ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತೊಮ್ಮೆ ಏರಿಕೆ..!?

ನವದೆಹಲಿ: ಜನ ಸಾಮಾನ್ಯರ ಜೇಬಿಗೆ ಮತ್ತೊಮ್ಮೆ ಕತ್ತರಿ ಬಿದ್ದಿದೆ. ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತೊಮ್ಮೆ ಏರಿಕೆಯಾಗಿದ್ದು, ಸಿಲಿಂಡರ್ ಬೆಲೆ 1,000ರೂ. ದಾಟಿದೆ. ಅಲ್ಲದೇ ವಾಣಿಜ್ಯ ಎಲ್‍ಪಿಜಿ ಗ್ಯಾಸ್ ದರ ಕೂಡ ಏರಿಕೆಯಾಗಿದೆ.

ಗುರುವಾರದಿಂದ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 3 ರೂಪಾಯಿ 50 ಪೈಸೆ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆ 8 ರೂಪಾಯಿಯಷ್ಟಾಗಿದೆ. ಇಂದಿನಿಂದ ದೆಹಲಿ ಮತ್ತು ಮುಂಬೈಯಲ್ಲಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‌ನ ಬೆಲೆ 1,003 ರೂ. ಆಗಿದ್ದು, ಕೋಲ್ಕತ್ತಾದಲ್ಲಿ 1,029 ರೂ. ಮತ್ತು ಚೆನ್ನೈನಲ್ಲಿ 1,018.5 ರೂ. ಆಗಿದೆ. ಇದನ್ನೂ 

ಈ ಮುನ್ನ ಮೇ 7ರಂದು ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿತ್ತು. ಗೃಹಬಳಕೆಯ ಸಿಲಿಂಡರ್ ಜೊತೆಗೆ ವಾಣಿಜ್ಯ ಸಿಲಿಂಡರ್ ಕೂಡ ದುಬಾರಿಯಾಗಿತ್ತು.

  • ನ್ಯೂಸ್ ಬ್ಯೂರೋ  true news ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.