ಮಡಿಕೇರಿಯ ಆಸ್ಪತ್ರೆ ಗಳಲ್ಲಿ ರೋಗಿಗಳ ವಸ್ತುಗಳನ್ನು ಕದಿಯುವರ ವಿರುದ್ಧ ಕಠಿನ ಕ್ರಮಕ್ಕೆ ಸೂಚಿಸಲಾಗಿದೆ: ಅಪ್ಪಚು ರಂಜನ್

ಮಡಿಕೇರಿ:ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಗಳ ಮೊಬೈಲ್ ಕಳವು ಪ್ರಕರಣದ ಕುರಿತು ತನಿಖೆ ನಡೆದು 10 ರಿಂದ 12 ಮೊಬೈಲ್‌ಗಳು ಪತ್ತೆಯಾಗಿವೆ. ಅದನ್ನು ಅವುಗಳ ವಾರಸುದಾರರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಮೊಬೈಲ್ ಕಳೆದು ಕೊಂಡವರು ದೂರು ನೀಡಿರಲಿಲ್ಲ. ನಾನೇ ಒತ್ತಾಯ ಮಾಡಿ ಕೆಲವರಿಂದ ದೂರು ಕೊಡಿಸಿದ್ದೇನೆ. ಅದರಂತೆ ಪತ್ತೆ ಕಾರ್ಯವೂ ನಡೆದಿದೆ ಎಂದರು. ಕುಶಾಲನಗರದ ಬಾಲಕಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ತಾಯಿಯ ನೆನೆಪಿರುವ ಮೊಬೈಲ್ ಕಾಣೆಯಾಗಿರುವ ಬಗ್ಗೆ ಅಳಲು ತೋಡಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಡೀನ್ ಅವರನ್ನು ಕೂಡ ವಿಚಾರಿಸಿದ್ದೇನೆ. ಅವರ ಮೊಬೈಲ್ ಅನ್ನು ಮೃತರ ಬ್ಯಾಗ್ ಜೊತೆಯಲ್ಲಿಯೇ ನೀಡಲಾಗಿತ್ತು ಎಂಬ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯ ಹೊರಗೆ ಎಲ್ಲೋ ಮೊಬೈಲ್ ಕಳೆದಿರಬಹುದು ಎಂದು ಅಭಿಪ್ರಾಯಿಸಿದರಲ್ಲದೆ, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮುಂದೆ ಇಂತಹ ಘಟನೆಗಳು ಮರುಕಳುಹಿಸಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಆಸ್ಪತ್ರೆಯಲ್ಲಿ ಸೇಫ್ ಲಾಕರ್ ವ್ಯವಸ್ಥೆ, ಸೆಕ್ಯುರಿಟಿ ಸಿಬ್ಬಂದಿ ನೇಮಕಕ್ಕೆ ನಿರ್ದೇಶನ ನೀಡಲಾಗಿದೆ. ಇನ್ನು ಐಸಿಯು ವಾರ್ಡ್ ಗೆ ಸೋಂಕಿತರು ಸ್ಥಳಾಂತರವಾಗುವ ಸಂದರ್ಭ ಬೆಲೆ ಬಾಳುವ ಎಲ್ಲಾ ವಸ್ತುಗಳನ್ನು ಸೇಫ್ ಲಾಕರ್‌ಗೆ ಹಸ್ತಾಂತರಿಸಬೇಕು ಮತ್ತು ಅದಕ್ಕೆ ಟ್ಯಾಗ್ ಹಾಕಬೇಕೆಂದು ಸೂಚನೆ ನೀಡಲಾಗಿದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.
ಕೊಡಗಿನ ಮಡಿಕೇರಿಯಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳ ವಸ್ತುಗಳು ಕದಿಯುವ ಪ್ರಕರಣಗಳು ಹೆಚ್ಚಾದ ಸಂದರ್ಭದಲ್ಲಿ ಶಾಸಕರು ಹೇಳಿಕೆ ಆಡಳಿತ ವರ್ಗವನ್ನು ಚುರುಕು ಮುಟ್ಟಿಸಲು ಸಹಾಯಕವಾಗಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.