ಕೊತ್ತಂಬರಿ ಸೊಪ್ಪಿನ ಟೇಸ್ಟಿ ‘ಗ್ರೀನ್ ರೈಸ್’ ಟ್ರೈ ಮಾಡಿ..!

green rice

ಹೆಚ್ಚಾಗಿ ನಾವು ಲೆಮೆನ್ ರೈಸ್, ಎಗ್ ರೈಸ್, ಜೀರಾ ರೈಸ್‌ಗಳನ್ನು ಮನೆಯಲ್ಲೆ ಮಾಡಿ ಸಾಮಾನ್ಯವಾಗಿ ಬೆಳಗ್ಗಿನ ಬ್ರೇಕ್‌ಫಾಸ್ಟ್ ಆಗಿ ಸೇವಿಸುತ್ತೇವೆ. ಇವತ್ತು ನಾವು ಸಿಂಪಲ್ & ಟೇಸ್ಟಿ ‘ಗ್ರೀನ್ ರೈಸ್’ ಮಾಡೋದನ್ನು ತಿಳಿದುಕೊಳ್ಳೋಣ ಬನ್ನಿ.


‘ಗ್ರೀನ್ ರೈಸ್’ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
1.    ಕೊತ್ತಂಬರಿ ಸೊಪ್ಪು- ಒಂದು ಹಿಡಿ ಅಥವಾ 1 ಕಟ್ಟು
2.    ಹಸಿ ಮೆಣಸು-3 ರಿಂದ 4
3.    ಬೆಳ್ಳುಳ್ಳಿ – 2 ರಿಂದ 3
4.    ನೀರುಳ್ಳಿ- 1 1/2
5.    ಶುಂಠಿ- 1 ಸಣ್ಣ ತುಂಡು
6.    ಕಾಳು ಮೆಣಸು-10ರಿಂದ 15
7.    ಚಕ್ಕೆ & ಲವಂಗ-2 ರಿಂದ 3
8.    ಲಿಂಬೆ-ಅರ್ಧ
9.    ಬಾಸುಮತಿ ಅಕ್ಕಿ 2 ಕಪ್
10.    ಉಪ್ಪು- ರುಚಿಗೆ ತಕ್ಕಷ್ಟು

‘ಗ್ರೀನ್ ರೈಸ್’ ಮಾಡುವ ವಿಧಾನ
ಮೊದಲಿಗೆ ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಬೆಳ್ಳುಳ್ಳಿ, ಶುಂಠಿ, ಕಾಳು ಮೆಣಸು, ಚಕ್ಕೆ & ಲವಂಗ, ಲಿಂಬೆ ಹಾಗು ಉಪ್ಪನ್ನು ಸೇರಿಸಿ ಬೇಕಾಗುವಷ್ಟು ನೀರು ಸೇರಿಸಿ ರುಬ್ಬಿಟ್ಟುಕೊಳ್ಳಬೇಕು. ಹಾಗು ಬಾಸುಮತಿ ಅಕ್ಕಿಯನ್ನು ತೊಳೆದಿಟ್ಟುಕೊಳ್ಳಬೇಕು. ನಂತರ ಕುಕ್ಕರ್‌ನಲ್ಲಿ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಬಿಸಿಯಾಗಲು ಬಿಡಬೇಕು. ತುಪ್ಪ ಅಥವಾ ಎಣ್ಣೆ ಖಾದ ನಂತರ ಚಕ್ಕೆ & ಲವಂಗ ಜೊತೆಗೆ ಜೀರಿಗೆಯನ್ನು ಹಾಕಿ ಹುರಿಯಬೇಕು.

green rice

ನಂತರ ಈ ಮೊದಲೆ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಕುಕ್ಕರ್‌ಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಜೊತೆಗೆ ನೀರು ಹಾಕಿ ಕುದಿಸಬೇಕು. ಬಿಸಿಯಾದ ನಂತರ ತೊಳೆದಿಟ್ಟ ಬಾಸುಮತಿ ಅಕ್ಕಿಯನ್ನು ಕುಕ್ಕರ್‌ಗೆ ಹಾಕಿ ಚೆನ್ನಾಗಿ ಕಲಸಿ. ಬಳಿಕ ಕುಕ್ಕರ್‌ಗೆ ಮುಚ್ಚಳನ್ನು ಮುಚ್ಚಿ 2 ಶಿಳ್ಳೆ ಬಂದ ನಂತರ...ಕುಕ್ಕರ್ ಕೆಳಗಿಳಿಸಿ ಸ್ವಲ್ಪ ಬಿಸಿ ಆರಲು ಬಿಟ್ಟರೆ ಟೇಸ್ಟಿ ‘ಗ್ರೀನ್ ರೈಸ್’ ರೆಡಿ. ಈ ಗ್ರೀನ್‌ರೈಸನ್ನು ಸಲಾಡ್ ಜೊತೆ ಸೇವಿಸಬಹುದು. ಅಲ್ಲದೆ ಚಿಕನ್ ಕರಿ, ಮಟನ್ ಕರಿ ಜೊತೆಗೆ ಸವಿಯಲು ‘ಗ್ರೀನ್ ರೈಸ್’ ಸ್ವಾದಿಷ್ಟವಾಗಿರುತ್ತದೆ.

green rice
  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ
     

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.