ನಮ್ಮ ಜವನೆರ್ ಕಲ್ಲಾಪು : ಪುರುಷರ ವಿಭಾಗದ ಮುಕ್ತ ವಾಲಿಬಾಲ್ ಪಂದ್ಯಾಟ.

ನಮ್ಮ ಜವನೆರ್ ಕಲ್ಲಾಪು

ಮುಲ್ಕಿ:  ಬಡಕುಟುಂಬದ ವೈದ್ಯಕೀಯ ಚಿಕಿತ್ಸೆ ಮತ್ತು ಆರ್ಥಿಕ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಆಸರೆಯಾಗುವ ಯೋಜನೆ. ನಮ್ಮ ಜವನೆರ್ ಕಲ್ಲಾಪು ತಂಡವು ಪುರುಷರ ವಿಭಾಗದ ಮುಕ್ತ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಿದೆ.

ಈ ಪಂದ್ಯಾಟವು ತಾರೀಕು 27/11/ 2022 ರವಿವಾರ ಹಳೆಯಂಗಡಿ, ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಬಳಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಮಾನಾಥ್ ಕೋಟ್ಯಾನ್ ಮುಲ್ಕಿ-ಮೂಡಬಿದ್ರೆ ಶಾಸಕರು ಹಾಗೂ ಊರಿನ ಗಣ್ಯರನ್ನು ಸೇರಿಸಿಕೊಂಡು ಈ  ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ.  ಸುಮಾರು 30ಕ್ಕೂ ಅಧಿಕ ತಂಡಗಳು ಭಾಗವಹಿಸಲಿದೆ.

ಪ್ರಥಮ ಬಹುಮಾನ 20,000 ಮತ್ತು ಶಾಶ್ವತ ಫಲಕ. ತೃತೀಯ ಬಹುಮಾನ 10,000 ಮತ್ತು ಶಾಶ್ವತ ಫಲಕ. ತೃತೀಯ ಬಹುಮಾನ 5,000 ರೂಪಾಯಿ ಮತ್ತು ಶಾಶ್ವತ ಫಲಕ. ಉತ್ತಮ ಆ್ಯಟಾಜರ್, ಉತ್ತಮ ಪಾಸರ್, ಉತ್ತಮ ಆಲ್ರ ರೌಂಡರ್ ಗಳನ್ನು ಗೌರವಿಸಲಾಗುವುದು.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.