ಚಿತ್ರಾಪುರದಲ್ಲಿ ಮನಕಲಕುವ ಘಟನೆ..! ಪೊಲೀಸ್ ಕಮೀಷನರ್​ಗೆ ವಾಯ್ಸ್​ ಮೆಸೇಜ್ ಕಳುಹಿಸಿ ದಂಪತಿ ಆತ್ಮಹತ್ಯೆ..!

ಮಂಗಳೂರು: ಚಿತ್ರಾಪುರದ ರಹೇಜಾ ಅಪಾರ್ಟ್ಮೆಂಟ್​ನಲ್ಲಿ ಸೂಸೈಡ್ ಮಾಡಿಕೊಂಡಿರುವ ​ರಮೇಶ್ ಕುಮಾರ್​​​​, ಗುಣಾ ದಂಪತಿಗೆ ಒಂದು ವಾರದ ಹಿಂದೆ ಕೊವಿಡ್​ ಸೋಂಕು ಧೃಡಪಟ್ಟಿದ್ದು, ಆರೋಗ್ಯದ ಸ್ಥಿತಿ ಹದಗೆಟ್ಟ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ನಂತರ  ಡೆತ್​​ ನೋಟ್​, ವಾಯ್ಸ್​ ಮೆಸೇಜ್​ನಲ್ಲಿ ದಂಪತಿ ಈ ಬಗ್ಗೆ ಮಾಹಿತಿ ನೀಡಿದ್ದು, ಮಂಗಳೂರು ನಗರ ಪೊಲೀಸ್ ಕಮೀಷನರ್​, ಸ್ಥಳೀಯ ಹಿಂದೂ ಸಂಘಟನೆ ಮುಖಂಡರಿಗೂ ಮಾಹಿತಿ ನೀಡಿದ್ದಾರೆ. ಅಂತ್ಯಕ್ರಿಯೆಗೆ ಬಳಸಿಕೊಳ್ಳಿ ಅಂತಾ 1 ಲಕ್ಷ ಇಟ್ಟಿದ್ದು, ಜೊತೆಗೆ ಮನೆಯ ಉಪಕರಣ ಮಾರಿ ಬಂದ ಹಣವನ್ನು ಬಡವರಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

  • ಪತ್ನಿ ಬರೆದ ಡೆತ್‌ ನೋಟ್‌
ಡೆತ್​​​ನೋಟ್

ಕೊರೊನಾಗೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಮಂಗಳೂರು ಹೊರವಲಯ ಚಿತ್ರಾಪುರದಲ್ಲಿ ನಡೆದಿದೆ. ಸಾಯೋ ಮುನ್ನ 1 ಲಕ್ಷ ಹಣವಿಟ್ಟು ಅಂತ್ಯ ಸಂಸ್ಕಾರ ಮಾಡಲು ಬಳಸಿಕೊಳ್ಳಿ ಎಂದು ಡೆತ್​ನೋಟ್ನಲ್ಲಿ​ ಬರೆದಿದ್ದು ಕೋವಿಡ್​ ಸೋಂಕಿನ ಬಗ್ಗೆ ಮನ ನೊಂದಿದ್ದ ದಂಪತಿ ಮಂಗಳೂರು ನಗರ ಪೊಲೀಸ್ ಕಮೀಷನರ್​ಗೂ ವಾಯ್ಸ್​ ಮೆಸೇಜ್ ಕಳುಹಿಸಿ ಆತ್ಯಹತ್ಯೆ  ಮಾಡಿಕೊಂಡಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.