ಡಿಎಸ್‌ಪಿ ಆಗಿ ಅಧಿಕಾರ ಸ್ವೀಕರಿಸಿದ ಹಿಮಾ ದಾಸ್

ದಿಸ್ಪುರ್: ಭಾರತದ ಹೆಮ್ಮೆಯ ಅಂತರರಾಷ್ಟ್ರೀಯ ಅಥ್ಲೀಟ್ ಹಿಮಾ ದಾಸ್ ಅವರು ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಶುಕ್ರವಾರ ಡೆಪ್ಯುಟಿ ಸೂಪರಿಟೆಂಡೆಂಟ್ (ಡಿಎಸ್‌ಪಿ)ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

hima das


ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ಹಿಮಾ ದಾಸ್‌ಗೆ ನೇಮಕಪತ್ರ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಅಸ್ಸಾಂನ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಜರಿದ್ದರು.

hima das


ಈ ವೇಳೆ ಮಾತನಾಡಿದ ಹಿಮಾ ದಾಸ್, ಶಾಲೆಯ ದಿನಗಳಿಂದಲೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದೆ. ಅದೀಗ ಈಡೇರಿದೆ. ಆದರೆ, ಭಾರತ ದೇಶದ ಅಥ್ಲೆಟಿಕ್ಸ್ ತಂಡದಲ್ಲಿ ಮುಂದುವರಿಯುತ್ತೇನೆ. ಅಂತರರಾಷ್ಟ್ರೀಯ ಮತ್ತು ಒಲಿಂಪಿಕ್ ಕೂಟದಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುವುದು ನನ್ನ ಗುರಿ ಎಂದು ಹೇಳಿದ್ದಾರೆ. 

hima das
  • ಸ್ಪೋರ್ಟ್ಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.