ಮಕರ ಸಂಕ್ರಾಂತಿ ಪ್ರಯುಕ್ತ ಇಂದು ಬಿಡುಗಡೆಯಾಗಲಿದೆ ಸ್ವಾಮಿ ಶರಣಂ ಅಯ್ಯಪ್ಪ ಭಕ್ತಿ ಗೀತೆ

ಬಂಟ್ವಾಳ: ಇಂದು ಮಕರ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ....ಯುವ ಸಾಹಿತಿ ಜಗದೀಶ್ ಬೆಳ್ಳಾರೆ ವಿರಚಿತ "ಸ್ವಾಮಿ ಶರಣಂ ಅಯ್ಯಪ್ಪ" ಎಂಬ ಭಕ್ತಿ ಗೀತೆಯು ನಾದಂ ಕ್ರಿಯೇಷನ್ ಯೂಟ್ಯೂಬ್ ಚಾನಲ್‌ನಲ್ಲಿ ಇಂದು ಸಂಜೆ 6:30ಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. 

devotional song


ಈ ಭಕ್ತಿ ಗೀತೆಯನ್ನು ಯಶು ಸ್ನೇಹಗಿರಿ, ನಯನಾಡು ಇವರು ನಿರ್ದೇಶನ ಮಾಡಿದ್ದು...ಬೇಬಿ ಚಂದನ ಬೆಂಜನಪದವು ಅವರ ಕಂಠದಲ್ಲಿ ಮೂಡಿ ಬಂದಿದೆ. ಈ ಭಕ್ತಿಗೀತೆಗೆ ಸಾಹಿತ್ಯವನ್ನು ಬರೆದಿರುವ ಜಗದೀಶ್ ಬೆಳ್ಳಾರೆ ಅವರ ಕಿರು ಪರಿಚಯವನ್ನು ತಿಳಿಯೋಣ ಬನ್ನಿ. ಸಾಹಿತ್ಯ ರಚನೆ, ಕವಿತೆ, ಸಣ್ಣಕತೆ ರಚನೆ, ನಿರೂಪಣೆ, ಶುಭಾಶಯ ಸಂದೇಶ ರಚನೆ, ಪೊಟೋ ಪ್ರೇಮ್ ವರ್ಡಿಂಗ್ಸ್ ರಚನೆ...ಹೀಗೆ ಕಲಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹೆಸರುಗಳಿಸಿರುವ ಯುವ ಸಾಹಿತಿ ಜಗದೀಶ್ ಅವರು ಮೂಲತಃ ಬೆಳ್ಳಾರೆಯವರು. 

ಸಾಹಿತ್ಯ ಲೋಕದಲ್ಲಿ ಅತೀ ಹೆಚ್ಚಾಗಿ ಎಲ್ಲರಿಗೂ ಹತ್ತಿರವಾಗಿರುವ ಇವರು, ಹತ್ತು ಹಲವು ಕನ್ನಡ, ತುಳು ಹಾಡುಗಳನ್ನು ರಚಿಸಿದ್ದಾರೆ. "ಪೊಕ್ಕಡೆ ಪೋ", "ಅಮ್ಮ", "ಪೊರ್ಲು ಎನ್ನ ಪೊಣ್ಣು," "ಚಕ್ಕುಲಿ" ಹಾಡುಗಳು ಸೇರಿದಂತೆ ಇವರ ಸಾಹಿತ್ಯದಲ್ಲಿ ಮೂಡಿ ಬಂದ ಅನೇಕ ಹಾಡುಗಳು ಕೇಳುಗರನ್ನು ಮನರಂಜಿಸಿವೆ. ಇತ್ತಿಚೆಗೆ ಬಿಡುಗಡೆಗೊಂಡ "ಪಜ್ಜೆದುನಿಪು" ಹಾಡುಗಳಂತು ಯುವ ಮನಸುಗಳನ್ನು ಪ್ರೀತಿಯ ಸಾಗರದಲ್ಲಿ ಈಜಾಡುವಂತೆ ಮಾಡಿದೆ.  ಸಾಹಿತ್ಯ ಲೋಕದಲ್ಲಿ ಜನರಿಗೆ ಚಿರಪರಿಚಿತರಾಗಿರುವ ಜಗದೀಶ್ ಬೆಳ್ಳಾರೆ ಅವರ ತುಳುವಿನ ಪೊಕ್ಕಡೆ ಪೋ, ಪೊರ್ಲು ಎನ್ನ ಪೊಣ್ಣು, ಚಕ್ಕುಲಿ, ಪಜ್ಜೆ ದುನಿಪು ಇತ್ಯಾದಿ ಹಾಗು ಕನ್ನಡದ ಅಮ್ಮ ಹೆಸರಿನ ಹಾಡುಗಳು ಯೂ ಟ್ಯೂಬ್‌ನಲ್ಲಿ ಬಿಡುಗಡೆಗೊಂಡು ಸಂಚಲನವನ್ನು ಸೃಷ್ಟಿಸಿವೆ. ಅಲ್ಲದೆ ಹಲವಾರು ಕಾರ್ಯಕ್ರಮ, ಪಂದ್ಯಾಟಗಳ ಶೀರ್ಷಿಕೆ ಗೀತೆಗೆ ಸಾಹಿತ್ಯ ನೀಡಿದ ಗರಿಮೆ ಜಗದೀಶ್ ಬೆಳ್ಳಾರೆಯವರದು.


