮ್ಮ ಕೂದಲನ್ನು ಹೇಗೆ ಆರೈಕೆ ಮಡುತ್ತೀರಿ ಎಂಬುದು ಅತೀ ಮುಖ್ಯವಾಗಿದೆ. ಹೀಗಾಗಿ ಕೂದಲು ಒದ್ದೆ ಇರುವಾಗ ಅದರ ಆರೈಕೆ ಹೀಗೆ ಮಾಡಿ.

wet hair sollution


*ಕಠಿಣವಾಗಿ ಬಾಚುವುದನ್ನು ನಿಲ್ಲಿಸಿ
ಜೋರಾಗಿ ಒತ್ತಿ ಬಾಚುವುದರಿಂದ ಕೂದಲು ಉದುರಲು ಮತ್ತು ಕವಲೊಡೆಯಲು ಪ್ರಾರಂಭವಾಗುತ್ತದೆ. ಕೂದಲು ಒದ್ದೆ ಇರುವಾಗ ಜೋರಾಗಿ ಬಾಚುದನ್ನು ನಿಲ್ಲಿಸಿ ಮತ್ತು ಕೂದಲು ಹಾನಿಗೊಳಗಾಗುದನ್ನು ನಿಗ್ರಹಿಸಿ.

wet hair sollution


*ಕೂದಲನ್ನು ಬಿಸಿ ಗಾಳಿಯಲ್ಲಿ ಒಣಗಿಸಬೇಡಿ
ಬಿಸಿ ಗಾಳಿ(ಹೇರ್ ಡ್ರೈಯರ್) ಮೂಲಕ ಕೂದಲನ್ನು ಒಣಗಿಸಿಕೊಂಡರೆ ಅದರಿಂದ ಕೂದಲಿಗೆ ಹಾನಿಯಾಗುತ್ತದೆ. ನೇರ ಬಿಸಿ ಗಾಳಿಯಿಂದಾಗಿ ಕೂದಲು ಇನ್ನಷ್ಟು ಶುಷ್ಕವಾಗಿ ತಲೆಹೊಟ್ಟು ಪ್ರಾರಂಭವಾಗುತ್ತದೆ.

wet hair sollution


*ತಲೆ ಸ್ನಾನದ ನಂತರ ತಕ್ಷಣ ಹೊರಗೆ ಹೋಗಬೇಡಿ 
ಸೂರ್ಯನ ಬಿಸಿಲಿಗೆ ಒದ್ದೆ ಕೂದಲು ಬೇಗ ರಫ್ ಆಗಿ ಬಿಡುತ್ತದೆ. ಕೂದಲಿನಲ್ಲಿರು ನಯವನ್ನು ಸೂರ್ಯನ ಶಾಖ ಹೀರಿಕೊಂಡು ತಲೆ ನೋವು ಬರುವ ಸಾಧ್ಯತೆಗಳು ಹೆಚ್ಚು ಮತ್ತು ಕೂದಲು ಉದುರುವುದು ಹೆಚ್ಚಾಗುತ್ತೆದೆ. ಗುಂಗುರು ಕೂದಲು ಇರುವವರು ಪ್ರತ್ಯೇಕವಾಗಿ ಗಮನದಲ್ಲಿಡಬೇಕಾದ ಅಂಶವಾಗಿದೆ.

wet hair sollution


*ಕೂದಲನ್ನು ಬೆರಳುಗಳಿಂದ ನೇರಗೊಳಿಸಿ
ಒಣಗಿದ ಕೂದಲಿಗಿಂತ ಒದ್ದೆ ಕೂದಲು 3 ಪಟ್ಟು ಹೆಚ್ಚು ಬಲಹೀನವಾಗಿರುತ್ತದೆ. ಹೀಗಾಗಿ ಬೆರಳುಗಳಿಂದ ಕೂದಲ ಸಿಕ್ಕನ್ನು ಬಿಡಿಸುವುದರಿಂದ ಕೂದಲು ಉದುರುವುದು ತಪ್ಪುತ್ತದೆ.

wet hair sollution


*ಬ್ಯಾಂಡ್ ಅನ್ನು ಗಟ್ಟಿಯಾಗಿ ಕಟ್ಟಬೇಡಿ
ಒದ್ದೆ ಕೂದಲು ತುಂಬಾ ಸೂಕ್ಷವಾಗಿರುತ್ತದೆ. ಅದಕ್ಕೆ ಗಟ್ಟಿಯಾಗಿ ಬ್ಯಾಂಡ್ ಅನ್ನು ಬಳಸಿದರೆ ಕೂದಲು ಉದುರುದು ಹೆಚ್ಚಾಗುತ್ತದೆ.

wet hair sollution


*ಒದ್ದೆ ಕೂದಲಿಗೆ ತುಂಬಾ ಹೊತ್ತು ಟವೆಲ್ ಕಟ್ಟಬೇಡಿ.

ಒದ್ದೆ ಕೂದಲಿಗೆ ತುಂಬಾ ಹೊತ್ತು ಟವೆಲ್ ಕಟ್ಟುವುದರಿಂದಲು ಕೂದಲು ಸಹಜವಾಗಿ ಒಣಗುವುದನ್ನು ತಪ್ಪಿಸುತ್ತದೆ. ಇದರಿಂದ ಕೂದಲಿನ ತೇವಾಂಶ ಬೇಗ ಹೀರಿಕೊಂಡು ಕೂದಲಿನ ನಯತೆಯನ್ನು ಕಡಿಮೆ ಮಾಡುತ್ತೆದೆ.

wet hair sollution


*ಬಾಚಣಿಗೆಯನ್ನು ಬಳಸಬೇಡಿ.
ಒದ್ದೆ ಕೂದಲಿಗೆ ಬಾಚಣಿಗೆ ಬಳಸಬೇಕೆಂದರೆ ಎರಡು ಬಾರಿ ಯೋಚಿಸಲೇಬೇಕು. ಉದ್ದ ಹಲ್ಲಿನ ಬಾಚಣಿಗೆ ಒದ್ದೆ ಕೂದಲನ್ನು ಹಾಳು ಮಾಡಬಹುದು. ಅಗತ್ಯವಿದ್ದಲ್ಲಿ ಅಗಲವಾಗಿರುವ ಹಲ್ಲಿನ ಬಾಚಣಿಗೆಯನ್ನು ಮಾತ್ರ ಬಳಸಿ.

wet hair sollution


*ಒದ್ದೆ ಕೂದಲಿಗೆ ಮಸಾಜ್ ಮಾಡುವುದನ್ನು ಬಿಡಿ
ತಲೆಗೆ ಸ್ನಾನ ಮಾಡಿದ ತಕ್ಷಣ ಮಸಾಜ್ ಮಾಡುವುದು ತುಂಬಾ ಹಾನಿಕಾರ. ಒದ್ದೆ ಕೂದಲು ತುಂಬಾ ಶಕ್ತಿಹೀನವಾಗಿರುತ್ತದೆ. ಸ್ವಚ್ಛ ಮತ್ತು ಆರೋಗ್ಯಯುತ ಕೂದಲಿಗಾಗಿ ಕೂದಲು ಒಣಗುವವರೆಗೆ ಕಾಯಬೇಕು. 

 

  • ಸುಲಭ.ಆರ್. ಭಟ್
  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.