ಕಾಲ್ನಡಿಗೆ ಮೂಲಕ ಜನರಿಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವು : ವಿವೇಕಾನಂದ ಎಚ್.ಕೆ

ಮುಲ್ಕಿ :ಕಾಲ್ನಡಿಗೆ ಮೂಲಕ ಜನರಿಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಜ್ಞಾನಬಿಕ್ಷಾ ಪಾದಯಾತ್ರಿ ವಿವೇಕಾನಂದ ಎಚ್.ಕೆ' ರವರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಸ್ವಾಗತಿಸಲಾಯಿತು.

ಕನ್ನಡ ಕಿರುತೆರೆ ನಟ, ನಿರ್ದೇಶಕರು, ಟಿವಿ ಜಾಹೀರಾತು ನಿರ್ಮಾಣಗಾರರು ಹಾಗೂ ಉತ್ತಮ ಲೇಖಕರೂ ಚಿಂತಕರೂ ಆದ ವಿವೇಕಾನಂದ ಎಚ್.ಕೆ' ಇವರು, ಮಾನವೀಯ ಮೌಲ್ಯಗಳ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಕುರಿತು ಕಳೆದ ನವೆಂಬರ್ ಒಂದರಂದು ಬೀದರ್ ಜಿಲ್ಲೆಯಿಂದ ಹೊರಟ  ಜ್ಞಾನ ಬಿಕ್ಷಾ ಪಾದಾಯಾತ್ರೆಯು ಹಲವಾರು ಜಿಲ್ಲೆ, ತಾಲೂಕು-ಕೇಂದ್ರಗಳನ್ನು ದಾಟಿ ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ತಲುಪಿದರು. ಈ ಸಂದರ್ಭ ಗಡಿಭಾಗದ ಮುಲ್ಕಿ ಪೇಟೆಯಲ್ಲಿ-ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಾಲಾರ್ಪಣೆ, ಶಾಲು ಹೊದಿಸಿ ಸ್ವಾಗತಿಸಲಾಯಿತು.

v/f

ಬೀದರ್ ಜಿಲ್ಲೆಯ ಗಡಿಗ್ರಾಮದಿಂದ ಪಾದಯಾತ್ರೆಯಲ್ಲಿ ಹೊರಟು ಪ್ರತಿ ದಿನ 30 ರಿಂದ 40 ಕಿ.ಮಿ. ಕಾಲ್ನಡಿಗೆಯಲ್ಲಿ ಸಾಗುವ ಇವರು ನಿರಂತರವಾಗಿ ಈತನಕ 280 ದಿನದಲ್ಲಿ 8500 ಕಿ.ಮಿ. ನಡಿಗೆಯಲ್ಲಿ  ಮಂದಿರ ಮಠಗಳು ಮತ್ತು ದಾರಿಯುದ್ದಕ್ಕೂ ಶಾಲಾ ಕಾಲೇಜುಗಳಲ್ಲಿ, ಯುವಕ ಯುವತಿ ಮಂಡಲಗಳಲ್ಲಿ, ಸಂಘ ಸಂಸ್ಥೆಗಳ ಆಶ್ರಯದಲ್ಲಿ, ಮನೆಯಂಗಳಗಳಲ್ಲಿ ನೂರಾರು ಭಾಷಣ, ಉಪನ್ಯಾಸಗಳನ್ನು ಕೂಡಾ ನೀಡಿದ್ದಾರೆ. ವಿಶೇಷ ಸ್ಥಳಗಳಿಗೆ ತೆರಳಿ ಮಾನವೀಯ ಮೌಲ್ಯಗಳನ್ನು ತುಂಬುವ ಮತ್ತು ಪ್ರಬುದ್ಧ ಸಮಾಜವನ್ನು ನಿರ್ಮಾಣ ಮಾಡುವ ಕುರಿತು ಜಾಗೃತಿಕಾರ್ಯಕ್ರಮ ನೀಡಿದ್ದಾರೆ.  ಅಲ್ಲದೆ, ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ  ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಜಾಗೃತಿ ಕಾರ್ಯಕ್ರಮ ನೀಡಲಿದ್ದಾರೆ ಮುಂದಿನ ಡಿಸೆಂಬರ್ ತಿಂಗಳಲ್ಲಿ ಒಟ್ಟು 12000 ಕಿ.ಮಿ. ಪಾದಯಾತ್ರೆ ಮಾಡುವ ಮೂಲಕ ನನ್ನ ಗುರಿ ಮುಗಿಸಲಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷೆ ನಂದ ಪಾಯಸ್ ಇವರು ಮಾಹಿತಿ ನೀಡಿದರು. 

ff

ಸಾಮಾಜಿಕ ಕಾರ್ಯಕರ್ತರ ಅದ್ದಿ ಬೊಳ್ಳೂರು, ಅಶೋಕ್ ಭಟ್, ಮಂಜುನಾಥ್ ಆರ್.ಕೆ,  ಗೃಹ ರಕ್ಷಕ ದಳ ಮುಲ್ಕಿ ಘಟಕದ ಮಾಜಿ ಅಧಿಕಾರಿ ಮನ್ಸೂರ್, ಶೈಲೇಶ್ ಮುಲ್ಕಿ. ಭೀಮಶಂಕರ್ ಹಾಗೂ ಮಲ್ಲಿಕಾರ್ಜುನ ಇವರುಗಳು ಉಪಸ್ಥಿತರಿದ್ದರು.

ವಿವೇಕಾನಂದ ಅವರೊಂದಿಗೆ ಹೆಜ್ಜೆ ಹಾಕುತ್ತಾ ಮುಲ್ಕಿ ಪೇಟೆಯಿಂದ ಕಾರ್ನಾಡು ರಸ್ತೆಯಾಗಿ ಸದಾಶಿವನಗರ ಲಿಂಗಪ್ಪಯ್ಯಕಾಡು ಎಂಬಲ್ಲಿಗೆ ತೆರಲಿ, ಅಲ್ಲಿನ ಚೆನ್ನಮಲ್ಲಿಕಾರ್ಜುನ ಮಠಕ್ಕೆ ಭೇಟಿ ನೀಡಿದರು, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 66 ಹಳೆಯಂಗಡಿ ಮೂಲಕ ಮಂಗಳೂರಿನತ್ತ ಯಾತ್ರೆ ಮುಂದುವರಿಸಿದರು.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.