ಕೊರೊನಾದಿಂದ ಮೃತಪಟ್ಟವರಿಗೆ ಅನುಕಂಪ ಸಹಾಯಧನ ಕುರಿತು ಸ್ಪಷ್ಟೀಕರಣ ನೀಡಿದ ಕೊಡಗು ಜಿಲ್ಲಾಧಿಕಾರಿ.

ಮಡಿಕೇರಿ: ಹಲವು ದಿನಗಳಿಂದ ಕೊರೊನಾದಿಂದ ಸಾವಿಗೀಡಾದ ಮಂದಿಗೆ ಅನುಕಂಪ ಧನಸಹಾಯ ಕುರಿತು ಕೊಡಗು ಜಿಲ್ಲಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ.
ಆ ಸ್ಪಷ್ಟಿಕರಣ ಈ ರೀತಿ ಇದೆ.
ಭಾರತ ಸರ್ಕಾರದ ಆದೇಶ ಸಂಖ್ಯೆ:33-4/2020-NDM-I ದಿನಾಂಕ: 14-03-2020  ರಂತೆ ಕೋವಿಡ್ ನಿಂದ ಮೃತಪಟ್ಟವರಿಗೆ ಅನುಕಂಪ ಭತ್ಯೆ ರೂ.4.00 ಲಕ್ಷ ಪರಿಹಾರ ಪಡೆಯಲು ಅವಕಾಶ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.  ಅದಕ್ಕೆ ಈ ಕೆಳಗಿಂತೆ    ಸ್ಪಷ್ಟೀರಣವನ್ನು ನೀಡಲಾಗಿದೆ. 

ಭಾರತ ಸರ್ಕಾರದ ಆದೇಶ ಸಂಖ್ಯೆ:33-4/2020-NDM-I ದಿನಾಂಕ: 14-03-2020 ರ ಆದೇಶವನ್ನು ಅದೇ ದಿನ ಭಾರತ ಸರ್ಕಾರವು ಮಾರ್ಪಡಿಸಿ ಆದೇಶ ಹೊರಡಿಸಿದ್ದು, ಮಾರ್ಪಡಿತ ಆದೇಶದಂತೆ ಕೋವಿಡ್ ನಿಂದ ಮೃತಪಟ್ಟವರಿಗೆ ಅನುಕಂಪ ಭತ್ಯೆ ಪಾವತಿಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.