ಇನ್ನು, ಸ್ವಾಮಿ ಶರಣಂ ಅಯ್ಯಪ್ಪ ಭಕ್ತಿ ಗೀತೆಗೆ ನಿರ್ದೇಶನ ಮಾಡಿರುವ ಯಶು ಸ್ನೇಹಗಿರಿ ಅವರ ಕಿರು ಪರಿಚಯ ಹೀಗಿದ್ದು, ಸಂಗೀತ ಕ್ಷೇತ್ರದಲ್ಲಿ ಹಲವಾರು ವೇದಿಕೆಗಳಲ್ಲಿ ರಸಮಂಜರಿ, ಸುಗಮ ಸಂಗೀತ, ಭಜನೆ, ರಿದಂ ಪ್ಯಾಡ್ ಪ್ಲೇ, ಕಿರುಚಿತ್ರ ಕ್ಕೆ ಹಿನ್ನೆಲೆ ಗಾಯನ, ನಾಟಕಗಳಿಗೆ ಹಿನ್ನೆಲೆ ಗಾಯನ, ಹಲವು ಧಾರ್ಮಿಕ ಕ್ಷೇತ್ರಗಳ ಭಕ್ತಿ ಧ್ವನಿ ಸುರುಳಿ ಕ್ಯಾಸೆಟ್‌ಗಳಿಗೆ ಸ್ವರ, ಆಲ್ಬಂ ವೀಡಿಯೋಗಳ "ಮೆಲುದನಿ" ಸುಗಮ ಸಂಗೀತ ತರಗತಿ ನಿರ್ವಹಣೆ ನಿರ್ದೇಶನದಲ್ಲಿ ಮಕ್ಕಳ ಭಜನಾ ತಂಡ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಲವಾರು ಕಡೆಗಳಲ್ಲಿ ಯಶು ಅವರು ನೀಡಿದ್ದಾರೆ. ಅಲ್ಲದೆ, ಕಿರುನಾಟಕ, ಕಿರು ಚಿತ್ರ(ಳ), ಅಲ್ಬಂ ಹಾಡುಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಯಶು ಸ್ನೇಹಗಿರಿ, 5 ವರ್ಷಗಳ ಕಾಲ ಚಿತ್ರಕಲೆಯಲ್ಲಿ ಪದವಿಯ ಜೊತೆಗೆ, 5 ವರ್ಷಗಳಿಂದ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸದ್ದಾರೆ. ಜೊತೆಗೆ ಮಕ್ಕಳಿಗೆ, ಸಂಗೀತ, ಚಿತ್ರಕಲೆ, ನಾಟಕ, ಬ್ಯಾಂಡ್, ತರಬೇತಿಯನ್ನು ಇವರು ನೀಡಿದ್ದಾರೆ. 

 

  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.