ಕೈ ಮಗ್ಗದ ಉಡುಗೆಯಲ್ಲಿ ಸೌಂದರ್ಯ ಸ್ಪರ್ಧೆ- ಸ್ಪರ್ಧೆಯ ನಿಯಮಗಳು

ಪದ್ಮಶಾಲಿ ನೇಕಾರ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಉಡುಪಿ, ತಾಳಿಪಾಡಿ, ಶಿವಳ್ಳಿ, ಪಡುಪಣಂಬೂರು, ಬ್ರಹ್ಮಾವರ, ಮಂಗಳೂರು, ಬಸ್ರೂರು, ಮಿಜಾರು ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳು ಮತ್ತು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ, ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಉಡುಪಿ ಸೀರೆಗಳ ಪುನಶ್ಚೇತನ ಕ್ಕಾಗಿ ಕೈ ಮಗ್ಗದ ಉಡುಗೆಯಲ್ಲಿ ಸೌಂದರ್ಯ ಸ್ಪರ್ಧೆ ಮತ್ತು ಉಡುಪಿ ಸೀರೆಗಳ ಬ್ರ್ಯಾಂಡ್ ಅಂಬಾಸಡರ್ ಗಳ ಆಯ್ಕೆ 

ದಿನಾಂಕ: 6.8.2023, ರವಿವಾರ   ಬೆಳಗ್ಗೆ 10:00 ಘಂಟೆಯಿಂದ, ಉಡುಪಿಯ ಪೂರ್ಣಪ್ರಜ್ಞ ಅಡಿಟೋರಿಯಂನಲ್ಲಿ

truenews

 ಸ್ಪರ್ಧೆಯ ನಿಯಮಗಳು:
1. ಸ್ಪರ್ಧೆಯು ಮೂರು ವಿಭಾಗಗಳಲ್ಲಿ ಜರುಗಲಿದೆ.
ಅ) ವೈಯಕ್ತಿಕ - ಮಹಿಳೆಯರಿಗಾಗಿ 
ಆ) ದಂಪತಿಗಳಿಗಾಗಿ 
ಇ) ಮಹಿಳಾ ತಂಡಗಳಿಗಾಗಿ 


2. ಮಹಿಳಾ ಸ್ಪರ್ಧಿಗಳು ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ನೇಯಲ್ಪಡುವ ಕೈಮಗ್ಗದ ಕಾಟನ್ ಸೀರೆಗಳನ್ನು ಮಾತ್ರ ಧರಿಸಬಹುದಾಗಿದೆ. ಈ ಸೀರೆಗಳು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ, ಉಡುಪಿ ಮತ್ತು ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ, ಕಿನ್ನಿಗೋಳಿ ಇಲ್ಲಿ ಲಭ್ಯವಿರುತ್ತದೆ.


3. ದಂಪತಿ ಸ್ಪರ್ಧೆಯಲ್ಲಿ ಭಾಗವಹಿಸುವ ಪುರುಷರು ಕೈಮಗ್ಗದ ಧೋತಿ, ಕುರ್ತಾಗಳನ್ನು ಧರಿಸಬಹುದಾಗಿದೆ.

 
4. ಮಹಿಳಾ ತಂಡ ಸ್ಪರ್ಧೆಯಲ್ಲಿ ಕನಿಷ್ಠ 8 ಗರಿಷ್ಠ 12 ಮಹಿಳೆಯರು ಭಾಗವಹಿಸಬಹುದು.


5. ಸೀರೆಯ ಸೌಂದರ್ಯಕ್ಕೆ ಪೂರಕವಾಗಿ ಉಟ್ಟಿರುವ ಸಾಂಪ್ರದಾಯಿಕ ಶೈಲಿ, ಅದಕ್ಕೆ ಹೋಲಿಕೆಯಾಗುವ ಆಭರಣ, ಶೃಂಗಾರ ಮತ್ತು ವೇದಿಕೆಯಲ್ಲಿ ಪ್ರಸ್ತುತಿಯನ್ನು ಪರಿಗಣಿಸಿ ಅಂಕಗಳನ್ನು ನೀಡಲಾಗುವುದು.

 
6. ಆಯೋಜಕರು ಹಿನ್ನೆಲೆ ಸಂಗೀತ ಒದಗಿಸುವರು. ಆದರೆ, ತಮ್ಮದೇ ಆದ ಹಿನ್ನೆಲೆ ಸಂಗೀತ ಬೇಕಿದ್ದಲ್ಲಿ ಸ್ಪರ್ಧೆಗೆ ಮುಂಚಿತವಾಗಿ ಧ್ವನಿ ಮತ್ತು ಬೆಳಕು ಸಂಯೋಜಕರಿಗೆ ನೀಡಬೇಕು.


7. ಎಲ್ಲಾ ವಿಭಾಗಗಳಲ್ಲಿ ಎರಡು ಸುತ್ತಿನ ಸ್ಪರ್ಧೆ ಇರುತ್ತದೆ.


