ಇದು ಗುಜರಾತ್ ಹತ್ಯಾಕಾಂಡವಲ್ಲ..!

ಸ್ಯಾಂಡಲ್‌ವುಡ್‌ನಲ್ಲಿ ಕೇವಲ ಟೈಟಲ್‌ನಿಂದಲೆ ಅಭಿಮಾನಿಗಳ ಗಮನ ಸೆಳೆದ ಗೋದ್ರಾ ಸಿನಿಮಾ ಕೂಡ ತನ್ನ ಮೊದಲ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು ಇದೇ ಜ 13ಕ್ಕೆ ಗೋದ್ರಾ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆ. ಇನ್ನು ಗೋದ್ರಾ ಮೋಷನ್ ಪೋಸ್ಟರ್ ವಿಡಿಯೋ ಇದೇ 13ರ ಸಂಜೆ ಸತೀಶ್ ಆಡಿಯೋ ಹೌಸ್ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ನಟ ನತೀಶ್ ನೀನಾಸಂ ಟ್ವೀಟ್ ಮಾಡಿದ್ದಾರೆ. 


ಗೋದ್ರಾ ಎಂದ ಕ್ಷಣ 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋದ್ರಾ ಹತ್ಯಾಕಾಂಡ ಕುರಿತ ಸಿನಿಮಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಆದ್ರೆ ಅಂದು ಗುಜರಾತ್‌ನಲ್ಲಿ ನಡೆದಿರುವ ಗೋದ್ರಾ ಹತ್ಯಾಕಾಂಡಕ್ಕೂ ಈ ಸಿನಿಮಾದ ಕಥೆಗೂ ಯಾವುದೇ ರೀತಿಯಾ ಸಂಬಂಧವಿಲ್ಲ ಅಂತಾ ನಿರ್ದೇಶಕ ನಂದೀಶ್ ತಿಳಿಸಿದ್ದಾರೆ. ಇನ್ನು ಸಿನಿಮಾ ಚಿತ್ರೀಕರಣ ಮುಗಿದಿದ್ದು ಸದ್ಯದಲ್ಲೆ ಸಿನಿಮಾ ತೆರೆಮೇಲೆ ಕಾಣಿಸಿಕೊಳ್ಳಲಿದೆ.

ಫಿಲಂ ಬ್ಯೂರೋ ಟ್ರೂ ನ್ಯೂಸ್ ಕನ್ನಡ
 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.