ಚಂದನ್ ಶೆಟ್ಟಿಯಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ..!? 

chanda shetty

ಬೆಂಗಳೂರು: ಕನ್ನಡ ರ‍್ಯಾಪರ್ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಿವೇದಿತಾಳನ್ನು ವರಿಸದ ಬಳಿಕ ಅಷ್ಟಾಗಿ ಸುದ್ದಿಯಲ್ಲಿರಲಿಲ್ಲ. ಆದರೆ ಕೆಲ ದಿನಗಳ ಹಿಂದಷ್ಟೇ ಪ್ರತಿಷ್ಠಿತ ಯೂಟ್ಯೂಬ್ ಚಾನಲ್ ಒಂದರಲ್ಲಿ ಬಿಡುಗಡೆಗೊಂಡಿದ್ದ, ಚಂದನ್ ಶೆಟ್ಟಿ ಸಂಗೀತ ನಿರ್ದೇಶನದ ಜೊತೆಗೆ ಹಾಡು ಹಾಡಿ ಸ್ಟೆಪ್ ಹಾಕಿದ್ದ “ಕೋಲುಮಂಡೆ” ಹಾಡಿನ ಬಗ್ಗೆ ಇದೀಗ ಅಪಸ್ವರ ಕೇಳಿಬರುತ್ತಿದೆ. 

kolumande


ಹೌದು, ಜನಪದ ಮತ್ತು ಕೋಟ್ಯಾಂತರ ಭಕ್ತರ ಧಾರ್ಮಿಕ ಗೀತೆಯಾದ “ಕೋಲು ಮಂಡೆ” ಹಾಡನ್ನು, ತನಗೆ ಬೇಕಾದ ರೀತಿ ತಿರುಚಿ, ಅದರಲ್ಲೂ ಶಿವಶರಣೆ ಸಂಕಣ್ಣೆ ಅಥವಾ ಸಂಕಮ್ಮಳನ್ನು ಅಶ್ಲೀಲವಾಗಿ ಪ್ರದರ್ಶಿಸಿದ್ದಾರೆ ಎಂದು ಜನರು ಆಕ್ರೋಶಗೊಂಡಿದ್ದಾರೆ. ಈ ಹಾಡನ್ನು ಕೂಡಲೇ ಯೂಟ್ಯೂಬ್‌ನಿಂದ ತೆಗೆದು ಹಾಕಬೇಕೆಂದು ಹಳೆ ಮೈಸೂರು ಭಾಗದ ಜನರು ಚಂದನ್ ಶೆಟ್ಟಿಗೆ ತಾಕೀತು ಮಾಡಿದ್ದು, ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಚಂದನ್ ಶೆಟ್ಟಿ ಇದೀಗ ಕ್ಷಮೆ ಕೇಳಿದ್ದಾರೆ. 

kolumande


ಮಯೂರಿ ಉಪಾದ್ಯ ಪರಿಕಲ್ಪನೆಯ ಈ ವೀಡಿಯೋ ಸಾಂಗ್ ಆಧುನಿಕವಾಗಿ ಚಿತ್ರೀಕರಿಸಲಾಗಿದ್ದು, ಹಾಡಿನ ಕೊನೆಯಲ್ಲಿ ಮುಂದುವರೆಯಲಿದೆ ಎಂದು ನಮೂದಿಸಲಾಗಿದ್ದು, ಮುಂದಿನ ಭಾಗ ಇನ್ನು ಬರುವುದು ಅನುಮಾನವಾಗಿದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂಬುದನ್ನು ಮನಗಂಡ ಚಂದನ್ ಶೆಟ್ಟಿ, ನನ್ನಿಂದ ತಪ್ಪಾಗಿದೆ, ರಾಜ್ಯದ ಜನರ ಬಳಿ ಕ್ಷಮೆ ಕೇಳುತ್ತೇನೆ. ಜೊತೆಗೆ ವಿವಾದಕ್ಕೆ ಕಾರಣವಾಗಿರುವ ಹಾಡಿನ ತುಣುಕನ್ನು ಮರು ಚಿತ್ರೀಕರಣ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. 


ಚಂದನ್ ಶೆಟ್ಟಿ ತನ್ನ ಹಿಂದಿನ ವೀಡಿಯೋ ಹಾಡುಗಳಲ್ಲಿ, ಹೊಸ ಹೊಸ ನಟಿಯರಿಂದ ಮೈಮಾಟ ಪ್ರದರ್ಶಿಸಿ ಸಿಕ್ಕಾಪಟ್ಟೆ ಲೈಕು ಮತ್ತು ಪ್ರಸಿದ್ಧಿಯನ್ನುಗಳಿಸುತ್ತಿದ್ದರು. ಅದರಂತೆ “ಕೋಲುಮಂಡೆ” ಹಾಡಿನಲ್ಲೂ, ಸೂಕ್ಷ್ಮವಾಗಿ ಎಲ್ಲೂ ವಿವಾದಕ್ಕೆ ಕಾರಣವಾಗದಂತೆ ಹಾಡನ್ನು ಸಂಯೋಜನೆ ಮಾಡಿರುವ ಚಂದನ್ ಶೆಟ್ಟಿ, ಮಹದೇಶ್ವರನ ಫೊಟೋ ಹಿಡಿದುಕೊಂಡ ವೇಳೆ ಪಾದರಕ್ಷೆ ರಹಿತವಾಗಿ ಹೆಜ್ಜೆ ಹಾಕಿದ್ದರು. ಆದರೆ ಸಂಕಮ್ಮನ ಮೇಲೆ ನೀಲಯ್ಯನಿಗೆ ಅನುಮಾನ ಬರುವ ಸಂದರ್ಭದಲ್ಲಿ ಮಾತ್ರ ಸಂಕಮ್ಮನನ್ನು ಅಶ್ಲೀಲವಾಗಿ ಪ್ರದರ್ಶಿಸಿದ್ದರು ಚಂದನ್ ಶೆಟ್ಟಿ.

 

  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.