8. ವೈಯಕ್ತಿಕ ಸ್ಪರ್ಧೆ: ಮೊದಲಿನ ಸುತ್ತಿನಲ್ಲಿ ಅರ್ಧ ನಿಮಿಷದ ಕಾಲಾವಕಾಶ. ಎರಡನೇ ಸುತ್ತಿನಲ್ಲಿ ಎಂಟು ಸ್ಪರ್ಧಿಗಳನ್ನು ಒಟ್ಟಿಗೆ ವೇದಿಕೆಗೆ ಬಿಡಲಾಗುವುದು. ಅಲ್ಲಿ ಒಟ್ಟಂದದಲ್ಲಿ ಎರಡು ನಿಮಿಷಗಳ ಕಾಲಾವಕಾಶವಿರುತ್ತದೆ. ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಇತರರಿಗೆ ಸಮಾನ ಅವಕಾಶ ನೀಡದಿದ್ದರೆ ಋಣಾತ್ಮಕ ಅಂಕ ನೀಡಲಾಗುವುದು. 


9. ದಂಪತಿ ಸ್ಪರ್ಧೆ: ಮೊದಲ ಸುತ್ತಿನಲ್ಲಿ ಅರ್ಧ ನಿಮಿಷದ ಕಾಲಾವಕಾಶ. ಎರಡನೇ ಸುತ್ತಿನಲ್ಲಿ ಐದು ಜೋಡಿಗಳನ್ನು ಒಟ್ಟಿಗೆ ವೇದಿಕೆಗೆ ಬಿಡಲಾಗುವುದು. ಅಲ್ಲಿ ಐದು ಜೋಡಿಗಳಿಗೆ ಒಟ್ಟಂದದಲ್ಲಿ ಮೂರು ನಿಮಿಷಗಳ ಕಾಲಾವಕಾಶವಿರುತ್ತದೆ. ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಇತರರಿಗೆ ಸಮಾನ ಅವಕಾಶ ನೀಡದಿದ್ದರೆ ಋಣಾತ್ಮಕ ಅಂಕ ನೀಡಲಾಗುವುದು. 


10. ತಂಡ ಸ್ಪರ್ಧೆ: ಮೊದಲ ಸುತ್ತಿನಲ್ಲಿ ಎರಡು ನಿಮಿಷಗಳ ಕಾಲಾವಕಾಶ. ಎರಡನೇ ಸುತ್ತಿನಲ್ಲಿ ಎರಡು ನಿಮಿಷಗಳ ಕಾಲಾವಕಾಶದಲ್ಲಿ ಕೈಮಗ್ಗದ ಉಡುಪಿ ಸೀರೆಗಳ ಬಗ್ಗೆ ಎರಡು ವಾಕ್ಯಗಳ ಧನಾತ್ಮಕ ಸಂದೇಶವನ್ನು ನೀಡಬೇಕು.


11. ವೈಯಕ್ತಿಕ ಮತ್ತು ದಂಪತಿ ವಿಭಾಗಗಳ ವಿಜೇತರಿಗೆ ಪ್ರಥಮ ರೂ. 3,000 ದ್ವಿತೀಯ ರೂ. 2,000, ತೃತೀಯ ರೂ. 1,000 ಬಹುಮಾನ ನೀಡಲಾಗುವುದು.


12. ತಂಡ ಸ್ಪರ್ಧೆಯ ವಿಜೇತರಿಗೆ ಪ್ರಥಮ ರೂ. 5,000 ದ್ವಿತೀಯ ರೂ. 4,000, ತೃತೀಯ ರೂ. 3,000 ಬಹುಮಾನ ನೀಡಲಾಗುವುದು. 


13. ಭಾಗವಹಿಸುವ ಒಟ್ಟು ಮಹಿಳಾ ಸ್ಪರ್ಧಿಗಳಲ್ಲಿ 10 ಮಹಿಳೆಯರನ್ನು ಮುಂದಿನ ಒಂದು ವರ್ಷದ ಅವಧಿಗೆ ಉಡುಪಿ ಸೀರೆಗಳ ಬ್ರಾಂಡ್ ಅಂಬಾಸೆಡರ್ ಗಳಾಗಿ ಆರಿಸಲಾಗುವುದು ಮತ್ತು ಆಕರ್ಷಕ ಗಿಫ್ಟ್ ಹ್ಯಾಂಪರ್ ಗಳೊಂದಿಗೆ ಅಭಿನಂದಿಸಲಾಗುವುದು.
14. ಆಯೋಜಕರ ತೀರ್ಮಾನವೇ ಅಂತಿಮ.

ಹೆಚ್ಚಿನ ವಿವರಗಳಿಗೆ ಮತ್ತು ಹೆಸರು ನೋಂದಾಯಿಸಲು ಸಂಪರ್ಕಿಸಿ: 93563 99902 / 6361 952 365 / 73531 97229

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.