ಖಾಸಗಿ ಬಸ್​​ಗಳ ಲೂಟಿಗೆ ಕಡಿವಾಣ ಹಾಕುವವರು ಯಾರು..?

ಬೆಂಗಳೂರು: ಶುಕ್ರವಾರ, ಶನಿವಾರ, ಭಾನುವಾರ ಸತತ ಮೂರು ದಿನಗಳ ರಜೆ ಇದೆ.  ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್​ಗಳು ಟಿಕೆಟ್ ದರವನ್ನು ಏರಿಕೆ ಮಾಡಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಜನಸಾಮಾನ್ಯರ ಗತಿಯೇನು? ಖಾಸಗಿ ಬಸ್​​ಗಳ ಲೂಟಿಗೆ ಕಡಿವಾಣ ಹಾಕುವವರು ಯಾರು? ಎಂಬ ಪ್ರಶ್ನೆ ಹುಟ್ಟಿದೆ. ಈಗಾಗಲೇ ಖಾಸಗಿ ಬಸ್​​ಗಳಲ್ಲಿ ದುಪ್ಪಟ್ಟು ಟಿಕೆಟ್ ದರ ವಸೂಲಿ ಮಾಡುತ್ತಿದ್ದಾರೆ. ಗೌರಿ ಗಣೇಶ  ಹಬ್ಬಕ್ಕೆ ಖಾಸಗಿ ಬಸ್ 'ದರ'ಬಾರ್ ಶುರುವಾಗಿದೆ.

ನಗರಗಳಿಗೆ ಖಾಸಗಿ ಬಸ್​ಗಳ ಟಿಕೆಟ್​ ದರ ಏರಿಕೆ.

       ನಗರ ಹಬ್ಬದ ದರ ಹಿಂದಿನ ದರ   

ನಗರ ಹಬ್ಬದ ದರ ಹಿಂದಿನ ದರ 
ಉಡುಪಿ 1,400 – 1,800 700 – 750
ಬೆಳಗಾವಿ 1,100 – 1, 300 800 – 900
ಧಾರವಾಡ 900 – 1,100 600 – 650
ಮಂಗಳೂರು 1,000 – 1,300 700 – 800
ಹುಬ್ಬಳ್ಳಿ 1,200 – 1,500 750 – 800
ಕಲಬುರ್ಗಿ 1,200 – 1,550 800 – 900

ಹಬ್ಬಗಳ ಸೀಸನ್​ನಲ್ಲಿ ಆಗ್ಗಿದ್ದಾಂಗೆ ಬಸ್​ ಟಿಕೆಟ್ ದರ ಏರಿಕೆ ಮಾಡುವುದು ಸಾಮಾನ್ಯ ಎಂಬುವಂತೆ ಆಗಿದೆ. ಈಗ ಗೌರಿ ಹಬ್ಬದ ಪ್ರಯುಕ್ತ ಹಣ್ಣು ಮತ್ತು ಹೂವಿನ ಬೆಲೆಯೂ ಗಗನಕ್ಕೇರುತ್ತಿದೆ. ದುಪ್ಪಟ್ಟು ಬೆಲೆ ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.