ಚಿಕ್ಕ ಜಾಗದಲ್ಲೂ ಮಾಡಬಹುದು ಚೊಕ್ಕ ಜೀವನ

ಎಲ್ಲರೂ ತಾವು ವಾಸ ಮಾಡುವ ಸ್ಥಳ ದೊಡ್ಡದಾಗಿರಬೇಕು, ಮನೆಯಲ್ಲಿ ಸಾಕಷ್ಟು ಸ್ಥಳಾವಕಾಶವಿರಬೇಕು ಎಂದೇ ಬಯಸುತ್ತಾರೆ. ಆದರೆ ಅದು ಎಲ್ಲರಿಗೆ ಸಾಧ್ಯವಾಗುವುದಿಲ್ಲ. ಕೆಲವರಿಗೆ ಮನೆಯಲ್ಲಿ ಅಧಿಕ ವಸ್ತುಗಳಿಂದ ಕೊಂಚವೂ ಸ್ಥಳವೇ ಇಲ್ಲದಂತೆ ಭಾಸವಾಗಬಹುದು ಅಥವಾ ಕಿರಿಕಿರಿ ಎನಿಸಬಹುದು. ದೊಡ್ಡ ಮನೆಯನ್ನು ಹೊಂದುವುದು ಒಳ್ಳೆಯದು ಎಂದು ಹಲವರು ಯೋಚಿಸುತ್ತಾರೆ.

home arrangements ideas

ಆದರೆ ಅತ್ಯಂತ ಸಣ್ಣ ಸ್ಥಳಗಳಲ್ಲಿಯೂ ಸೊಗಸಾಗಿ ಜೀವನನ್ನು ನಡೆಸಬಹುದು ಎಂದು ತಿಳಿದವರ ಸಂಖ್ಯೆ ಕಡಿಮೆ. ಕೆಲವೊಂದು ಊರಿನಲ್ಲಿ ಜನರು ಅತೀ ಸಣ್ಣ ಸ್ಥಳದಲ್ಲಿ  ತಮ್ಮ ಮನೆಯನ್ನು ಸುಂದರವಾಗಿಟ್ಟುಕೊಂಡು ಐಶಾರಾಮಿ ಜೀವನ ನಡೆಸುತ್ತಾರೆ.ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮುಂಬೈ. ಇಲ್ಲಿನ ಜನರು ಅತೀಚಿಕ್ಕ ಸ್ಥಳದಲ್ಲಿ ಜೀವನ ನಡೆಸುತ್ತಾರೆ. ಅವರ ಪ್ರಕಾರ ಕಡಿಮೆ ಸ್ಥಳ ಯಾವತ್ತೂ ಜಾಸ್ತಿ. ಇದು ಇಂದಿನ ಟ್ರೆಂಡ್ ಕೂಡ. ಕೆಲವೊಂದು ಸಲಹೆಗಳನ್ನು ಅನುಸರಿಸುವುದರಿಂದ ಇದರಲ್ಲಿಯೇ ಅತ್ಯಂತ ಚೊಕ್ಕ, ಆರಾಮದಾಯಕ ಜೀವನವನ್ನು ನಡೆಸಬಹುದು.

innovative ideas


ಅತ್ಯಂತ ಇಕ್ಕಟ್ಟಾದ ಜಾಗದಲ್ಲಿಯೂ ಉತ್ತಮ ಬದುಕನ್ನು ಸಾಗಿಸಲು ನಾವು ಮಾಡಬೇಕಾಗಿರುವ ಮೊದಲ ಕೆಲಸ ನಮಗೆ ಯಾವ ವಸ್ತುಗಳು ಅಗತ್ಯ ಮತ್ತು ಯಾವುದು ಅನಗತ್ಯ ಎಂಬುದನ್ನು ಗುರುತಿಸುವುದು. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿ ಮಾಡಬೇಕು. ಅನಾವಶ್ಯಕ ವಸ್ತುಗಳನ್ನು ಖರೀದಿಸಿ ಅದನ್ನು ಮಾಲೆಯಲ್ಲಿಡುವುದರಿಂದ ಮನೆಯು ಇಕ್ಕಟ್ಟಾಗಿಕಾಣುತ್ತದೆ. ಮನೆಯಲ್ಲಿ ಕಡಿಮೆ ಸ್ಥಳವಾಕಾಶವಿದ್ದರೆ ನಿಮ್ಮ ಕ್ರೀಯಾಶೀಲತೆಯನ್ನು ಉಪಯೋಗಿಸಿ ಉತ್ತಮವಾಗಿ ಆಂತರಿಕ ಗೃಹಾಲಂಕಾರ ಮಾಡಬಹುದು.

innovative ideas

ಉದಾಹರಣೆಗೆ ಇಂದು ಸಾಮಾನ್ಯವಾಗಿ ಎಲ್ಲಾ ವಸತಿ ನಿಲಯಗಳಲ್ಲಿ ಬಂಕ್ ಬೆಡ್‌ಗಳನ್ನು ಕಾಣಬಹುದು. ಇಂತಹ ಮನೆಗಳಲ್ಲಿ ಮಾಡಬಹುದಾದ ಉಪಾಯದ ಸಂಗತಿಯೆಂದರೆ ಮಂಚದ ಅಡಿಯ ಸಂಪೂರ್ಣ ಸ್ಥಳವನ್ನು ಸದುಪಯೋಗಪಡಿಸಿಕೊಳ್ಳುವುದು. ಅಲ್ಲದೆ ಅಡುಗೆ ಮನೆಗಳಲ್ಲಿ ಬಾಕರ್ ರಾಕ್‌ಗಳು, ಬಾಟಲ್ ಹೋಲ್ಡರ್‌ಗಳನ್ನು ವಿನ್ಯಾಸಗೊಳಿಸಿದರೆ ಮನೆಯೂ ಸೊಗಸಾಗಿ ಕಾಣಬಹುದು.

