ನಾವು ಪರೀಕ್ಷೆ ಪಾಸ್ ಆಗಿದ್ದೇವೆ. ಫಲಿತಾಂಶ ಬಂದಾಯ್ತು ಅಲ್ವಾ..?

ಚಿಕ್ಕಬಳ್ಳಾಪುರ : ನಾವು ಪರೀಕ್ಷೆ ಪಾಸ್ ಆಗಿದ್ದೇವೆ. ಫಲಿತಾಂಶ ಬಂದಾಯ್ತು ಅಲ್ವಾ? ಎಂದು ಸಚಿವ ಸಿ.ಪಿ. ಯೋಗೇಶ್ವರ್ ಮಾರ್ಮಿಕವಾಗಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ. ಯೋಗೀಶ್ವರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರದು ಸದಾ ದ್ವಂದ್ವ ನಿಲುವು ಎಂದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಹತ್ತಿರ ಹೋಗಿ ಕೆಲಸ ಮಾಡಿಸಿಕೊಳ್ಳುತ್ತಾರೆ. ನಂತರ ಯಡಿಯೂರಪ್ಪನವರನ್ನು ಕುಮಾರಸ್ವಾಮಿ ದೂಷಣೆ ಮಾಡುತ್ತಾರೆ. ಹೆಚ್.ಡಿ. ಕುಮಾರಸ್ವಾಮಿ ಅವರನ್ನು ದೂರ ಇಡಬೇಕು ಎಂದು ನಾನು ಹೇಳುತ್ತಿದ್ದೆ. ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು, ನಂಬಬಾರದು ಎಂದು ಹೇಳುತ್ತಿದ್ದೆ ಎಂದು ಹೇಳಿದರು. ಯಾರಿಗೂ ಯಾವುದು ಶಾಶ್ವತವಲ್ಲ, ನಾವೇನು ಶಾಶ್ವತವಾಗಿ ಮಂತ್ರಿಗಳಾಗಿ ಇರುವುದಿಲ್ಲ. ಈಗ ನಮ್ಮದು ಒಂದೇ ಪಕ್ಷದ ಸರ್ಕಾರವಾಗಿದೆ ಎಂದರು.

 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.