ಮೈಕ್ರೋಸಾಫ್ಟ್ ನೊಂದಿಗೆ ಜೊತೆಗೂಡಿ ರೈತರಿಗೆ ಸರ್ಕಾರ ಒದಗಿಸಲಿದೆ ನೂತನ ತಂತ್ರಜ್ಞಾನ.

FARMER

ನವದೆಹಲಿ: ವಿಶ್ವದ ದೈತ್ಯ ಸಾಫ್ಟ್ವೇರ್ ಕಂಪನಿ ಮೈಕ್ರೋಸಾಫ್ಟ್ ಕಾರ್ಪೊರೇಷನ್ ನ ಸಹಾಯ ಪಡೆದು ಕೇಂದ್ರ ಸರ್ಕಾರ ಬೆಳೆ ಪೂರ್ವ ನಿರ್ವಹಣೆಯ ತಂತ್ರಜ್ಞಾನದಲ್ಲಿ ವಿನೂತನ ಆವಿಷ್ಕಾರವನ್ನು ರೈತರಿಗೆ ಒದಗಿಸಲು ಮುಂದಾಗಿದೆ.
ಈ ಕುರಿತಂತೆ ಕೇಂದ್ರ ಸರಕಾರ ಮೈಕ್ರೋಸಾಫ್ಟ್ ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು ,ಕೆಲವೇ ತಿಂಗಳಿನಲ್ಲಿ ಆ ತಂತ್ರಜ್ಞಾನ ರೈತರಿಗೆ ತನ್ನ ಸೇವೆಯನ್ನು ನೀಡಲಿದೆ.
ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ಮೈಕ್ರೋಸಾಫ್ಟ್ ನೊಂದಿಗೆ ಒಡಂಬಡಿಕೆ ಸಹಿ ಹಾಕಿದ್ದಾರೆ.
ಪೈಲೆಟ್ ಯೋಜನೆಯ ಭಾಗವಾಗಿ ರಾಜಸ್ಥಾನ, ಉತ್ತರ ಪ್ರದೇಶ ,ಮಧ್ಯಪ್ರದೇಶ, ಹರಿಯಾಣ ,ಗುಜರಾತ್ ಆಂಧ್ರಪ್ರದೇಶದ 100 ಹಳ್ಳಿಗಳು, ಹತ್ತು ಜಿಲ್ಲೆಗಳು ಯೋಜನೆಯ ಮೊದಲ ಹಂತದಲ್ಲಿ ಪ್ರಯೋಜನ ಪಡೆಯಲಿವೆ.
ಕೇಂದ್ರ ಸರ್ಕಾರ ಸುಮಾರು 50 ಮಿಲಿಯನ್ ರೈತರಿಗೆ ಈ ತಂತ್ರಜ್ಞಾನವನ್ನು ತಲುಪಿಸುವ ಗುರಿ ಹೊಂದಿದೆ.

 

  • ನ್ಯೂಸ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.