innovative ideas

ಒಳ ಕಾಪಾಟುಗಳನ್ನು ನಿರ್ಮಿಸಿ. ಇದು ಅಧಿಕ ವಸ್ತುಗಳನ್ನು ಚೊಕ್ಕವಾಗಿ ಜೋಡಿಸುವ ಇನ್ನೊಂದು ಮಾರ್ಗ. ಸರಳ ನವೀಕರಣ ನಿಮಗೆ ಇನ್ನಷ್ಟು ಹೆಚ್ಚಿನ ಸ್ಥಳವಾವಕಾಶವನ್ನು ಒದಗಿಸಬಲ್ಲದು. ಮನೆಯ ಗೋಡೆಗೆ ಅಂಟಿಕೊಂಡಂತೆ ಪುಸ್ತಕದ ಕಪಾಟು, ಬಟ್ಟೆಗಳನ್ನಿಡುವ ಕಪಾಟುಗಳನ್ನು ನಿರ್ಮಿಸುವುದು ಸುಲಭ ಮತ್ತು ಅತ್ಯಂತ ಆರಾಮದಾಯಕ.

innovative ideas


ಕಲೆ ಮತ್ತು ವಿನ್ಯಾಸ ನಿಮ್ಮ ಪುಟ್ಟ ಮನೆಯನ್ನು ಅದ್ಧುತಗೊಳಿಸಬಹುದು. ಯಾವುದೇ ರೂಪದದಲ್ಲಿ ಕಲೆಯು ಕಣ್ಣಿಗೆ ಆನಂದ ಮತ್ತು ಸಂತೋಷವನ್ನು ನೀಡಬಲ್ಲದು. ಸಾಂಪ್ರದಾಯಿಕ, ಸಮಕಾಲೀನ, ಕೈಯಿಂದ ಮಾಡಿದ ಕಲಾತ್ಮಕ ವಸ್ತುಗಳು ಮನೆಯ ಖಾಲಿ ಗೋಡೆಗಳ  ಮತ್ತು ಮನೆಯ ಸಣ್ಣ ಮೂಲೆಗಳನ್ನು ಚಂದಗಾಣಿಸಲು ಸಹಕಾರಿಯಾಗುತ್ತದೆ.

innovative ideas


ಮನೆಯ ಕೊಠಡಿ ಸುಂದರವಾಗಿ ಮತ್ತು ವಿಶಾಲವಾಗಿ ಕಾಣಲು ಮನೆಯ ಸೀಲಿಂಗ್‌ನ್ನು ಮನೆಯ ಗೋಡೆಗಳಿಗಿಂತ ಹೆಚ್ಚು ಗಾಢವಾದ ಬಣ್ಣಗಳಿಂದ ಪೈಂಟ್ ಮಾಡಿ. ಕೊಠಡಿಗಳಿಗೆ ವರ್ಣಮಯ ಹಾಗೂ ಟ್ರೆಂಡಿ ಚಿತ್ರಗಳನ್ನೂ ಬಳಸಬಹುದು. ವಸ್ತುಗಳನ್ನು ಜೋಡಿಸಲು ಬಟ್ಟೆ ಮತ್ತು ಪೆಟ್ಟಿಗೆಗಳನ್ನು ಬಳಸಿ. ಇದರಿಂದ ವಸ್ತುಗಳನ್ನು ಜೋಡಿಸುವುದು ಮಾತ್ರವಲ್ಲ ಮನೆಯೂ ಸ್ವಚ್ಛವಾಗಿ ಕಾಣುತ್ತದೆ.

innovative ideas


ನಿಮ್ಮ ಕೋಣೆಯನ್ನು ಇನ್ನಷ್ಟು ಅಸ್ತವ್ಯಸ್ತವಾಗಿಕಾಣುವಂತೆ ಮಾಡುವ ದಪ್ಪ ಮಾದರಿಯ ಕುಶನ್, ಕರ್ಟನ್‌ಗಳನ್ನು ಬಳಸಬೇಡಿ. ಅತೀಯಾದ ಪಿಠೋಪಕರಣಗಳು, ಅದರಲ್ಲೂ ನಿಮ್ಮ ಮನೆಗೆ ಸರಿ ಹೊಂದದವುಗಳನ್ನು ಖರೀದಿಸದಿರಿ. ಕೋಣೆಯು ಚಿಕ್ಕದಾಗಿದ್ದರೆ ಅತ್ಯಂತ ದೊಡ್ಡ ಕಲಾಕೃತಿಗಳನ್ನು ತೂಗುಹಾಕಬೇಡಿ. ಬಹುಪಯೋಗಿ ವಸ್ತುಗಳನ್ನೇ ಬಳಸಿ. ಕೊಠಡಿಗೆ ಸರಿಹೊಂದುವ ದೃಶ್ಯ ವೈಭವವನ್ನು ನೀಡಿ. ಹೀಗೆ ಮಾಡಿದ್ದಲಿ ನಿಮ್ಮ ಮನೆ ಸಣ್ಣದಾಗಿದ್ದರೂ ಅದು ಸುಂದರವಾಗಿ, ದೊಡ್ಡದಾಗಿಕಾಣುತ್ತದೆ.

innovative ideas
  • ಸುಲಭಾ.ಆರ್.ಭಟ್
  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.